ದುರ್ವಾಸನೆಯಿಂದ ಶಾಶ್ವತ ಪರಿಹಾರದ ನಿರೀಕ್ಷೆ | ಪ್ರದಕ್ಷಿಣಾಪಥಕ್ಕೆ ಬೇಕು ಶಾಶ್ವತ ಚಪ್ಪರ
ಭಾಗ್ಯಶ್ರೀ ಸಿ. ಕುಂಬಳೆ
್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ
ಕಾಸರಗೋಡು ಜಿಲ್ಲೆಯ ಕುಂಬಳೆ ನಗರದಿಂದ ಸುಮಾರು 5ಕಿ.ಮೀ ಪೂರ್ವಭಾಗದಲ್ಲಿಸರೋವರ ಕ್ಷೇತ್ರವೆಂದೇ ಪ್ರಸಿದ್ಧವಾದ ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರವಿದೆ. ಪ್ರಸಿದ್ಧ ಪುಣ್ಯಕ್ಷೇತ್ರ ಮಾತ್ರವಲ್ಲದೇ ಸುಂದರ ಪ್ರವಾಸಿ ತಾಣವಾಗಿದ್ದರೂ ಕೆಲ ಸಮಸ್ಯೆಗಳು ಕ್ಷೇತ್ರದ ಅಭಿವೃದ್ಧಿಗೆ ಅಡಚಣೆಯಾಗಿವೆ.
ಕ್ಷೇತ್ರ ಪರಿಸರದ ಸುತ್ತಲೂ ಕಾರ್ಖಾನೆಗಳು ಕಾರ್ಯವೆಸಗುತ್ತಿವೆ. ತ್ಯಾಜ್ಯ ನಿರ್ಮೂಲನಾ ಕಾರ್ಖಾನೆಯೊಂದಿದ್ದು, ಅದರಿಂದ ಹೊರಸೂಸುವ ದುರ್ಗಂಧದಿಂದ ಹಿಂಸೆಯಾಗುತ್ತಿದೆ ಎಂದು ಕ್ಷೇತ್ರ ಸಿಬ್ಬಂದಿ ಹಾಗೂ ಪರಿಸರ ವಾಸಿಗಳು ದೂರುತ್ತಿದ್ದಾರೆ. ಈ ಸಂಬಂಧ ಈಗಾಗಲೇ ಹಲವಾರು ದೂರುಗಳನ್ನು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟವರಿಗೆ ನೀಡಿದ್ದರೂ ಪ್ರಯೋಜನವಾಗಿಲ್ಲ. ಇದರ ವಿರುದ್ಧ ಕ್ರಿಯಾಸಮಿತಿ ರಚಿಸಿ ಹಲವಾರು ಬಾರಿ ಹೋರಾಟ ನಡೆಸಿದ್ದು ತೀವ್ರ ಹೋರಾಟ ನಡೆದ ಸಂದರ್ಭಗಳಲ್ಲಿ, ಕೋರ್ಟ್ ತಡೆಯಾಜ್ಞೆ ಬಂದ ಕೆಲವು ದಿನಗಳ ಕಾಲ ದುರ್ಗಂಧದಿಂದ ಮುಕ್ತಿ ದೊರೆಯುತ್ತಿದೆಯೇ ಹೊರತು ಉಳಿದ ದಿನಗಳಲ್ಲಿಕಾರ್ಖಾನೆ ಕಾರ್ಯಾಚರಣೆ ಪ್ರವಾಸಿಗರಿಗೂ ಹಿಂಸೆ ಮೂಡಿಸುತ್ತಿದೆ. ದುರ್ಗಂಧದ ಪರಿಣಾಮ ಕ್ಷೇತ್ರದ ಸಿಬ್ಬಂದಿ ಹಾಗೂ ಭಕ್ತರನ್ನು ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ.
ಮೊಸಳೆಯೇ ಆಕರ್ಷಣೆ: ಸರೋವರದಲ್ಲಿರುವ ಬಬಿಯಾ ಹೆಸರಿನ ಮೊಸಳೆಯೇ ಭಕ್ತರಿಗೆ ಖುಷಿ ಕೊಡುತ್ತದೆ. ನೈವೇದ್ಯವನ್ನೇ ತಿಂದು ಬದುಕುವ ಈ ಮೊಸಳೆ ನಿರುಪದ್ರವಕಾರಿಯಾಗಿದ್ದು, ಶಾಕಾಹಾರಿಯಾಗಿದೆ.
ಸರ್ಪಕಟ್ಟು ಶೈಲಿಯ ಸುದೀರ್ಘವಾದ ಗೋಡೆಯ ನಡುವೆ ಇರುವ ಮಹಾ ದ್ವಾರದ ಮೂಲಕ ಒಳ ಪ್ರವೇಶಿಸುವವರಿಗೆ ಇತರ ಮಹಾಕ್ಷೇತ್ರಗಳಲ್ಲಿರುವಂತಹ ಧ್ವಜಸ್ತಂಭ ಕಾಣಸಿಗದಿದ್ದರೂ ಪ್ರಧಾನ ಬಲಿಕಲ್ಲುಕಾಣಿಸುತ್ತದೆ. ಇತರ ಕ್ಷೇತ್ರಗಳಲ್ಲಿಕಾಣುವಂತಹ ಒಳಾಂಗಣ, ಒಳಗಿನ ಗೋಪುರಗಳಿಗೆ ಭಿನ್ನವಾಗಿ ವಿಶಾಲವಾಗಿ ಹರಡಿಕೊಂಡಿರುವ ವ್ಯವಸ್ಥೆಗಳಿದ್ದು, ಬಲಿಕಲ್ಲಿನಿಂದ ಮುಂದಕ್ಕೆ ಇಳಿದು ಸಾಗುವುದಕ್ಕೆ ಸೋಪಾನಗಳು ಕಾಣಿಸುತ್ತವೆ. ಕೆಳಗಿಳಿದು ಬರುವ ಭಕ್ತರು ನೇರವಾಗಿ ಮೂಡುಗೋಪುರಕ್ಕೆ ತಲುಪಿದಾಕ್ಷಣ ಕ್ಷೇತ್ರದಲ್ಲಿವಿರಾಜಮಾನನಾದ ಸಾಕ್ಷಾತ್ ಅನಂತಪದ್ಮನಾಭನ ದಿವ್ಯದರ್ಶನವಾಗುತ್ತದೆ. ನಮಸ್ಕಾರ ಮಂಟಪದ ಚಾವಣಿಯಲ್ಲಿಮಹಾನ್ ಸಾಧುಸಂತರ, ಋುಷಿವರ್ಯರ ತೈಲವರ್ಣದ ಚಿತ್ರಗಳಿದ್ದು, ಆಕರ್ಷಣೀಯವಾಗಿದೆ.
ಪ್ರದಕ್ಷಿಣಾಪಥಕ್ಕೆ ಶಾಶ್ವತ ಚಪ್ಪರ ಬೇಕು: ಪ್ರತಿನಿತ್ಯ ಕ್ಷೇತ್ರಕ್ಕೆ ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ರಜಾ ದಿನಗಳಲ್ಲಿಸಂಖ್ಯೆ ಸಾವಿರ ದಾಟುತ್ತದೆ. ಪ್ರವಾಸಿಗರ ಅನುಕೂಲಕ್ಕಾಗಿ ಉತ್ತಮ ಶೌಚಾಲಯ, ಸ್ನಾನಗೃಹ, ಅತಿಥಿ ಗೃಹವಿದ್ದು, ಶಾಖಾಹಾರಿ ಉಪಾಹಾರ ಗೃಹವೂ ಇದೆ. ಮಧ್ಯಾಹ್ನ ಕ್ಷೇತ್ರದಲ್ಲಿಊಟದ ವ್ಯವಸ್ಥೆಯೂ ಇದೆ. ಕ್ಷೇತ್ರಕ್ಕೆ ಪ್ರದಕ್ಷಿಣೆ ಬರುವ ಭಕ್ತಾದಿಗಳಿಗೆ ಪ್ರದಕ್ಷಿಣಾ ಪಥವಿದೆಯಾದರೂ ಸುಡುಬಿಸಿಲು, ಮಳೆಗಾಲದಲ್ಲಿಮಳೆಯಿಂದ ರಕ್ಷಣೆ ಪಡೆಯಲು ಶಾಶ್ವತ ಚಪ್ಪರ ಅಗತ್ಯ ಬೇಕಾಗಿದೆ. ಮಳೆಗಾಲದಲ್ಲೂಹಾವಸೆ ತುಂಬಿ ಜಾರುವುದರಿಂದ ನಡೆದಾಡಲು ಕಷ್ಟವಾಗುತ್ತಿದೆ. ಶಾಶ್ವತ ಚಪ್ಪರ ಹಾಗೂ ಪ್ರದಕ್ಷಿಣಾ ಪಥದಲ್ಲಿಇಂಟರ್ ಲಾಕ್ ನಿರ್ಮಿಸಲು ಸುಮಾರು 30ಲಕ್ಷಕ್ಕೂ ಅಧಿಕ ಖರ್ಚು ತಗಲುತ್ತದೆ. ಯೋಜನೆ ಸಾಕಾರಗೊಳ್ಳಲು ಸರಕಾರದ ಮೊರೆ ಹೊಕ್ಕರೂ ಸರಕಾರದಿಂದ ಯಾವುದೇ ಅನುದಾನ ಸಿಗುವ ನಿರೀಕ್ಷೆ ಇಲ್ಲ. ದಾನಿಗಳು ಮುಂದೆ ಬಂದರೆ ಯೋಜನೆ ಸಾಕಾರಗೊಳ್ಳಬಹುದು.
ಕೋಟ್
ಪರಿಸರದಲ್ಲಿತ್ಯಾಜ್ಯ ಸಂಸ್ಕರಣಾ ಕಾರ್ಖಾನೆಯೊಂದು ಕಾರ್ಯಾಚರಿಸುತ್ತಿದ್ದು, ಅಲ್ಲಿಂದ ಹೊರಡುವ ದುರ್ಗಂಧದಿಂದ ಪ್ರವಾಸಿಗರು ಸೇರಿದಂತೆ ನಮಗೆಲ್ಲಬಹಳ ಹಿಂಸೆಯಾಗುತ್ತಿದೆ. ಸಿಬ್ಬಂದಿ, ಪ್ರವಾಸಿಗರು ಪದೇಪದೆ ಹೊಟ್ಟೆ ತೊಳಸುವಿಕೆ, ವಾಂತಿ, ತಲೆಸುತ್ತುವಿಕೆಯಂತಹ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ಖೇದಕರ. ಫೆ.11ರಂದು ಮಾನವ ಹಕ್ಕು ಆಯೋಗದ ವಿಚಾರಣೆ ನಡೆಯಲಿದ್ದು, ಪ್ರಸ್ತುತ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸುವ ನಿರೀಕ್ಷೆಯಿದೆ.
-ಮಹಾಲಿಂಗೇಶ್ವರ ಭಟ್ , ಪ್ರಧಾನ ಕಾರ್ಯದರ್ಶಿ, ಜೀರ್ಣೋದ್ಧಾರ ಸಮಿತಿ, ಶ್ರೀಕ್ಷೇತ್ರ ಅನಂತಪುರ
ಬೈಟ್
ಪ್ರಸ್ತುತ ಕ್ಷೇತ್ರಕ್ಕೆ ತೆರಳುವ ರಸ್ತೆ ಉತ್ತಮವಾಗಿದ್ದರೂ ಬಸ್ ವ್ಯವಸ್ಥೆ ಇಲ್ಲ. ಕುಂಬಳೆ ಹಾದಿಯಾಗಿ ಬರುವ ಭಕ್ತರು ನಾಯ್ಕಾಪಿನಲ್ಲಿಇಳಿದು ರಿಕ್ಷಾದಲ್ಲಿಕ್ಷೇತ್ರಕ್ಕೆ ತೆರಳಬೇಕಾಗುತ್ತದೆ. ಕ್ಷೇತ್ರಕ್ಕೆ ತೆಧಿರಧಿಳಲು ಅನುಕೂಲವಾಗುವಂತೆ ಬಸ್ ಸೌಕರ್ಯ ಬೇಧಿಕಿದೆ. ಊರ ಸಜ್ಜನರು, ಪರಿಸರ ಪ್ರೇಮಿಗಳು ಸೇರಿ ಬಹಳಷ್ಟು ಹೋರಾಟ ನಡೆಸಿದರೂ ಕ್ಷೇತ್ರ ಪರಿಸರದಲ್ಲಿತ್ಯಾಜ್ಯ ಸಂಸ್ಕರಣಾ ಕಾರ್ಖಾನೆಯಿಂದ ಹೊರಡುವ ದುರ್ಗಂಧಕ್ಕೆ ಪರಿಹಾರ ಸಿಕ್ಕಿಲ್ಲ. ಮಧ್ಯರಾತ್ರಿ ವೇಳೆಯಲ್ಲಿತ್ಯಾಜ್ಯಗಳ ವಿಲೇವಾರಿ ಸೇರಿದಂತಹ ಹಲವು ಸಮಾಜದ್ರೋಹಿ ಚಟುವಟಿಕೆಗಳು ನಡೆಯುತ್ತಿದ್ದು ಶೀಘ್ರ ಪರಿಹಾರ ಕಾಣಬೇಕಾಗಿದೆ.
-ಸತೀಶ ಪೆರ್ಣೆ, ವಾರ್ಡ್ ಸದಸ್ಯ, ಅನಂತಪುರ.
04ಕೆಯುಅನಂತಪುರಕ್ಷೇತ್ರ
04ಕೆಯುಬಿಸಿಲಿನಲ್ಲಿಪ್ರದಕ್ಷಿಣೆಬರುವಭಕ್ತರು

