ದೇವರ ಚೌಕಿ ಬೀಳ್ಕೊಡುಗೆ
ವಿಕ ಸುದ್ದಿಲೋಕ ಸಿಂದಗಿ
ನಗರದ ಮನೆಗಳಿಗೆ ಹೋಗಿ ಆಶೀರ್ವದಿಸಿದ ನಂತರ ಭಕ್ತರ ಬೇಡಿಕೆ, ಪ್ರಾರ್ಥನೆಯನ್ನು ಹೊತ್ತ ಮಲ್ಲಿಕಾರ್ಜುನ ದೇವರ ಚೌಕಿಯು ಶುಕ್ರವಾರ ಶ್ರೀಶೈಲ ಪಾದಯಾತ್ರೆಗೆ ತೆರಳಿತು.
ಸಂಗಮೇಶ್ವರ ದೇವಸ್ಥಾನದಲ್ಲಿದ್ದ ಮಲ್ಲಿಕಾರ್ಜುನ ದೇವರ ಚೌಕಿಯು, ಗುರುವಾರ ಕೆರೆ, ರೇಶ್ಮೆ ಪ್ಲಾಟ್ , ಶುಕ್ರವಾರ ಶಹಾಪುರ ರಸ್ತೆಯಲ್ಲಿನ ಲಕ್ಷಿತ್ರ್ಮೕ ದೇವಸ್ಥಾನದ ಬಳಿಯಲ್ಲಿನ ಜಮೀನಿನಲ್ಲಿಪ್ರತಿಷ್ಠಾಪನೆಗೊಂಡಿತು. ಭಕ್ತರು ಉದ್ಘೋಷ, ದೀರ್ಘದಂಡ ನಮಸ್ಕಾರ ಹಾಕಿ ಶ್ರೀಶೈಲಕ್ಕೆ ಬೀಳ್ಕೊಟ್ಟರು.
ವಿನೋದ ಹಿರೇಮಠ, ಶ್ರೀಶೈಲ ನಂದಿಕೋಲು, ಚೆನ್ನು ನಂದಿಕೋಲು, ಪ್ರಕಾಶ ನಂದಿಕೋಲು, ಪಂಚಾಕ್ಷರಿ ಪಲ್ಲಾಪೂರ ಮಠ, ಮಲ್ಲಯ್ಯ ವಿರಕ್ತಮಠ, ವಿಜಯ ಹಿರೇಮಠ, ಶಾಂತವೀರ ಹಿರೇಮಠ, ಪುರಾಣಿಕ ಹಿರೇಮಠ, ಚೆನ್ನಯ್ಯ ಮಠಪತಿ, ವಿಶ್ವನಾಥ ನಂದಿಕೋಲು, ಡಾ.ಅನೀಲ ಹೂಗಾರ, ರಮೇಶ ಹೂಗಾರ, ಸಂತೋಷ ಬಮ್ಮಣ್ಣಿ, ಮುತ್ತು ಮುಂಡೇವಾಡಗಿ, ದುಂಡಪ್ಪ ಸೊನ್ನದ, ಮಲ್ಲುಲಾಳಸಂಗಿ ಇದ್ದರು.
ಫೋಟೊ
06ಎಸ್ .ಎನ್ .ಡಿ03
ಸಿಂದಗಿಯಲ್ಲಿಮಲ್ಲಿಕಾರ್ಜುನ ದೇವರ ಚೌಕಿಯಡಿ ಭಕ್ತರು ದೀರ್ಘ ದಂಡ ನಮಸ್ಕಾರ ಹಾಕಿದರು.

