ಅಫಜಲಪುರದಿಂದ ಬೆಂಗಳೂರಿಗೆ ಅಮೋಘವರ್ಷ ಬಸ್ ಪ್ರಾರಂಭ

Contributed byskchoudhari121@gmail.com|Vijaya Karnataka

ಅಫಜಲಪುರದಿಂದ ಬೆಂಗಳೂರಿಗೆ ಅಮೋಘವರ್ಷ ನಾನ್‌ ಎ.ಸಿ.ಸ್ಲೀಪರ್‌ ಬಸ್‌ ಸೇವೆ ಆರಂಭವಾಗಿದೆ. ಸ್ಥಳೀಯರ ಬಹುದಿನಗಳ ಬೇಡಿಕೆ ಈಡೇರಿದೆ. ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್‌ ಅವರು ಬಸ್‌ಗೆ ಚಾಲನೆ ನೀಡಿದರು. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಮುಂದಿನ 4 ತಿಂಗಳಲ್ಲಿ 56 ಹೊಸ ಬಸ್‌ಗಳು ಬರಲಿದ್ದು, ಅಫಜಲಪುರಕ್ಕೆ ಹೊಸ ಬಸ್‌ ನೀಡಲಾಗುವುದು. ಉಜ್ಜಯನಿಗೂ ಶೀಘ್ರವೇ ಬಸ್‌ ಪ್ರಾರಂಭವಾಗಲಿದೆ.

launch of non ac sleeper bus from afzalpur to bangalore

ವಿಕ ಸುದ್ದಿಲೋಕ ಅಫಜಲಪುರ ಸುಮಾರು ವರ್ಷಗಳಿಂದ ಅಫಜಲಪುರ ಪಟ್ಟಣದಿಂದ ಬೆಂಗಳೂರಿಗೆ ಸ್ಲೀಪರ್ ಬಸ್ ಸೇವೆ ಪ್ರಾರಂಭ ಮಾಡಬೇಕೆಂದು ಸ್ಥಳೀಯರ ಬೇಡಿಕೆ ಸಾಕಾರಗೊಂಡಿದೆ. ಪಕ್ಕದ ಸಿಂದಗಿ ಶಾಸಕರ ಜತೆ ಚರ್ಚಿಸಿ ಅಲ್ಲಿಂದ ಅಫಜಲಪುರ ಪಟ್ಟಣದವರಿಗೆ ವಿಸ್ತರಣೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್ ತಿಳಿಸಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗಕ್ಕೆ-2 ವ್ಯಾಪ್ತಿಯಲ್ಲಿಬರುವ ಅಫಜಲಪುರ ಘಟಕದಿಂದ ಬೆಂಗಳೂರಿಗೆ ತೆರಳುವ ಅಮೋಘವರ್ಷ ನಾನ್ ಎ.ಸಿ.ಸ್ಲೀಪರ್ ಬಸ್ ಗೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿಸಧಿರಧಿಕಾರಿ ಬಸ್ ಗಳಲ್ಲಿಪ್ರಯಾಣ ಮಾಡಬೇಕು. ಅಂದಾಗ ಮಾತ್ರ ಇಂತಹ ಹತ್ತಾರು ಹೊಸ ಮಾರ್ಗಗಳು ಪ್ರಾರಂಭ ಮಾಡಲು ಅನುಕೂಲವಾಗಲಿದೆ. ಅಲ್ಲದೇ ಖಾಸಗಿ ವಾಹನಗಳಲ್ಲಿಜನಸಂಖ್ಯೆ ಆಧಾರದಲ್ಲಿಬೆಲೆ ಏರಿಳಿತ ಮಾಡುತ್ತಾರೆ. ಆದರೆ ಸಧಿರಧಿಕಾರಿ ಬಸ್ ಗಳಲ್ಲಿಯಾವತ್ತು ಕೂಡ ಒಂದೇ ದರ ನಿಗದಿಪಡಿಸಿರುತ್ತಾರೆ. ಇನ್ನೂ 4 ತಿಂಗಳಲ್ಲಿಹೊಸದಾಗಿ 56 ಬಸ್ ಗಳು ಬರಲಿವೆ. ಆ ಸಂದರ್ಭದಲ್ಲೂಅಫಜಲಪುರಕ್ಕೆ ಹೊಸ ಬಸ್ ನೀಡಲಾಗುವುದು. ಅದಲ್ಲದೇ ಪಟ್ಟಣದಿಂದ ಉಜ್ಜಯನಿಗೆ ಹೊಸದಾಗಿ ಶೀಘ್ರವೇ ಬಸ್ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು. ತಧಿಹಧಿಸೀಧಿಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಕೆಕೆಆರ್ ಟಿಸಿ ಅಧ್ಯಕ್ಷರಾಗಿ ಅರುಣಕುಮಾರ ಪಾಟೀಲ್ ಅಧಿಕಾರವಹಿಸಿಕೊಂಡ ನಂತರ ಅಫಜಲಪುರದಿಂದ ಶ್ರೀಶೈಲಕ್ಕೆ, ಈಗ ಅಮೋಘವರ್ಷ ಬಸ್ ಅಫಜಲಪುರದಿಂದ ಬೆಂಗಳೂರಿಗೆ ಪ್ರಾರಂಭ ಮಾಡಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿಅಫಜಲಪುರ ಮಾರ್ಗವಾಗಿ ತೀರ್ಥಕ್ಷೇತ್ರಗಳಿಗೆ ಸೇರಿ ಅನ್ಯ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಫಕ್ರೂದ್ದಿನ್ , ಸಾರಿಗೆ ಘಟಕ ವ್ಯವಸ್ಥಾಪಕ ಎ.ವಿ.ಭೋವಿ, ಮುಖಂಡರಾದ ಸಂಗ್ರಾಮಗೌಡ ಪಾಟೀಲ…, ಶರಣು ಕುಂಬಾರ, ಚಂದ್ರಶೇಖರ ಕರಜಗಿ, ಎಸ್ .ಎಸ್ .ಪಾಟೀಲ…, ಕಲ್ಯಾಣಿ ಸಿಂದಗೇರಿ, ಬಸಣ್ಣ ಗುಣಾರಿ, ಮಹಾನಿಂಗ ಅಂಗಡಿ, ಪ್ರೀತಮ್ ಚೌವ್ಹಾಣ…, ಗೌತಮ್ಮ ಸಕ್ಕರಗಿ, ಬಸವರಾಜ ಜಮಾದಾರ, ಇರ್ಫಾನ್ ಜಮಾದಾರ, ಶಕೀಲ್ ವಡಾಳೆ, ಬಿಸ್ಮಿಲ್ಲಾಶೇಖ, ಅಂಬರೀಶ ಬುರಲಿ, ವಿಶ್ವನಾಥ ಮಲಘಾಣ, ಶಾಂತು ಪಾಟೀಲ್ ಸೊನ್ನ, ಸಂತೋಷ ಮನ್ಮಿ, ನಾಗೇಶ ಬಿಲ್ಲಾಡ, ಅಜರ ಮಣೂರ, ಬಸಯ್ಯ ನಂದಿಕೋಲ ಹಾಗೂ ಸಾರಿಗೆ ನಿಗಮ ಸಿಬ್ಬಂದಿ, ಶಾರದಾ, ಬೈಲಪ್ಪ ಇಧಿದ್ದಧಿರು.