ನಿತ್ಯದರ್ಶಿ 13 ಮಾರ್ಚ್ 2026

Contributed bynetravati.krishnamurthy@timesgroup.com|Vijaya Karnataka

ಮೇಷ ರಾಶಿಯವರಿಗೆ ಅವಕಾಶಗಳು ಒಲಿದು ಬರಲಿವೆ. ವೃಷಭ ರಾಶಿಯವರು ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಮಿಥುನ ರಾಶಿಯವರಿಗೆ ವೃತ್ತಿರಂಗದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ಕರ್ಕ ರಾಶಿಯವರಿಗೆ ಕಟ್ಟಡ ಸಾಮಗ್ರಿಯಿಂದ ಲಾಭ. ಸಿಂಹ ರಾಶಿಯವರಿಗೆ ರಿಯಲ್ ಎಸ್ಟೇಟ್ ನಲ್ಲಿ ಅಧಿಕ ಕಮಿಷನ್. ಕನ್ಯಾ ರಾಶಿಯವರು ಹೊಸ ಉದ್ಯೋಗಕ್ಕೆ ಹೊಂದಿಕೊಳ್ಳಲು ಕಷ್ಟಪಡಬಹುದು. ತುಲಾ ರಾಶಿಯವರು ಕುಟುಂಬದಲ್ಲಿ ಜಾಗ್ರತೆ ವಹಿಸಬೇಕು. ವೃಶ್ಚಿಕ ರಾಶಿಯವರಿಗೆ ಜಯ ನಿಮ್ಮ ಪಾಲಿಗೆ ಒದಗುತ್ತದೆ. ಧನು ರಾಶಿಯವರು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬಹುದು. ಮಕರ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ.

daily predictions horoscopes for march 13 2026

ನಿತ್ಯದರ್ಶಿ 13 ಮಾರ್ಚ್ 2026

ಶ್ರೀಪತಿ ಭಟ್ | ಬೆಂಗಳೂರು

-------

ಮೇಷ: ಅವಕಾಶಗಳನ್ನು ಸದುಪಯೋಗಗೊಳಿಸಿಕೊಳ್ಳುವ ಕಾರ್ಯ ಸಂಪೂರ್ಣ ನಿಮಗೆ ಬಿಟ್ಟ ವಿಚಾರವಾಗಿದೆ. ಗೆಳೆಯನಿಂದ ಎರಡು ದಿನಗಳವರೆಗಿನ ಆರ್ಥಿಕ ಸಹಾಯ ನಿರೀಕ್ಷಿಸಬಹುದು. ಹಸಿರು ಬಣ್ಣ ಅದೃಷ್ಟ ತರುವುದು.

(ಶುಭ ಸಂಖ್ಯೆ: 9)

-------

ವೃಷಭ: ರಾಸಾಯನಿಕ ವಸ್ತುಗಳ ರಫ್ತು ವ್ಯವಹಾರ ನಡೆಸುವವರು ನಿಯಮಕ್ಕೆ ಬದ್ಧರಾಗಿರುವುದು. ಉತ್ತಮ. ವಿದೇಶದಲ್ಲಿಉದ್ಯೋಗ ಸಂಪಾದನೆಗಾಗಿ ಪ್ರಯತ್ನ ಮಾಡಬಹುದು. ವಾಹನ ಖರೀದಿಯ ಬಗ್ಗೆ ಚಿಂತನೆ ಬರಲಿದೆ.

(ಶುಭ ಸಂಖ್ಯೆ : 6)

-----------

ಮಿಥುನ : ಅನಿಸಿಕೆಗಳ್ನು ಉತ್ತಮ ರೀತಿಯಲ್ಲಿಅಭಿವ್ಯಕ್ತಿಗೊಳಿಸಲು ಸಾಧ್ಯವಾಗುವುದು ಕಷ್ಟ. ವೃತ್ತಿರಂಗದಲ್ಲಿಅದೃಷ್ಟದ ಬಾಗಿಲು ತೆರೆಯುವುದು. ಸರಕಾರಿ ಕೆಲಸಗಳು ಸುಲಭವಾಗಿ ಆಗಲಿವೆ.

(ಶುಭ ಸಂಖ್ಯೆ : 3)

--------

ಕರ್ಕ: ವ್ಯವಹಾರದಲ್ಲಿನ ಯೋಜನೆ ಮತ್ತು ಅವುಗಳ ಬೆಳವಣಿಗೆಯ ಬಗ್ಗೆ ಸಂಬಂಧಪಟ್ಟವರಿಂದ ವಿಚಾರ ತಿಳಿದುಕೊಳ್ಳುವುದು ಉತ್ತಮ. ಕಬ್ಬಿಣ ಮುಂತಾದ ಕಟ್ಟಡ ನಿರ್ಮಾಣದ ಸಾಮಗ್ರಿಗಳಿಂದ ಲಾಭವಿದೆ.

(ಶುಭ ಸಂಖ್ಯೆ : 8)

----------

ಸಿಂಹ : ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಅಧಿಕ ಕಮಿಷನ್ ದೊರೆಯಲಿದೆ. ಸಂದರ್ಭಗಳನ್ನು ಬಳಸಿಕೊಳ್ಳುವ ಜಾಣತನ ತೋರಿಸಿ. ವಕೀಲರು ಈ ದಿನ ಕೋರ್ಟ್ ಕೆಲಸಗಳಲ್ಲಿಅಧಿಕ ವರಮಾನ ಗಳಿಸುವರು.

(ಶುಭ ಸಂಖ್ಯೆ : 1)

--------

ಕನ್ಯಾ: ವ್ಯಾಪಾರಸ್ಥರು ವ್ಯಾಪಾರ ಸ್ಥಳದ ವಿನ್ಯಾಸವನ್ನು ಹೊಸದಾಗಿಡಲು ಪ್ರಯತ್ನಿಸಿ. ಮಹಿಳಾ ಉದ್ಯೋಗಿಗಳಿಗೆ ಜವಾಬ್ದಾರಿ ದೊರೆಯಲಿದೆ. ಹೊಸ ಉದ್ಯೋಗಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು.

(ಶುಭ ಸಂಖ್ಯೆ: 4)

----------

ತುಲಾ: ಹೊಂದಾಣಿಕೆಯ ಮನೋಭಾವ ಕಡಿಮೆಯಾಗುವುದರಿಂದ ಕುಟುಂಬದಲ್ಲಿಭಿನ್ನಾಭಿಪ್ರಾಯಗಳು ಉಂಟಾಗದಂತೆ ಜಾಗ್ರತೆ ವಹಿಸಿ. ಕೆಲಸ ನಿಧಾನವಾಗಿ ನಡೆದರೂ ಸಹಚರರು ಸಮರ್ಪಕವಾಗಿ ಪೂರೈಸಿ ಕೊಡುವರು.

(ಶುಭ ಸಂಖ್ಯೆ : 2)

----------

ವೃಶ್ಚಿಕ: ಬೇರೆಯವರ ಸಹಾಯ ಅಪೇಕ್ಷಿಸದೆ ವಿಶ್ವಾಸದಿಂದ ಕಾರ್ಯೋನ್ಮುಖರಾಗಿ, ಜಯ ನಿಮ್ಮ ಪಾಲಿಗೆ ಒದಗುತ್ತದೆ. ಪರಿಣತರ ಸಲಹೆ ಮತ್ತು ಸೂಚನೆಗಳೊಂದಿಗೆ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ.

(ಶುಭ ಸಂಖ್ಯೆ : 5)

----------

ಧನು: ಸಹಚರರಲ್ಲಿನ ವಾದ-ವಿವಾದಗಳಲ್ಲಿಸೋಲನ್ನು ಎದುರು ನೋಡಿದರೂ, ಅದರಿಂದಾಗಿ ತಪ್ಪು ತಿಳುವಳಿಕೆಗಳು ದೂರಾಗಲಿವೆ. ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಯೋಜನೆಗಳನ್ನು ರೂಢಿಸಿಕೊಳ್ಳಬಹುದು.

(ಶುಭ ಸಂಖ್ಯೆ : 7)

----------

ಮಕರ: ಮನೆಯಲ್ಲಿಮತ್ತು ಕುಟುಂಬ ಸದಸ್ಯರಲ್ಲಿಮಾತಿಗೆ ಮನ್ನಣೆ ದೊರೆಯಲಿದೆ. ಲೆಕ್ಕಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರ ದಿನಗಳು. ಪ್ರತ್ಠಿತ ಮತ್ತು ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ.

(ಶುಭ ಸಂಖ್ಯೆ : 3)

-------------

ಕುಂಭ: ತಪ್ಪುಗಳನ್ನು ತಿದ್ದಿ ಹೇಳುವಲ್ಲಿಹಿರಿಯ ಅಧಿಕಾರಿಗಳು ಈ ದಿನ ನಿಮ್ಮ ನೆರವಿಗೆ ನಿಲ್ಲುವರು. ಹೂವು-ಹಣ್ಣುಗಳ ರಫ್ತು ವ್ಯಾಪಾರದಲ್ಲಿನಿರೀಕ್ಷೆಗೂ ಮೀರಿದ ಲಾಭವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಸಾಧ್ಯತೆ.

(ಶುಭ ಸಂಖ್ಯೆ : 6)

-------------

ಮೀನ: ವೃತ್ತಿಯಲ್ಲಿಮೇಲಧಿಕಾರಿಗಳಿಗೂ ಹೊಂದಾಣಿಕೆ ಮೂಡುವುದು ಕಷ್ಟವೆನಿಸಲಿದೆ. ಪರಿಸ್ಥಿತಿಯ ಲಾಭ ಪಡೆಯಲು ವಿಫಲರಾಗಬೇಡಿ. ವಿದ್ಯಾರ್ಥಿಗಳಿಗೆ ಇದು ಸಾಧನೆಗೆ ಪೂರಕವಾದ ದಿನವಾಗಿದೆ.

(ಶುಭ ಸಂಖ್ಯೆ : 9)