ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ವಿದ್ಯಾರ್ಥಿಗಳ ಸಾಧನೆ

Contributed bymallugoudra461987@gmali.com|Vijaya Karnataka

ಮಹಾಂತೇಶ ನಗರದ ಎಮಿನೆಂಟ್‌ ಕೋಚಿಂಗ್‌ ಕ್ಲಾಸಿಸ್‌ ವಿದ್ಯಾರ್ಥಿಗಳು ಅಖಿಲ ಭಾರತ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ರೆಹಾನ್‌ ಶೇಖ್‌ 273 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. 22 ವಿದ್ಯಾರ್ಥಿಗಳು 250ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. 67 ವಿದ್ಯಾರ್ಥಿಗಳು 200ಕ್ಕೂ ಅಧಿಕ ಅಂಕಗಳೊಂದಿಗೆ ಯಶಸ್ಸು ಕಂಡಿದ್ದಾರೆ. ಸಂಸ್ಥೆಯ ಮುಖ್ಯಸ್ಥರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

eminent coaching class students excel in all india military school exam

*ಅಖಿಲ ಭಾರತ ಸೈನಿಕ ಶಾಲೆ ಪ್ರವೇಶ ಪೂರ್ವ ಪರೀಕ್ಷೆಯಲ್ಲಿಉತ್ತೀರ್ಣ

ವಿಕ ಸುದ್ದಿಲೋಕ ಬೆಳಗಾವಿ

ಇಲ್ಲಿನ ಮಹಾಂತೇಶ ನಗರದ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ವಿದ್ಯಾರ್ಥಿಗಳು ಇತ್ತೀಚೆಗೆ ಜರುಗಿದ ಅಖಿಲ ಭಾರತ ಸೈನಿಕ ಶಾಲೆಯ 2026-27ನೇ ಸಾಲಿನ 6ನೇ ವರ್ಗದ ಪ್ರವೇಶ ಪೂರ್ವ ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳಾದ ರೆಹಾನ್ ಶೇಖ್ (273) ಅಂಕ, ಕಿರಣ ಗಡ್ಡದ (270), ಶ್ರೀಕೃಷ್ಣ ವಕ್ಕುಂದ (268), ನಿರ್ಮಿತ ಸುವರ್ಣ (268), ಕೋಮಲ ತಳವಾರ (265), ಪೃಥ್ವಿ ಚಂದರಗಿ (265), ಆದ್ಯಾಂತ ಪ್ರಕಾಶ (263), ಮೊಹ್ಮದಸಮಿ ಮುಜಾವರ್ (263), ತೇಜಸ ಪೂಜೇರ (263), ವರದ ಕಾಳೆ (262), ಅವಿನಾಶ ಮರಲಿಂಗಣ್ಣವರ (261), ಅಮರೇಶ ಕಲ್ಲೂರ (260), ಅರ್ನವ ಖಮಲಟ್ಟಿ (256), ಅಮೋಘ ವಿರಕ್ತಮಠ (255), ಸುಖಿ ಹೋಳಿಕಟ್ಟಿ (254), ಸುಪರ್ಶ ಮೆಳವಂಕಿ (254), ಅಯಾನ್ ಅರಸನಗಿ (252), ಸಂಕಲ್ಪ ದೊಡಮನಿ (252), ವಿಶ್ರುತ ಮುಗಳಿ (251), ಶ್ರೇಯಸ್ ಹಮ್ಮನ್ನವರ (251) ಅಂಕ ಪಡೆದು ಸಾಧನೆಗೈದಿದ್ದಾರೆ. 22 ವಿದ್ಯಾರ್ಥಿಗಳು 250ಕ್ಕಿಂತ ಹೆಚ್ಚು ಅಂಕ ಪಡೆದಿದ್ದು, ಸುಮಾರು 67 ವಿದ್ಯಾರ್ಥಿಗಳು 200ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಅದಕ್ಕೆ ಶ್ರಮಿಸಿದ ಶಿಕ್ಷಕರು ಹಾಗೂ ಸಹಕರಿಸಿದ ಪಾಲಕರಿಗೆ ಸಂಸ್ಥೆಯ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.