ಮಾ.17ರಂದು ಡಿವಿಜಿ 139ನೇ ಜನ್ಮದಿನಾಚರಣೆ

Contributed byprk.k73@gmail.com|Vijaya Karnataka

ಡಾ.ಡಿ.ವಿ.ಗುಂಡಪ್ಪ ಅವರ 139ನೇ ಜನ್ಮದಿನವನ್ನು ಮಾ.17ರಂದು ಡಿವಿಜಿ ಸರಕಾರಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ. 'ಡಿ.ವಿ.ಗುಂಡಪ್ಪ ಅವರಿಗೊಂದು ಗುಲಾಬಿ ನಮನ' ಎಂಬ ಹೆಸರಿನಡಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿವಿಜಿ ಅವರ ಪ್ರತಿಮೆಗೆ ಪುಷ್ಪ ನಮನ, ಛಾಯಾಚಿತ್ರ ವೀಕ್ಷಣೆ, ಕಗ್ಗ ವಾಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಗಣ್ಯರು ಭಾಗವಹಿಸಲಿದ್ದಾರೆ.

dvg 139th birth anniversary honoring the great kannada literary figure

ಡಿಸಿಗೆ ಆಹ್ವಾನ| ಅರ್ಥಪೂರ್ಣ ಆಚರಣೆಗೆ ಸೂಚನೆ

ವಿಕ ಸುದ್ದಿಲೋಕ ಮುಳಬಾಗಲು

ಡಾ.ಡಿ.ವಿ.ಗುಂಡಪ್ಪ ಅವರ 139ನೇ ಜನ್ಮ ದಿನಾಚರಣೆಯನ್ನು ಡಿವಿಜಿ ಸರಕಾರಿ ಶಾಲೆಯಲ್ಲಿಮಾ.17ರಂದು ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್ . ರವಿ ಅವರು ಮುಖ್ಯ ಶಿಕ್ಷಕ ಸಿ.ಸೊಣ್ಣಪ್ಪ ಅವರಿಗೆ ಆದೇಶ ಮಾಡಿದ್ದಾರೆ.

ಡಾ.ಡಿವಿಜಿ ಅವರ ಜನ್ಮ ದಿನಾಚರಣೆ ಆಹ್ವಾನ ಪತ್ರಿಕೆಯನ್ನು ಮುಖ್ಯ ಶಿಕ್ಷಕರಿಂದ ಪಡೆದ ನಂತರ ಅವರು ಮಾತನಾಡಿ, ನಾಡಿನ ಶ್ರೇಷ್ಠ ಕವಿಯಾಗಿರುವ ಡಿವಿಜಿ ಅವರ ಹೆಸರಿನಲ್ಲಿರುವ ಶಾಲೆ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಅವರ ಜನ್ಮ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿಮಾಡುವ ಮೂಲಕ ಉತ್ತಮ ಸಂದೇಶ ನೀಡಬೇಕು ಎಲ್ಲಾಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಕನ್ನಡಾಭಿಮಾನಿಗಳು, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಲು ಆಹ್ವಾನ ನೀಡುವಂತೆ ಸೂಚಿಸಿದರು. ಈ ಕಾರ್ಯಕ್ರಮದಲ್ಲಿನಾನೂ ಭಾಗವಹಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆ ಮುಖ್ಯ ಶಿಕ್ಷಕ ಸಿ.ಸೊಣ್ಣಪ್ಪ ಮಾತನಾಡಿ, ಡಿವಿಜಿ ಅವರ 139ನೇ ಹುಟ್ಟುಹಬ್ಬವನ್ನು ‘ಡಿ.ವಿ.ಗುಂಡಪ್ಪ ಅವರಿಗೊಂದು ಗುಲಾಬಿ ನಮನ’ ಎಂಬ ಹೆಸರಿನಡಿ ವಿಶೇಷವಾಗಿ ಆಚರಣೆ ಮಾಡಲಾಗುವುದು. ಡಿವಿಜಿ ಅವರ ಪ್ರತಿಮೆಗೆ ಪುಷ್ಪ ನಮನ, 100 ವರ್ಷಗಳ ನೆನಪಿನ ಛಾಯಾಚಿತ್ರ ವೀಕ್ಷಣೆ, ಕಗ್ಗದ ವಾಚನ, ನೃತ್ಯ, ಹಾಡುಗಳು ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿವಿಜಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಎಸ್ ಪಿ, ಎಎಎಸ್ ಪಿ, ತಹಸೀಲ್ದಾರ್ ಸೇರಿದಂತೆ ಇತರೆ ಗಣ್ಯರು ಕಾರ್ಯಕ್ರಮದಲ್ಲಿಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

13 ಎಂ.ಬಿ.ಎಲ್ ಪೋಟೋ 1 ಡಾ. ಡಿವಿಜಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಡಿವಿಜಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಸಿ.ಸೊಣ್ಣಪ್ಪ ಡಿಸಿ ಡಾ.ಎಂ.ಆರ್ .ರವಿ ಅವರಿಗೆ ಆಹ್ವಾನ ಪತ್ರಿಕೆ ನೀಡಿದರು.