ಕಾರ್ಮಿಕ ಸಂಹಿತೆ ಜಾರಿಗೆ ಆಕ್ಷೇಪಣೆ ಸಲ್ಲಿಕೆ
ವಿಕ ಸುದ್ದಿಲೋಕ ಕೋಲಾರ
ರಾಜ್ಯ ಸರಕಾರವು ಜನವರಿ 23ರಂದು ಪ್ರಕಟಿಸಿರುವ 4 ಕಾರ್ಮಿಕ ಸಂಹಿತೆಗಳ ಕರಡು ನಿಯಮಾವಳಿ ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿಕಾರ್ಮಿಕ ಸಂಘಟನೆಗಳಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಾರ್ಮಿಕ ಅಧಿಕಾರಿ ವರಲಕ್ಷಿತ್ರ್ಮ ಮೂಲಕ ಆಯುಕ್ತರಿಗೆ ಆಕ್ಷೇಪಣೆಗಳನ್ನು ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯಸ್ಥಳ ಪರಿಸ್ಥಿತಿಗಳ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ವೇತನ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ ಸೇರಿದಂತೆ ಕಾರ್ಮಿಕ ಸಂಹಿತೆಗಳು ದೇಶದ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಗೆ ವಿರುದ್ಧವಾಗಿದೆ. ರಾಜ್ಯ ಸರಕಾರದ ಅಧಿಕಾರ ವ್ಯಾಪ್ತಿಯಲ್ಲಿಕೇಂದ್ರ ಸರಕಾರವು ಅನಗತ್ಯವಾಗಿ ಮೂಗು ತೂರಿಸಲು ಅವಕಾಶ ಕಲ್ಪಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಹಿತೆಗಳು ಮತ್ತು ಈ ಕುರಿತ ಕರಡು ನಿಯಮಾವಳಿಗಳನ್ನು ಕನ್ನಡದಲ್ಲಿಪ್ರಕಟಿಸದೇ ಇರುವುದು ಖಂಡನೀಯ. ಕೂಡಲೇ ಕನ್ನಡದಲ್ಲಿಪ್ರಕಟಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಉಪಾಧ್ಯಕ್ಷ ಎ.ಆರ್ .ಬಾಬು ಮಾತನಾಡಿ, ಕಾರ್ಮಿಕರನ್ನು ತೀವ್ರ ರೀತಿಯಲ್ಲಿಶೋಷಣೆ ಮಾಡಲು ಅವಕಾಶ ಕಲ್ಪಿಸುವ ಕಾರ್ಮಿಕ ಸಂಹಿತೆಗಳನ್ನು ವಾಪಸು ಪಡೆಯಬೇಕು. ಇವುಗಳನ್ನು ಜಾರಿ ಮಾಡಲು ಪ್ರಯತ್ನಿಸಿದರೇ ತೀವ್ರ ರೀತಿಯ ಹೋರಾಟಗಳನ್ನು ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿಸಿಐಟಿಯು, ಅಂಗನವಾಡಿ ನೌಕರರ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಪೌಲರ್ ವೆಸ್ಟ್ರಾಫ್ ಕಾರ್ಮಿಕರ ಸಂಘ, ಮಿಟ್ಸುಬಿಷಿ ಕಾರ್ಮಿಕರ ಸಂಘ, ವಿಎಸ್ ಟಿ ಕಾರ್ಮಿಕರ ಸಂಘ, ಬೆಮೆಲ್ ನ ಹೊರ ಗುತ್ತಿಗೆ ಕಾರ್ಮಿಕರ ಸಂಘಗಳು, ಸ್ಕಾನಿಯಾ ಕಾರ್ಮಿಕರ ಸಂಘ, ಐಟಿಸಿ ಕಾರ್ಮಿಕರ ಸಂಘಗಳು ಆಕ್ಷೇಪಣೆಗಳನ್ನು ಸಲ್ಲಿಸಿದವು.
ಈ ಸಂದರ್ಭದಲ್ಲಿಸಿಐಟಿಯು ಜಿಲ್ಲಾಖಜಾಂಚಿ ಹೆಚ್ .ಬಿ.ಕೃಷ್ಣಪ್ಪ, ಉಪಾಧ್ಯಕ್ಷ ತಂಗರಾಜ್ , ಕಾರ್ಯದರ್ಶಿ ಎಂ.ಭೀಮರಾಜ್ , ಶಿವಾನಂದ್ , ವೀರಭದ್ರ, ಅಮರನಾರಾಯಣ, ಬಿ.ಎಲ್ .ಕೇಶವರಾವ್ , ಲಿಯೋ ರಾಜ, ಸುಜಾತ, ವಸಂತ, ಶಿವಕುಮಾರ್ , ದಿವಾಕರ್ , ವಿ.ಹರೀಶ್ , ವೇಣುಗೋಪಾಲ್ , ಮಲ್ಲಿಕಾರ್ಜುನ್ ಮುಂತಾದವರು ಇದ್ದರು.
=
ಫೋಟೋಕ್ಯಾಪ್ಷನ್ : ರಾಜ್ಯ ಸರಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ಕರಡು ನಿಯಮಾವಳಿಗೆ ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಾರ್ಮಿಕ ಸಂಘಟನೆಗಳಿಂದ ಕಾರ್ಮಿಕ ಅಧಿಕಾರಿ ವರಲಕ್ಷಿತ್ರ್ಮ ಮೂಲಕ ಆಯುಕ್ತರಿಗೆ ಆಕ್ಷೇಪಣೆಗಳನ್ನು ಸಲ್ಲಿಸಿದರು. (3ಕೆಪಿಎಚ್ 1)

