ಇಂದು ಸೋಮನಾಥ ಜ್ಯೋತಿಲಿಂರ್ ಗ ದರ್ಶನ
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
ನಗರದ ಸೋಮೇಶ್ವರ ದೇವಾಲಯದಲ್ಲಿಮಾ.14ರಂದು ಬೆಳಗ್ಗೆ 7ರಿಂದ 11ರವರೆಗೆ ಸೋಮನಾಥ ಜ್ಯೋತಿಲಿಂರ್ ಗ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾದ ಸುನಿಲ್ ವೆಂಕಟೇಶ್ ತಿಳಿಸಿದರು.
ನಗರದ ರೋಜಿಪುರದ ಕೋರ್ಟ್ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಕಚೇರಿಯಲ್ಲಿನಡೆದ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು.
ನಾನಾ ದಾಳಿಕೋರರ ದಾಳಿಗೆ ಸಿಲುಕಿ ಛಿದ್ರವಾಗಿದ್ದ ಸೋಮನಾಥ ಜ್ಯೋತಿಲಿಂರ್ ಗವು ಸೀತಾ ರಾಮ ಶಾಸ್ತ್ರಿಯವರ ಮುಖೇನಾ 2025ರಲ್ಲಿಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಕೈಸೇರಿದೆ. ದೇಶದಾದ್ಯಂತ ಜನರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕೆಂಬ ಗುರೂಜಿ ಅವರ ಮಹತ್ವ ಸಂಕಲ್ಪದಿಂದ 1000 ವರ್ಷಗಳ ಪುರಾತನ ಸೋಮನಾಥ ಜ್ಯೋತಿಲಿಂರ್ ಗದ ದಿವ್ಯ ದರ್ಶನವನ್ನು ದೊಡ್ಡಬಳ್ಳಾಪುರ ಜನತೆಗೆ ಕಲ್ಪಿಸಲಾಗಿದೆ. ಈ ಲಿಂಗದಲ್ಲಿಕಬ್ಬಿಣಾಂಶ ಕಡಿಮೆ ಪ್ರಮಾಣದಲ್ಲಿಇದ್ದರೂ ಕೂಡ ಆಯಸ್ಕಾಂತಿಯ ಗುಣವನ್ನು ಹೊಂದಿದ್ದು, ಸಾಕಷ್ಟು ವಿಶೇಷತೆ ಒಳಗೊಂಡಿದೆ ಎಂದರು.
ವಿಶೇಷ ಪೂಜೆ:
ಮಾ.14 ರಂದು ನಗರದ ಸೋಮೇಶ್ವರ ದೇವಾಲಯಕ್ಕೆ ಬರುವ ಜ್ಯೋತಿರ್ಲಿಂಗಕ್ಕೆ ವಿಶೇಷ ರುದ್ರಾಭಿಷೇಕ ಆಯೋಜನೆ ಮಾಡಿದ್ದು, ಈ ಪೂಜಾ ಕಾರ್ಯಕ್ರಮದಲ್ಲಿ100 ದಂಪತಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮುಂಗಡ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಇದೆ. ದೊಡ್ಡಬಳ್ಳಾಪುರದ ನಂತರ ಚಿಕ್ಕಬಳ್ಳಾಪುರಕ್ಕೆ ಜ್ಯೋರ್ತಿಲಿಂಗ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಆರ್ಟ್ ಆಫ್ ಲಿವಿಂಗ್ ನ ಹಿರಿಯ ಶಿಕ್ಷಕ ವೆಂಕಟ ರಾಮು, ಸ್ವಯಂ ಸೇವಕರಾದ ಮಂಜುನಾಥ್ , ಶಿಲ್ಪಾ, ಸುನಿಲ್ ವೆಂಕಟೇಶ್ , ಮತ್ತಿತರರು ಹಾಜರಿದ್ದರು.
ಫೋಟೋ:1303ವಿಕೆ7:ದೊಡ್ಡಬಳ್ಳಾಪುರಕ್ಕೆ ಆಗಮಿಸುತ್ತಿರುವ ಜ್ಯೋತಿರ್ಲಿಂಗದ ದರ್ಶನಕ್ಕೆ ಸಂಬಂಧಿಸಿದಂತೆ ಆರ್ಟ್ ಆಫ್ ಲಿವಿಂಗ್ ಕಚೇರಿಯಲ್ಲಿಸುದ್ದಿಗೋಷ್ಠಿ ನಡೆಯಿತು.

