ಮಾರ್ಟಳ್ಳಿಯಲ್ಲಿಬೀಳ್ಕೊಡುಗೆ

Contributed byabhilash.gowda7707@gmail.com|Vijaya Karnataka

ಮಾರ್ಟಳ್ಳಿಯ ಸೆಂಟ್‌ ಮೇರಿಸ್‌ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಪರೀಕ್ಷೆಗೆ ಉತ್ತಮ ತಯಾರಿ ನಡೆಸಲು ಹಾಗೂ ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

farewell ceremony for martalli students

ವಿಕ ಸುದ್ದಿಲೋಕ ಹನೂರು

ಕೆಲವೇ ದಿನಗಳಲ್ಲಿಪರೀಕ್ಷೆ ಬರಲಿದ್ದು ಎಲ್ಲರೂ ಈಗಾಗಲೇ ಉತ್ತಮ ತಯಾರಿ ಮಾಡಿಕೊಂಡಿದ್ದು ಉತ್ತಮ ಅಂಕ ಗಳಿಸುವಲ್ಲಿನಿರತ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸೆಂಟ್ ಮೇರಿಸ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವ್ಯವಸ್ಥಾಪಕ ಫಾ. ಡಾ. ಎಂ. ವಿನ್ಸೆಂಟ್ ತಿಳಿಸಿದರು.

ತಾಲೂಕಿನ ಮಾರ್ಟಳ್ಳಿ ಗ್ರಾಮದ ಸೆಂಟ್ ಮೇರಿಸ್ ಶಾಲೆಯಲ್ಲಿಆಯೋಜಿಸಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘‘ವಿದ್ಯಾರ್ಥಿಗಳಿಗೆ 10ನೇ ತರಗತಿ ಘಟ್ಟವು ಅತ್ಯಂತ ಪ್ರಮುಖವಾಗಿದ್ದು ಈ ಘಟಕದಲ್ಲಿಮಕ್ಕಳು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಮುಂದಿನ ದಾರಿಯನ್ನು ಸುಗಮ ಮಾಡಿಕೊಳ್ಳಬೇಕಾಗಿದೆ. ಆ ಅಂಕಗಳಿಸಲು ಬೇಕಾಗಿರುವಂತಹ ಎಲ್ಲತಂತ್ರಗಳನ್ನು ಸಹ ಈಗಾಗಲೇ ನುರಿತ ಶಿಕ್ಷಕರಿಂದ ತಾವೆಲ್ಲರೂ ಕಲಿತುಕೊಂಡಿದ್ದೀರಿ. ಇದೀಗ ತಾವು ಒಳ್ಳೆಯ ಆರೋಗ್ಯವಂತರಾಗಿರಬೇಕು, ಸದೃಢರಾಗಿರಬೇಕು, ಶುಚಿ, ರುಚಿಯಾದ ಆಹಾರವನ್ನು ಸೇವಿಸುವ ಮೂಲಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ತಾವು ಮುಂದಾಗಬೇಕು. ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಧೈರ್ಯವಾಗಿ ಪರೀಕ್ಷೆ ಎದುರಿಸಿ ಉತ್ತಮ ಅಂಕ ಗಳಿಸುವ ಮೂಲಕ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು,’’ ಎಂದರು.

ಸನ್ಮಾನ: ಕಳೆದ 2024-25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ದೀಪಕ್ ತಮಯನ್ , 604 ಅಂಕ ಪಡೆದು ಪ್ರಥಮ, ಧರಣೀಶ್ 603 ಅಂಕ ಪಡೆದು ದ್ವಿತೀಯ ಹಾಗೂ ಜಿಲಿಯಾ 587 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದು, ಕಳೆದ ಸಾಲಿನಲ್ಲಿ ಸಮಾಜ ವಿಜ್ಞಾನದಲ್ಲಿ100 ಅಂಕ ಪಡೆದ ದೀಪಕ್ ತಮಯನ್ ಮತ್ತು ಧರಣೀಶ್ ಹಾಗೂ ಕನ್ನಡದಲ್ಲಿ125 ಅಂಕ ಪಡೆದ ಎಂಜಲಿನ್ ಪ್ರಿಯಾ ರೋಸ್ ಎಂಬ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಇದೇ ಸಂದರ್ಭ ಶಾಲಾ ವ್ಯವಸ್ಥಾಪಕರು, ಮುಖ್ಯಶಿಕ್ಷಕರು ಮತ್ತು ಸಿಬ್ಬಂದಿ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಿ ಶುಭ ಹಾರೈಸಿದರು.

.04ಎಚ್ ಎನ್ ಆರ್ 05

ಪೋಟೋ 01 ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಸೆಂಟ್ ಮೇರಿಸ್ ಶಾಲೆಯಲ್ಲಿಹಮ್ಮಿಕೊಂಡಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಆಯೋಜನೆ ಮಾಡಲಾಗಿತ್ತು