ಮಣ್ಣಿನ ಫಲವತ್ತತೆಗೆ ಆದ್ಯತೆ ನೀಡಿ

Contributed byprakashvkhsn@gmail.com|Vijaya Karnataka

ಅರಸೀಕೆರೆ ತಾಲೂಕಿನಲ್ಲಿ ನಡೆದ ಕೃಷಿ ಸಭೆಯಲ್ಲಿ ಮಣ್ಣಿನ ಫಲವತ್ತತೆ ಬಗ್ಗೆ ಮಹತ್ವದ ಚರ್ಚೆ ನಡೆಯಿತು. ಸಾವಯವ ಇಂಗಾಲದ ಕೊರತೆ, ಮಳೆ ನೀರು ಸಂರಕ್ಷಣೆ, ಅತಿಯಾದ ಉಳುಮೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ತೆಂಗು ಬೆಳೆಗಾರರಿಗೆ ಆರೋಗ್ಯಕರ ಮರಗಳ ಮಹತ್ವ ತಿಳಿಸಲಾಯಿತು. ರೈತರಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಲಹೆ ನೀಡಲಾಯಿತು. ಜೇನು ಸಾಕಣೆ ಬಗ್ಗೆಯೂ ಮಾಹಿತಿ ನೀಡಲಾಯಿತು.

prioritizing soil fertility improving horticulture at agricultural meet

ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಬಿ.ಎ.ಸೀಮಾ ಸಲಹೆ

ವಿಕ ಸುದ್ದಿಲೋಕ ಹಾಸನ

ರೈತರು ಮಣ್ಣಿನ ಫಲವತ್ತತೆಗೆ ಆದ್ಯತೆ ಕೊಡಬೇಕು. ತ್ಯಾಜ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅರಸೀಕೆರೆ ತಾಲೂಕಿನ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಬಿ.ಎ.ಸೀಮಾ ಹೇಳಿದರು.

ಅರಸೀಕೆರೆ ತಾಲೂಕು ಸಿದ್ದರಹಳ್ಳಿಯ ಮಹೇಶ್ವರಪ್ಪ ಅವರ ಆತಿಥ್ಯದಲ್ಲಿನಡೆದ ಪುಣ್ಯಭೂಮಿಯ ಪರಿಸರ ಪ್ರಿಯ ಕೃಷಿ ಸಭೆಯಲ್ಲಿಮಾತನಾಡಿದರು.

‘‘ತಾಲೂಕಿನ ಮಣ್ಣಿನಲ್ಲಿಸಾವಯವ ಇಂಗಾಲದ ಪ್ರಮಾಣವು 0.3ರಿಂದ 0.4 ರಷ್ಟಿದ್ದು ಇದು ಅತೀ ಕಡಿಮೆ ಎನಿಸಿದೆ. ಕೊಡುವ ಸಾವಯವ ಗೊಬ್ಬರ ಸಾಕಾಗುತ್ತಿಲ್ಲ. ಮಳೆ ನೀರಿನ ಸಂರಕ್ಷಣೆ ಹಲವೆಡೆ ಆಗುತ್ತಿಲ್ಲ. ತೋಟಗಳಲ್ಲಿಅತಿಯಾದ ಉಳುಮೆಯಿಂದ ತೊಂದರೆಗಳು ಕಾಣುತ್ತಿವೆ. ಮಳೆಯ ನೀರನ್ನು ಸಂರಕ್ಷಿಸುವ ಕಾರ್ಯ ಆಗಬೇಕು,’’ಎಂದರು.

‘‘ಪೌಷ್ಠಿಕ ಮಣ್ಣಿನಿಂದ ತೆಂಗಿನ ಮರಗಳಲ್ಲಿಹೆಚ್ಚು ಗರಿಗಳಿದ್ದಷ್ಟು ಉತ್ತಮ ಇಳುವರಿ ಸಿಗುತ್ತದೆ. ಹೀಗಾಗಿ ತೆಂಗಿನ ಮರಗಳನ್ನು ಆರೋಗ್ಯಕರವಾಗಿ ಬೆಳೆಸಿರಿ,’’ ಎಂದು ಸಲಹೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ,‘‘ಪರಿಶ್ರಮವಿಲ್ಲದೇ ಕೃಷಿಯಲ್ಲಿಬೆಳವಣಿಗೆ ಆಗುವುದಿಲ್ಲ. ಇತ್ತೀಚಿನ ತಾಂತ್ರಿಕತೆಗಳನ್ನು ಬಳಸಿಕೊಂಡು ಪರಿಸರ ಪ್ರಿಯ ತತ್ತ$್ವಗಳನ್ನು ಪಾಲಿಸಿಕೊಳ್ಳಬೇಕು,’’ಎಂದು ಸಲಹೆ ನೀಡಿದರು.

ಪ್ರಗತಿಪರ ರೈತ ಎಸ್ .ಎಂ. ಮಲ್ಲಿಕಾರ್ಜುನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೃಷಿ ತಜ್ಞ ಡಾ.ವಿಜಯ್ ಅಂಗಡಿ ಜೇನು ಸಾಕಣೆ ಕುರಿತು ಮಾಹಿತಿ ನೀಡಿದರು.

ಹಿರಿಯ ಕೃಷಿಕ ಜಿ ಎಸ್ ಗಿಡ್ಡೇಗೌಡ, ಕುಮಾರಸ್ವಾಮಿ ,ಮಹೇಶ್ವರಪ್ಪ ಮತ್ತು ಅನ್ನಪೂರ್ಣಮ್ಮ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಎ.ಎಸ್ .ಮಹೇಶ್ವರ,ಎ.ಪಿ.ಮಲ್ಲಿಕಾರ್ಜುನ, ಎ.ಆರ್ .ಚಂದ್ರಶೇಖರ, ಎ.ಎಸ್ .ಮಲ್ಲಿಕಾರ್ಜುನಸ್ವಾಮಿ, ಡಿ.ಆರ್ .ರವಿಶಂಕರ್ ಮತ್ತಿತರರು ಹಾಜರಿದ್ದರು.

ಫೋಟೊ

ಅರಸೀಕೆರೆ ತಾಲೂಕು ಸಿದ್ದರಹಳ್ಳಿಯ ಮಹೇಶ್ವರಪ್ಪ ಆತಿಥ್ಯದಲ್ಲಿನಡೆದ ಪುಣ್ಯಭೂಮಿ ಪರಿಸರ ಪ್ರಿಯ ಕೃಷಿ ಸಭೆಯಲ್ಲಿರೈತರು ತೋಟ ವೀಕ್ಷಣೆ ಮಾಡಿ ಮಾಹಿತಿ ಪಡೆದರು.