ಮೇ ವಾಪಸ್ ಆವುಂಗಾ
ಟೀಸರ್ ಬಿಡುಗಡೆ
ಬಾಲಿವುಡ್ ನಲ್ಲಿಇಮ್ತಿಯಾಜ್ ಅಲಿ ನಿರ್ದೇಶನದ ಹೊಸ ಸಿನಿಮಾ ‘ಮೇ ವಾಪಸ್ ಆವುಂಗಾ’ ಟೀಸರ್ ಶುಕ್ರವಾರ ಬಿಡುಗಡೆಯಾಗಿದೆ. ವೇದಾಂಗ್ ರೈನಾ , ಶಾರ್ವರಿ ವಾಘ್ ಮತ್ತು ದಿಲ್ಜಿತ್ ದೋಸಂಜ್ ನಟನೆಯ ಈ ರೊಮ್ಯಾಂಟಿಕ್ ಚಿತ್ರ ಜೂನ್ 12ರಂದು ತೆರೆಗೆ ಬರಲಿದೆ.
ಆಸ್ಕರ್ ಸಮಾರಂಭಕ್ಕೆ
ಬಿಗಿ ಭದ್ರತೆ
ಅಮೆರಿಕ-ಇಸ್ರೇಲ್ -ಇರಾನ್ ನಡುವಿನ ಯುದ್ಧದ ಬಿಸಿ ಈ ವರ್ಷದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ತಟ್ಟಿದೆ. ಕ್ಯಾಲಿಫೋರ್ನಿಯಾದಲ್ಲಿಮಾರ್ಚ್ 15ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇರಾನ್ ಅಮೆರಿಕದ ಮೇಲೆ ಡ್ರೋನ್ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಈ ಸಮಾರಂಭಕ್ಕೆ ಆಗಮಿಸುವವರಿಗೆ ಗರಿಷ್ಠ ಭದ್ರತೆಯನ್ನು ಅಕಾಡೆಮಿ ನೀಡಿದೆ.

