ಕಥೆ ಪುಸ್ತಕಗಳ ಅಧ್ಯಯನಕ್ಕೆ ಸಲಹೆ
ವಿಕ ಸುದ್ದಿಲೋಕ ಚಾಮರಾಜನಗರ
ಬಾಲ್ಯದಿಂದಲೂ ಉತ್ತಮ ಕಥೆ ಪುಸ್ತಕಗಳನ್ನು ಅಧ್ಯಯನ ಮಾಡಿ ಸಮಗ್ರ ವಿಕಾಸಕ್ಕೆ ಬುನಾದಿ ಹಾಕಿಕೊಳ್ಳಬೇಕು. ಶಿಕ್ಷಣ , ಕಲೆ ಸಾಹಿತ್ಯ , ಸಂಗೀತ, ನೃತ್ಯ, ನಾಟಕ ಚಿತ್ರಕಲೆ, ನಾನಾ ಆಸಕ್ತಿಯ ಕ್ಷೇತ್ರಗಳಲ್ಲಿಸಾಧನೆ ಮಾಡಬೇಕು ಎಂದು ಡಿವೈಎಸ್ಪಿ ಸ್ನೇಹರಾಜ್ ಸಲಹೆ ನೀಡಿದರು.
ನಗರದ ಡಾ.ಬಿ.ಆರ್ .ಅಂಬೇಡ್ಕರ್ ಭವನದಲ್ಲಿಯೂತ್ ಫಾರ್ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಚಿಗುರು ಕಾರ ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘‘ಸಾಧನೆ ಮಾಡಿರುವ ಎಲ್ಲರಿಗೂ ಬಾಲ್ಯದ ನೆನಪು ಸದಾ ಅಮರವಾಗಿರುತ್ತದೆ. ತಂದೆ ತಾಯಿ ಶಿಕ್ಷಕರು ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಿದಾಗ ಮಕ್ಕಳ ವಿಕಾಸ ಉಂಟಾಗಿ ಬೆಳವಣಿಗೆಗೆ ಸಹಾಯಕವಾಗುತ್ತದೆ. ನೂರಾರು ಉತ್ತಮ ಕಥೆಯ ಪುಸ್ತಕಗಳು ಇದ್ದು ಅವುಗಳನ್ನು ಸಂಗ್ರಹಿಸಿ ಓದಬೇಕು. ಪೋಷÜಕರು ಪುಸ್ತಕಗಳನ್ನು ತಾವು ಓದಿ ಮಕ್ಕಳು ಓದುವಂತೆ ಮಾಡುವುದು ಬಹಳ ಒಳ್ಳೆಯದು,’’ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಸರಕಾರಿ ಶಾಲೆಯಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ನಾನಾ ಆಟೋಟ ಸ್ಪರ್ಧೆ ನಡೆಸಲಾಯಿತು. ಬಳಿಕ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಉದ್ಯಮಿ ವೆಂಕಟನಾಗಪ್ಪಶೆಟ್ಟಿ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ . ಋುಗ್ವೇದಿ, ಸ್ತ್ರೀ ರೋಗ ತಜ್ಞೆ ಡಾ. ಶ್ವೇತಾ ಶಶಿಧರ್ , ಕೆ.ವಿ. ರಾಜಣ್ಣ, ಸೋಮವಾರಪೇಟೆ ಗುರುಪ್ರಸಾದ್ , ಯೂತ್ ಫಾರ್ ಸೇವಾ ಸಂಸ್ಥೆಯ ತೇಜನಾಯಕ್ , ವಿಷ್ಣು, ಡಾ. ಕಾರ್ತಿಕ್ ಸೇರಿದಂತೆ ಇತರರಿದ್ದರು.
ಫೋಟೋ ಉತ್ತುವಳ್ಳಿ ಮಹೇಶ್
==

