ಪಿ.ಎಂ.ಸತ್ಯಪ್ಪನವರ ಶಿಗ್ಗಾವಿ
ಭಾವೈಕ್ಯತೆ ಸಾರುವ ಶಿಶುವಿನಹಾಳವನ್ನು ರಾಜ್ಯ ಸರಕಾರ ಪ್ರತಿಷ್ಠಾನವನ್ನಾಗಿ ಘೋಷಿಸಿ, ನಾಡಿನ ಸಾಹಿತ್ಯಾಸಕ್ತರ ದಶಕಗಳ ಕನಸು ನನಸಾಗಿಸಿದೆ.
ಶರೀಫ ಶಿವಯೋಗಿಗಳ ಹೆಸರಿನಲ್ಲಿಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಬಹು ದಿನಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದ ಸಾಹಿತ್ಯಾಸಕ್ತರ ಒತ್ತಾಸೆಯನ್ನು ರಾಜ್ಯ ಸರಕಾರ ಈ ಬಜೆಟ್ ನಲ್ಲಿಪ್ರತಿಷ್ಠಾನವನ್ನಾಗಿಸುವ ಮೂಲಕ ಈಡೇರಿಸಿದೆ.
ಶರೀಫರನ್ನು, ಅವರ ಜನಪದ ಸಾಹಿತ್ಯವನ್ನು ರಾಷ್ಟ್ರ ಮಟ್ಟಕ್ಕೆ ಪರಿಚಯಿಸುವ ಕೆಲಸ ನಡೆಯತ್ತಿಲ್ಲಎಂಬ ಕೊರಗು ಭಕ್ತರದ್ದಾಗಿತ್ತು. ಪ್ರಾಧಿಕಾರ ರಚನೆ ಕುರಿತು ಶಾಸಕ ಯಾಸೀರಖಾನ್ ಪಠಾಣ ಬೆಳಗಾವಿ ಆಧಿವೇಶನದಲ್ಲಿಪ್ರಸ್ತಾಪಿಸಿದ್ದರು. ಪ್ರಾಧಿಕಾರ ರಚಿಸಿ ಸಮಗ್ರ ಅಭಿವೃದ್ಧಿಯೊಂದಿಗೆ ಪ್ರೇಕ್ಷಣಿಯ ಸ್ಥಳವನ್ನಾಗಿಸಲು ಪ್ರಯತ್ನ ನಡೆಸಲಾಗಿತ್ತು.
2008ರಲ್ಲಿಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದಲ್ಲಿಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಶಿಶುವಿನಹಾಳ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಪ್ರಾರ್ಥನೆ ಮಂದಿರವೊಂದು ಸ್ಥಾಪಿಸಿ ಬರುವ ಪ್ರವಾಸಿಗರಿಗೆ ಶರೀಫರ ಜೀವನ ಚರಿತ್ರ್ಯ ಸಾರುವ ಉಬ್ಬು ಚಿತ್ರಗಳನ್ನು ಬಿಂಬಿಸಿದ್ದರು. ಬೃಹದಾಕಾರದ ಗ್ರಂಥಾಲಯ, ಯಾತ್ರಿ ನಿವಾಸ, ಸಮುದಾಯ ಭವನ ನಿರ್ಮಿಸಿ, ಇಟಲಿ ದೇಶದ ಗ್ರಾನೈಟ್ ಕಲ್ಲಿನಲ್ಲೇ ಕೆತ್ತನೆಗೊಂಡ ಶರೀಫ-ಶಿವಯೋಗಿಗಳ ಮೂರ್ತಿ ನಿರ್ಮಾಣಕ್ಕೂ ಸಾಕ್ಷಿಯಾಗಿದ್ದರು.
ವಿಕ ವರದಿ:
ಶಿಶುವಿನಹಾಳ ಪ್ರಾಧಿಕಾರ ರಚಿಸುವಂತೆ ಸ್ಥಳೀಯರ ಸಾಹಿತ್ಯಾಸಕ್ತರ ಬಹು ವರ್ಷಗಳ ಕನಸು ನನಸಾದೀತೆ ಎಂಬ ಕುರಿತು ಕಳೆದ ಡಿಸೆಂಬರ್ 18, 2025 ರಂದು ಪತ್ರಿಕೆ ವರದಿ ಪ್ರಕಟಿಸಿತ್ತು.
-
ಕೋಟ್
ಜಗ ಕಲ್ಯಾಣಕ್ಕೆ ಶ್ರಮಿಸಿದ ದಾರ್ಶನಿಕ ಸಂತ ಶರೀಫ ಶಿವಯೋಗಿಗಳ ಸ್ಥಳ ಶಿಶುವಿನಹಾಳವನ್ನು ಪ್ರತಿಷ್ಠಾನವನ್ನಾಗಿ ಘೋಷಿಸಿದ ಸಿಎಂಗೆ ಕೃತಜ್ಞತೆ ಸಲ್ಲಿಸುತ್ತೇನೆ.
-ಯಾಸೀರಖಾನ್ ಪಠಾಣ, ಶಾಸಕ ಶಿಗ್ಗಾವಿ
-
ಸಂತ ಶರೀಫ ಶಿವಯೋಗಿಗಳ ವಿಚಾರ ಧಾರೆಗಳನ್ನು ಜಗತ್ತಿಗೆ ಪರಿಚಯಿಸಲು ಶಿಶುವಿನಹಾಳವನ್ನು ಪ್ರತಿಷ್ಠಾನವನ್ನಾಗಿ ಘೋಷಿಸಿದ ಸರಕಾರಕ್ಕೆ ಅಭಿನಂದನೆ.
-ಸೋಮಣ್ಣ ಬೇವಿನಮರದ, ಅಧ್ಯಕ್ಷ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
-
ಸೌಹಾರ್ದತೆಯ ಸಾಹಿತ್ಯ ಕೊಟ್ಟ ಶರೀಫರ ಸ್ಥಳ ಶಿಶುವಿನಹಾಳ ಪ್ರತಿಷ್ಠಾನವನ್ನಾಗಿಸಿದ ಸರಕಾರಕ್ಕೆ ಅಭಿನಂದನೆಗಳು.
-ಸೈಯ್ಯದ ಅಜ್ಜಂಪೀರ ಖಾದ್ರಿ ಅಧ್ಯಕ್ಷ ಹೆಸ್ಕಾಂ ಹುಬ್ಬಳ್ಳಿ
-
6ಎಸ್ .ಜಿ.ಎನ್ .1 ಶಿಶುವಿನಹಾಳದ ಶರೀಫ ಶಿವಯೋಗಿಗಳು.

