2026-27ನೇ ಸಾಲಿನಲ್ಲಿಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ದಾಖಲೆಯ 17ನೇ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಹೊಂದಿದೆ. ಎಲ್ಲಾಇಲಾಖೆಗಳಲ್ಲಿನೇಮಕಗಳು, ಶಾಲೆಗಳ ಅಭಿವೃದ್ಧಿ, ಆಸ್ಪತ್ರೆಗಳಿಗೆ ಬೇಕಾದ ಸೌಲಭ್ಯಗಳು, ಕಂದಾಯ ಇಲಾಖೆಯಲ್ಲಿಹೊಸ ತಂತ್ರಜ್ಞಾನ ಅಳವಡಿಸಿ, ರೈತರ ಮನೆ ಬಾಗಿಲಿಗೆ ಸೇವೆ ಇತ್ಯಾದಿ ಹತ್ತು ಹಲವಾರು ಅನುಕೂಲಗಳ ಬಜೆಟ್ ಆಗಿದೆ. ಸಿದ್ದರಾಮಯ್ಯನವರಿಗೆ ಇರುವ ಆರ್ಥಿಕ ಜ್ಞಾನ ಮತ್ತು ರಾಜಕೀಯ ಅನುಭವದ ಹಿನ್ನೆಲೆಯಲ್ಲಿಎಲ್ಲಾಜಾತಿ, ಧರ್ಮಗಳ ಜನರಿಗೆ ವಿಶೇಷವಾಗಿ ರೈತರು, ಮಕ್ಕಳು, ಮಹಿಳೆಯರು, ಕಾರ್ಮಿಕರು, ದೀನದಲಿತರ ಪರವಾದ ಬಜೆಟ್ ಇದಾಗಿದೆ.
-ಕೆ.ವೈ.ನಂಜೇಗೌಡ, ಶಾಸಕರು, ಮಾಲೂರು 6 ಮಾಲೂರು ಫೋಟೊ 2
==
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ನಿರಾಶಾದಾಯಕ ಬಜೆಟ್ ಇದಾಗಿದೆ. ದಿಕ್ಕು ದೆಸೆ ಇಲ್ಲದಷ್ಟು ಸಾಲ ಮಾಡುವ ಕಳಪೆ ಬಜೆಟ್ . ಅಭಿವೃದ್ಧಿ ಶೂನ್ಯ ಬಜೆಟ್ ಇದಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಸಾಧ್ಯವಾಗದೆ ಸಾಲ ಪಡೆಯುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ನೀರಾವರಿಯಂತಹ ಹೊಸ ಯೋಜನೆಗಳಿಗೆ ಆದ್ಯತೆ ಇಲ್ಲ. ಪ್ರತಿಯೊಬ್ಬರ ತಲೆಯ ಮೇಲೆ 1.17 ಲಕ್ಷ ಸಾಲವನ್ನು ಹೊರೆಸಿ ರಾಜ್ಯ 1.17 ಲಕ್ಷ ಕೋಟಿ ಸಾಲದಲ್ಲಿದೆ. ದೂರದೃಷ್ಟಿ ಇಲ್ಲದ ರಾಜ್ಯದ ಸಮಗ್ರ ಅಭಿವೃದ್ಧಿಯ ಮುನ್ನೋಟವಿಲ್ಲದ ಸಪ್ಪೆ ಬಜೆಟ್ ಇದಾಗಿದೆ.
-ಆರ್ .ಪ್ರಭಾಕರ್ , ಜೆಡಿಎಸ್ ಮುಖಂಡರು, ಮಾಲೂರು 6 ಮಾಲೂರು ಫೋಟೊ 3
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ಮುಂಗಡಪತ್ರವು ದೂರದೃಷ್ಟಿ ಇಲ್ಲದ, ರಾಜ್ಯದ ಸಮಗ್ರ ಅಭಿವೃದ್ಧಿಯ ಮುನ್ನೋಟವಿಲ್ಲದ ಸಪ್ಪೆ ಬಜೆಟ್ . ರೈತರ ಮೂಲಭೂತ ಸಮಸ್ಯೆಗಳ ಇತ್ಯರ್ಥಕ್ಕೆ ಶಾಶ್ವತ ಪರಿಹಾರಗಳನ್ನು ಅವರು ಘೋಷಿಸಿಲ್ಲ. ಬೆಂಬಲ ಬೆಲೆಗಳು, ಆತಹತ್ಯೆಯ ಸುಳಿಗೆ ಸಿಕ್ಕ ರೈತನನ್ನು ಬಚಾವ್ ಮಾಡಲು, ಸಾಲ ಮನ್ನಾ ಮುಂತಾದ ಸದೃಢ ಘೋಷಣೆಗಳನ್ನು ಮಾಡದೇ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದ್ದಾರೆ. ರೈತರಿಗೆ ಅನುಕೂಲ ಎನ್ನುವ ಭ್ರಮೆ ಸೃಷ್ಟಿಸಿ ಮಂಕು ಬೂದಿ ಎರಚಿದ್ದಾರೆ. ಭಾರಿ ಪ್ರಮಾಣದಲ್ಲಿಸಾಲ ಎತ್ತಿ, ಜನಸಾಮಾನ್ಯರನ್ನು ಇನ್ನಷ್ಟು ಸಾಲಗಾರರಾಗಿ ಮಾಡುವ ಉದ್ದೇಶ ಸಿದ್ದರಾಮಯ್ಯ ಅವರಿಗಿದೆ.
-ಹೂಡಿ ವಿಜಯಕುಮಾರ್ , ಜೆಡಿಎಸ್ ಮುಖಂಡರು, ಮಾಲೂರು 6 ಮಾಲೂರು ಫೋಟೊ 4
ರಾಜ್ಯ ಸರಕಾರದ ಬಹು ನಿರೀಕ್ಷಿತ 2026-27ನೇ ಸಾಲಿನ ಬಜೆಟ್ ಅನ್ನು ವಿಧಾನಸಭೆಯಲ್ಲಿಮಂಡಿಸಲಾಗಿದ್ದು, ಒಟ್ಟು 448004 ಕೋಟಿ ರೂ. ಗಾತ್ರದ ಬೃಹತ್ ಆಯವ್ಯಯವನ್ನು ಮಂಡಿಸಲಾಗಿದೆ. ಸರ್ವೋದಯವಾಗಲಿ ಸರ್ವರಲಿ ಎಂಬ ಕವಿವಾಣಿಯಂತೆ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು, ಆರ್ಥಿಕ ಶಿಸ್ತಿನೊಂದಿಗೆ ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯಗಳಿಗೆ ಸಮಾನ ಆದ್ಯತೆ ನೀಡಲಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಯ ಬಜೆಟ್ ಇದಾಗಿದೆ.
-ಲಿಂಗಾಪುರ ಎಂ.ಕೃಷ್ಣಪ್ಪ (ಕಿಟ್ಟಿ), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಾಲೂರು 6 ಮಾಲೂರು ಫೋಟೊ 5

