ನಿಷೇಧಿತ ಪದ ಬಳಕೆ ಮಾಡಿದ್ದು ಖಂಡನೀಯ

Contributed bychandruhiremath06@gmail.com|Vijaya Karnataka

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಕೇಂದ್ರ ಬಜೆಟ್‌ಗೆ ವಿರೋಧ ವ್ಯಕ್ತಪಡಿಸುವಾಗ ಕ್ಷೌರಿಕ ಸಮುದಾಯದವರ ಕುರಿತು ನಿಷೇಧಿತ ಪದ ಬಳಸಿದ್ದಾರೆ. ಇದು ಸಮಾಜಗಳಿಗೆ ನೋವುಂಟು ಮಾಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಇಂತಹ ಪದ ಬಳಕೆ ಮಾಡುವುದು ಅಕ್ಷಮ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾಡ್‌ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ.

santosh lads use of prohibited words protests from the hadaap community

ವಿಕ ಸುದ್ದಿಲೋಕ ಕಲಬುರಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಬಜೆಟ್ ಗೆ ವಿರೋಧ ವ್ಯಕ್ತಪಡಿಸುವ ಭರದಲ್ಲಿಕ್ಷೌರಿಕ ಸಮುದಾಯದವರ ಕುರಿತು ನಿಷೇಧಿತ ಪದ ಬಳಕೆ ಮಾಡಿದ್ದು, ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಜಿಲ್ಲಾ ಹಡಪದ ಸಮಾಜ ಮತ್ತು ಸವಿತಾ ಸಮಾಜದ ಮುಖಂಡರು ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಹಡಪದ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣಾ ಸಿ.ಹಡಪದ ಮಾತನಾಡಿ, ಸಂತೋಷ್ ಲಾಡ್ ಹೇಳಿಕೆಯಿಂದ ನಮ್ಮ ಸಮಾಜಗಳಿಗೆ ನೋವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು, ಶಾಸಕರು ಜಾತಿ ನಿಂದನೆ ಪದ ಬಳಕೆ ಮಾಡುತ್ತಿದ್ದು, ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಲಾಡ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಭಗವಂತ ಹೊನ್ನಕಿರಣಗಿ, ಸೂರ್ಯಕಾಂತ ಬೆಣ್ಣೂರ, ಸುನೀಲ ಭಾಗಹಿಪ್ಪರಗಾ, ಮಲ್ಲಿಕಾರ್ಜುನ ಧಮ್ಮೂರ, ಶಂಕರ ಹರವಾರ, ಶರಣಬಸಪ್ಪ ಎಂ.ಸೂರ್ಯವಂಶಿ, ಶಾಂತು ಚನ್ನೂರ, ರಾಜು ಕೊಳ್ಳಿ, ಸೂರ್ಯಕಾಂತ ಬೆಣ್ಣೂರ ಇತರರಿದ್ದರು.