ವಿಕ ಫೋಕಸ್ ( ಲೋಕಲ್ ಲೀಡ್ )
ಸ್ವಉದ್ಯೋಗಕ್ಕೆ ವರವಾದ ಪಿಎಂಎಫ್ ಎಂಇ
ಕಿರು ಆಹಾರ ಸಂಸ್ಕರಣೆ ಉದ್ಯಮಗಳಿಗೆ ಸಾಲ ಸೌಲಭ್ಯ ಒದಗಿಸುವ ಯೋಜನೆ | 5ವರ್ಷದಲ್ಲಿ17.58ಕೋಟಿ ರೂ. ಸಾಲ
((ಬ್ಯಾಂಕ್ ನಲ್ಲಿತಿರಸ್ಕೃತವಾಗುವ ಅರ್ಜಿಗಳು ಹೆಚ್ಚು))
ಆದರ್ಶ ಕೋಡಿ ಬೆಂಗಳೂರು ಗ್ರಾಮಾಂತರ
್ಚಧಿada್ಟsha.kಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಸ್ವಉದ್ಯೋಗದ ಭಾಗವಾಗಿ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ಪ್ರಗತಿಗೆ ಪೂರಕವಾದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ(ಪಿಎಂಎಫ್ ಎಂಇ) ಯೋಜನೆ ಅನುಷ್ಠಾನವಾಗುತ್ತಿದ್ದು, ಜಿಲ್ಲೆಯಲ್ಲಿಈ ಯೋಜನೆಯಡಿ ಕಳೆದ 5 ವರ್ಷದಲ್ಲಿ17ಕೋಟಿ ರೂ.ಗೂ ಹೆಚ್ಚು ಸಾಲಸೌಲಭ್ಯ ದೊರೆತಿದೆ.
ಪಿಎಂಎಫ್ ಎಂಇ ಯೋಜನೆಯನ್ನು ಆತ್ಮನಿರ್ಭರ ಭಾರತ ಅಭಿಯಾನದಡಿ 2021-22ರಿಂದ ಕೆಪೆಕ್ ಸಂಸ್ಥೆಯೂ ನಿರ್ವಹಣೆಗೆ ಮಾಡುತ್ತಿದೆ. ಈ ಯೋಜನೆಯ ಮೂಲಕ ಆಹಾರ ಸಂಸ್ಕರಣಾ ಉದ್ಯಮದಲ್ಲಿಅಸಂಘಟಿತ ಸೂಕ್ಷ್ಮ ಉದ್ಯಮಗಳ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ.
ಮಹಿಳೆಯರು ಸೇರಿದಂತೆ ಆಸಕ್ತರು ಹೊಸ ಸ್ವಉದ್ಯೋಗ ಆರಂಭಿಸಲು ಈ ಯೋಜನೆಯಡಿ ಪ್ರೋತ್ಸಾಹ ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾಲುದಾರಿಕೆಯಲ್ಲಿಈ ಯೋಜನೆಯಡಿ ಶೇ.50ರಷ್ಟು ಅಥವಾ ಗರಿಷ್ಠ 15 ಲಕ್ಷ ರೂ. ಸಹಾಯಧನದ ಮೂಲಕ ನೆರವು ಒದಗಿಸಲಾಗುತ್ತದೆ. ಜಿಲ್ಲೆಯಲ್ಲಿಕಳೆದ ಐದು ವರ್ಷದಲ್ಲಿ219 ಅರ್ಜಿಗಳು ಸಲ್ಲಿಕೆಯಾಗಿದ್ದು, 119 ಮಂದಿಗೆ ಸಾಲ ಸೌಲಭ್ಯವೂ ನಾನಾ ಬ್ಯಾಂಕ್ ಗಳ ಮೂಲಕ ದೊರೆತಿದೆ. 60 ಅರ್ಜಿಗಳು ತಿರಸ್ಕೃತಗೊಂಡಿದ್ದು, ಇದಕ್ಕೆ ಬ್ಯಾಂಕ್ ಗಳಲ್ಲಿಸಾಕಷ್ಟು ಕಾರಣಗಳನ್ನು ನೀಡಲಾಗಿದೆ. ಕೆಲ ಉದ್ಯಮಗಳಿಗೆ ಈ ಯೋಜನೆ ವರವಾಗಿ ಪರಿಣಮಿಸಿದೆ.
ಎಷ್ಟೆಷ್ಟು ಸಾಲ ಸೌಲಭ್ಯ?
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಕಳೆದ 5 ವರ್ಷದಿಂದ ಈ ಯೋಜನೆಯಡಿ ಸಾಲಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಈ ಯೋಜನೆಯ ಭಾಗವಾಗಿ 2021-22ರಲ್ಲಿ18 ಮಂದಿ ಫಲಾನುಭವಿಗಳಿಗೆ 3.062 ಕೋಟಿ ಸಾಲ ಮಂಜೂರಾಗಿದೆ. 2022-23ರಲ್ಲಿ25 ಫಲಾನುಭವಿಗಳಿಗೆ 3.623ಕೋಟಿ, 2023-24ರಲ್ಲಿ22 ಫಲಾನುಭವಿಗಳಿಗೆ 2.430ಕೋಟಿ, 2024-25ರಲ್ಲಿ20 ಫಲಾನುಭವಿಗಳಿಗೆ 3.298 ಕೋಟಿ, 2025-26ರಲ್ಲಿ35 ಫಲಾನುಭವಿಗಳಿಗೆ ಒಟ್ಟು 5.175ಕೋಟಿ ರೂ. ಸಾಲಸೌಲಭ್ಯ ನಾನಾ ಬ್ಯಾಂಕ್ ಗಳ ಮೂಲಕ ಬಿಡುಗಡೆಯಾಗಿದೆ. ಈ ಮೂಲಕ ಕಳೆದ 5 ವರ್ಷಗಳಲ್ಲಿಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಪಿಎಂಎಫ್ ಎಂಇ ಯೋಜನೆಯಡಿ ಒಟ್ಟು 17.588 ಕೋಟಿ ಸಾಲಸೌಲಭ್ಯವನ್ನು ನೀಡಲಾಗಿದೆ.
ಅರ್ಜಿ ತಿರಸ್ಕಾರಕ್ಕೆ ಕಾರಣ:
ಜಿಲ್ಲೆಯಲ್ಲಿಕಳೆದ 5ವರ್ಷದಲ್ಲಿಸಲ್ಲಿಕೆಯಾದ 219 ಅರ್ಜಿಗಳ ಪೈಕಿ 60 ಅರ್ಜಿಗಳು ಬ್ಯಾಂಕ್ ಗಳಲ್ಲಿತಿರಸ್ಕೃತಗೊಂಡಿವೆ. ಕೆಲ ಅರ್ಜಿದಾರರ ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿರುವುದು, ಸರಿಯಾದ ದಾಖಲೆಗಳನ್ನು ಬ್ಯಾಂಕ್ ಗೆ ಒದಗಿಸದಿರುವುದು, ಅವರು ನೀಡಿದ ಉದ್ಯಮದ ಪ್ಲಾತ್ರ್ಯನ್ ಸಮರ್ಪಕವಾಗಿಲ್ಲದಿರುವುದು, ಸಮೀಪದ ಬ್ಯಾಂಕ್ ಗಳನ್ನು ಸಂಪರ್ಕಿಸದಿರುವುದು, ಬ್ಯಾಂಕ್ ಸಿಬ್ಬಂದಿ ಸಂಪರ್ಕಕ್ಕೆ ಸಿಗದೇ ಇರುವುದು ಸೇರಿದಂತೆ ನಾನಾ ಕಾರಣಗಳಿಂದ ಅರ್ಜಿಗಳು ತಿರಸ್ಕಾರಗೊಳ್ಳುತ್ತಿದ್ದು, ಸಾಲಸೌಲಭ್ಯ ಸಿಗದಂತಾಗುತ್ತಿದೆ.
ಯಾವ್ಯಾವ ಉದ್ಯಮಗಳು?:
ಸಿರಿಧಾನ್ಯ ಹಾಗೂ ಇತರೆ ಧಾನ್ಯಗಳ ಸಂಸ್ಕರಣೆ, ಬೆಲ್ಲ-ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರೆಸ್ಟ್ ಆಯಿಲ್ , ಮೆಣಸಿನಪುಡಿ ಘಟಕಗಳು, ಶುಂಠಿ ಸಂಸ್ಕರಣಾ ಘಟಕಗಳು, ಮಸಾಲಾ ಉತ್ಪನ್ನಗಳು, ಕುಕ್ಕುಟ ಉತ್ಪನ್ನಗಳು, ನಾನಾ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಘಟಕಗಳನ್ನು ಆರಂಭಿಸಬಹುದಾಗಿದೆ.
ಜಿಲ್ಲೆಯಲ್ಲಿಪೌಲ್ಟಿ್ರ ಉದ್ಯಮಕ್ಕೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಜತೆಗೆ ಬೇಕರಿಯ ಆರಂಭಕ್ಕೂ ಯೋಜನೆಯಡಿಯಲ್ಲಿಅರ್ಜಿ ಸಲ್ಲಿಸುತ್ತಿದ್ದಾರೆ.
ಕೋಟ್ ,
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಈ ವರ್ಷ 34 ಮಂದಿಗೆ ಪಿಎಂಎಫ್ ಎಂಇ ಯೋಜನೆಯಡಿ ಸಾಲಸೌಲಭ್ಯ ಆಹಾರ ಸಂಸ್ಕರಣ ಉದ್ಯಮಕ್ಕೆ ನೀಡಲಾಗಿದೆ. ಕೆಲ ಅರ್ಜಿಗಳು ಮಾತ್ರ ಬ್ಯಾಂಕ್ ನಲ್ಲಿತಿರಸ್ಕೃತಗೊಂಡಿವೆ.
-ಕಲಾವತಿ | ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು ಗ್ರಾಮಾಂತರ.
ಕೋಟ್ ,
ಯೋಜನೆಯ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳಿಲ್ಲದೆ, ಇನ್ನಿತರೆ ಕಾರಣಗಳಿಂದ ಬ್ಯಾಂಕ್ ಗಳಲ್ಲಿಅರ್ಜಿ ತಿರಸ್ಕೃತವಾಗುತ್ತವೆ. ಈ ಬಗ್ಗೆ ಜನರಲ್ಲಿಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
-ರಾಮಾಂಜಿ | ಲೀಡ್ ಬ್ಯಾಂಕ್ ಮ್ಯಾನೇಜರ್ , ಬೆಂಗಳೂರು ಗ್ರಾಮಾಂತರ
ಫೋಟೋ:1303ವಿಕೆ1: ಸಾಂದರ್ಭಿಕ ಚಿತ್ರ.

