ಸಂಘರ್ಷ ತಡೆಗಿಲ್ಲಅನುದಾನ
ಜಿಲ್ಲೆಯಲ್ಲಿ5 ಕಾಂಗ್ರೆಸ್ ಶಾಸಕರು ಇದ್ದರೂ ಕೂಡ ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿಶೂನ್ಯ ಕೊಡುಗೆ ನೀಡಲಾಗಿದೆ. ಮಲೆನಾಡಿನ ಜ್ವಲಂತ ಸಮಸ್ಯೆಯಾದ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ಯಾವುದೇ ವಿಶೇಷ ಪ್ಯಾಕೇಜ್ ನೀಡಿಲ್ಲ. ಮುಳ್ಳಯ್ಯನಗಿರಿ ಸೀತಾಳಯ್ಯನ ಗಿರಿಯಲ್ಲಿರೋಪ್ ವೇ ಯೋಜನೆ ಘೋಷಣೆ ಮಾಡಿರುವುದು ಖಂಡನೀಯ. ಜಿಲ್ಲೆಗೆ ಇದು ನಿರಾಶಾದಾಯಕ ಬಜೆಟ್ .
- ವಿರೇಶ್ , ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ
ಫೋಟೊ: 6ಚೇತನ್ ಪಿ-1
======
ಶ್ರಮಿಕರ ಆರ್ಥಿಕ ಚೈತನ್ಯಕ್ಕೆ ಕುತ್ತು
ರಾಜ್ಯದ ಅಭಿವೃದ್ಧಿ, ಆಡಳಿತದ ರಥವನ್ನು ಎಳೆಯುವ ಶ್ರಮಿಕ ವರ್ಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ವಿವಿಧ ಇಲಾಖೆಗಳಿಗೆ ವಲಯವಾರು ಸಾವಿರಾರು ಕೋಟಿ ರೂಪಾಯಿ ಮೀಸಲಿಟ್ಟಿದ್ದರೂ ಸಹ ತಳಮಟ್ಟದಲ್ಲಿಸರಕಾರದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಮಿಕರಿಗೆ ಆರ್ಥಿಕ ಚೈತನ್ಯ ತುಂಬುವ ಪ್ರಯತ್ನ ಮಾಡದೇ ಇರುವುದು ದುಡಿಯುವ ವರ್ಗ ವಿರೋಧಿ ಧೋರಣೆಯಾಗಿದೆ. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿಲ್ಲ.
- ಬಿ.ಅಮ್ಜದ್ , ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್
6ಚೇತನ್ ಪಿ-2

