8ರಿಂದ 13 ಮಂಗಳಾದೇವಿ ಜಾತ್ರೋತ್ಸವ

Contributed byvijaya.poojary@timesgroup.com|Vijaya Karnataka

ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್ 8 ರಿಂದ 13 ರವರೆಗೆ ನಡೆಯಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ರಥೋತ್ಸವ, ಬಲಿ, ಮಹಾಪೂಜೆ, ಮತ್ತು ಸಂಪ್ರೋಕ್ಷಣೆ ಜರುಗಲಿವೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಅನ್ನಸಂತರ್ಪಣೆ ಕೂಡ ಏರ್ಪಡಿಸಲಾಗಿದೆ. ಈ ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

mangalore grand celebration of mangaladevi jatra festival from 8th to 13th

ವಿಕ ಸುದ್ದಿಲೋಕ ಮಂಗಳೂರು

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿವರ್ಷಾವಧಿ ಜಾತ್ರಾ ಮಹೋತ್ಸವ ಮಾ.8ರಿಂದ ಮಾ.13ರವರೆಗೆ ಜರುಗಲಿದೆ.

ಮಾ.9ರಂದು 108 ತೆಂಗಿನಕಾಯಿ ಗಣಹೋಮ, ಮಾ.10ರಂದು ಮತ್ತು ಮಾ.13ರಂದು ಸೀರೆಗಳ ಏಲಂ, ಮಾ.12ರಂದು ಮಧ್ಯಾಹ್ನ 12ಕ್ಕೆ ರಥಾರೋಹಣ, ಸಂಜೆ 7ಕ್ಕೆ ರಥೋತ್ಸವ ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಶ್ರೀಭೂತ ಬಲಿ, ಕವಾಟ ಬಂಧನ ಶಯನ, ಮಾ.12ರಂದು ಶ್ರೀ ದೇವಿಯ ಶಯನಕ್ಕೆ ಹೂಗಳನ್ನು ತಂದು ಕೊಡುವುದು, ಮಾ.13ರಂದು ಬೆಳಗ್ಗೆ 6.30ಕ್ಕೆ ಕವಾಟೋದ್ಘಾಟನೆ, 9.30ಕ್ಕೆ ಹರಕೆಯ ತುಲಾಭಾರ ಸೇವೆ ನಡೆಯಲಿದೆ. 7ಕ್ಕೆ ಬಲಿ ಹೊರಟು ಅವಭೃತ ಸ್ನಾನ, ಧ್ವಜಾರೋಹಣ, ಮಾ.14ರಂದು ಸಂಪ್ರೋಕ್ಷಣೆ, ರಾತ್ರಿ 8.30ಕ್ಕೆ ಪರಿವಾರ ದೈವಗಳಿಗೆ ನೇಮೋತ್ಸವ ಜರುಗಲಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಜಾತ್ರೋತ್ಸವ ಸಮಯದಲ್ಲಿಪ್ರತಿದಿನ ಮಧ್ಯಾಹ್ನದ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಂ. ಅರುಣ್ ಐತಾಳ್ ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.

3ಎಂಎನ್ ಜಿ-ಮಂಗಳಾದೇವಿ ದೇವಳ