ವಿಕ ಸುದ್ದಿಲೋಕ ಬಿ.ಸಿ.ರೋಡ್
ಫರಂಗಿಪೇಟೆ ನೇತ್ರಾವತಿ ನದಿಯಲ್ಲಿಪತ್ತೆಯಾಗಿರುವ ಸುಮಾರು 400ರಷ್ಟು ಆಧಾರ್ ಕಾರ್ಡ್ ಗಳನ್ನು ಪುದು ಪಂಚಾಯಿತಿ ವತಿಯಿಂದ ಶುಕ್ರವಾರ ಮಂಗಳೂರು ಅಂಚೆ ಇಲಾಖೆಗೆ ಹಸ್ತಾಂತರ ಮಾಡಲಾಯಿತು.
ಪುದು ಗ್ರಾಮ ಪಂಚಾಯಿತಿಗೆ ಮಂಗಳೂರು ಅಂಚೆ ಇಲಾಖಾಧಿಕಾರಿಗಳು ಪರಿಶೀಲನೆಗಾಗಿ ಆಗಮಿಸಿದ್ದು, ಪಂಚಾಯಿತಿ ವತಿಯಿಂದ ನದಿಯಲ್ಲಿಸಿಕ್ಕಿರುವ ಆಧಾರ್ ಕಾರ್ಡ್ ಗಳ ಪ್ರತಿಯನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಆಧಾರ್ ಕಾರ್ಡ್ ಗಳಲ್ಲಿರಾರ ಯಪರ್ ಗಳು ಇಲ್ಲ. ಎಲ್ಲಆಧಾರ್ ಕಾರ್ಡ್ ಗಳು ಒದ್ದೆಯಾಗಿದ್ದು, ಅದರಲ್ಲಿರುವ ವಿಳಾಸ ಸ್ಪಷ್ಟವಾಗಿ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿಇದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಮಂಗಳೂರು ಅಂಚೆ ವಿಭಾಗದ ಉಪ ಅಧೀಕ್ಷಕ ದಿನೇಶ್ ತಿಳಿಸಿದ್ದಾರೆ.
ಕಂದಾಯ ನಿರೀಕ್ಷಕರಿಂದ ದೂರು ದಾಖಲು: ಆಧಾರ್ ಕಾರ್ಡ್ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಫರಂಗಿಪೇಟೆ ಅಂಚೆ ಇಲಾಖೆ ಮೇಲೆ ಪ್ರಕರಣ ದಾಖಲಾಗಿದೆ. ಆಧಾರ್ ಕಾರ್ಡ್ ಪ್ರತಿಗಳಲ್ಲಿಫರಂಗಿಪೇಟೆಯ ಪೋಸ್ಟ್ ಆಫೀಸಿನ ಸೀಲ್ ಪತ್ತೆಯಾಗಿದ್ದು, ಮೂಲ ಆಧಾರ್ ಕಾರ್ಡ್ ಪ್ರತಿಗಳು ಸಾರ್ವಜನಿಕರ ಮನೆಗೆ ತಲುಪದೆ, ನೇತ್ರಾವತಿ ನದಿ ತೀರದಲ್ಲಿಸಿಕ್ಕಿದ್ದು ಸಂಬಂಧಪಟ್ಟ ಅಂಚೆ ಇಲಾಖೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಪತ್ರ ಬರೆಯುವಂತೆ ಪಾಣೆಮಂಗಳೂರು ಕಂದಾಯ ನಿರೀಕ್ಷಕರು ತಹಸೀಲ್ದಾರರಿಗೆ ವರದಿ ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಬಾಕ್ಸ್
ದೂರಿನಲ್ಲಿಏನಿದೆ?
ಅಂಚೆ ಇಲಾಖೆಯ ಸಿಬ್ಬಂದಿ ಸಾರ್ವಜನಿಕ ಸೇವಕರಾಗಿದ್ದು, ಈ ದಾಖಲೆಗಳನ್ನು ಸುರಕ್ಷಿತವಾಗಿ ಸಾರ್ವಜನಿಕರಿಗೆ ವಿತರಿಸುವ ಕಾನೂನಾತ್ಮಕ ಜವಾಬ್ದಾರಿ ಹೊಂದಿದ್ದಾರೆ ಮತ್ತು ವೈಯಕ್ತಿಕ ಮಾಹಿತಿ ಸೋರಿಕೆ ಆಗುವ ಸಂಭವ ಇದ್ದರೂ, ಈ ದಾಖಲೆಗಳನ್ನು ಸಾರ್ವಜನಿಕ ಸ್ಥಳದಲ್ಲಿಬೇಜವಾಬ್ದಾರಿಯಿಂದ ಬಿಸಾಡಿರುವುದು ಕಂಡು ಬರುತ್ತದೆ. ನಾಗರಿಕರ ಆಧಾರ್ ಕಾರ್ಡನ್ನು ಸುರಕ್ಷಿತವಾಗಿ ನಾಗರಿಕರಿಗೆ ತಲುಪಿಸುವ ಜವಾಬ್ದಾರಿ ಹೊಂದಿದ್ದು ಅಂಚೆ ಇಲಾಖೆಯ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿತಿಳಿಸಿದ್ದಾರೆ.
6ವೈಎ ಹಸ್ತಾಂತರ
ಕ್ಯಾಪ್ಶನ್
ಪುದು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಂಗಳೂರು ಅಂಚೆ ಕಚೇರಿ ಅಧಿಕಾರಿಗಳಿಗೆ ಹಸ್ತಾಂತರಿಸಿರು.

