ಚಿತ್ರ ಸಮೇತ ಸುದ್ದಿ ಬರಲಿಚಿತ್ರ- ಬಸವರಾಜ ಗುರವ
ಶಿಕ್ಷಕರ ಹಕ್ಕುಗಳ ಮೇಲೆ ಆಡಳಿತಾತ್ಮಕ ಹೊಡೆತ; ಸೊಲ್ಲಾಪುರ ಶಿಕ್ಷಕರ ಆಕ್ರೋಶ
ಆನ್ ಲೈನ್ ಪ್ರಕ್ರಿಯೆ ವಿಳಂಬ: ಶಿಕ್ಷಕರ ಆಕ್ರೋಶ
ವಿಕ ಸುದ್ದಿಲೋಕ ಸೋಲಾಪುರ
ಸೊಲ್ಲಾಪುರ ಜಿಲ್ಲೆಯಲ್ಲಿಪ್ರಾಥಮಿಕ ಶಿಕ್ಷಕರ ವಿವಿಧ ಸೇವಾ ಹಾಗೂ ಆರ್ಥಿಕ ಪ್ರಕರಣಗಳಲ್ಲಿನಡೆಯುತ್ತಿರುವ ಆಡಳಿತಾತ್ಮಕ ವಿಳಂಬದಿಂದ ಶಿಕ್ಷಕರ ವರ್ಗಕ್ಕೆ ಬೇಸರ ತಂದಿದೆ ಎಂದು ಎಂದು ಮಹಾರಾಷ್ಟ್ರ ರಾಜ್ಯ ಕನ್ನಡ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜ ಗುರವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಪಿಎಫ್ ಹಣ, ಮೆಡಿಕಲ್ ಬಿಲ್ ಫೈಲ್ ,ನಿವೃತ್ತಿಗೆ ಮುನ್ನ ವೇತನ ಪರಿಶೀಲನೆ ಹಾಗೂ ಹಳೆ ಪಿಂಚಣಿ ಯೋಜನೆಯ ಅಂಶದಾನ, ನಿವೃತ್ತಿ ವೇತನ ಖಾತೆಗೆ ವರ್ಗಾವಣೆ ಆಗುತ್ತಿಲ್ಲ. ಈ ಬಗ್ಗೆ ಆಡಳಿತಾಧಿಕಾರಿಗಳು ನಗಮನ ಹರಿಸುತ್ತಿಲ್ಲ. ಶಿಕ್ಷಕರು ತಮ್ಮ ವೇತನದಿಂದ ನಿಯಮಿತವಾಗಿ ಜಮಾ ಮಾಡಿದ ಹಣವನ್ನು ಸಮಯಕ್ಕೆ ಪಡೆಯಲು ಸಾಧ್ಯವಾಗದೆ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಮೆಡಿಕಲ್ ಫೈಲ್ ಮಂಜೂರಿಗಾಗಿ ಪದೇಪದೇ ಕಚೇರಿ ಅಲೆದಾಡುವಂತಾಗಿದೆ.ನಿವೃತ್ತಿ ಸಂದರ್ಭದಲ್ಲಿವೇತನ ಪರಿಶೀಲನೆಗೆ ಯೋಜನೆ ರೂಪಿಸಲಾಗಿದ್ದರೂ, ಕಾರ್ಯ ಪೂರ್ಣಗೊಳ್ಳದ ಕಾರಣ ನಿವೃತ್ತ ಶಿಕ್ಷಕರಿಗೆ ಲಾಭಗಳು ವಿಳಂಬವಾಗುತ್ತಿವೆ. ಇದರಿಂದ ಶಿಕ್ಷಕರಲ್ಲಿಹೆಚ್ಚಿನ ಅಸಮಾಧಾನ ವ್ಯಕ್ತವಾಗುತ್ತಿದೆ. ಆಡಳಿತ ಎಲ್ಲಾಕೆಲಸಗಳು ಆನ್ ಲೈನ್ ಮೂಲಕ ನಡೆಯುತ್ತಿವೆ ಎಂದು ಹೇಳುತ್ತಿದ್ದರೂ, ವಾಸ್ತವದಲ್ಲಿಪ್ರಕರಣಗಳು ಪೂರ್ಣಗೊಳ್ಳಲು ಏಕೆ ವಿಳಂಬವಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತಿವೆ. ಆನ್ ಲೈನ್ ವ್ಯವಸ್ಥೆ ಜಾರಿಯಲ್ಲಿದ್ದರೂ ಪ್ರಕರಣಗಳು ಬಾಕಿ ಉಳಿಯುತ್ತಿರುವುದರ ಬಗ್ಗೆ ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸದಿರುವುದಕ್ಕೂ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಜವಾಬ್ದಾರಿ ಬೋಧಿಸುವ ಶಿಕ್ಷಕರೇ ಇಂತಹ ಅಡಚಣೆ ಎದುರಿಸಬೇಕಾದರೆ ಅದು ಶಿಕ್ಷಣ ವ್ಯವಸ್ಥೆಗೆ ಆತಂಕಕಾರಿಯಾಗಿದೆ ಎಂದು ಶಿಕ್ಷಕರು ದೂರಿದ್ದಾರೆ.ತಕ್ಷಣವೇ ಎಲ್ಲಾಪ್ರಕರಣಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿತೀವ್ರ ಹೋರಾಟದ ಹಾದಿ ತುಳಿಯುವುದಾಗಿ ಅವರು ಎಚ್ಚರಿಸಿದ್ದಾರೆ.

