ಲೈವ್ ನಲ್ಲೇ ಬಿಕ್ಕಿಬಿಕ್ಕಿ ಅತ್ತ ಟಿವಿ ನಿರೂಪಕ!

Contributed byvijay.cheelange@timesgroup.com|Vijaya Karnataka

A shocking moment unfolded on Iranian state television as a news anchor wept live on air. The anchor was reporting the death of Iran's Supreme Leader Ayatollah Ali Khamenei. Khamenei was reportedly killed in a joint air strike by America and Israel. The anchor declared Khamenei a martyr. Another presenter vowed revenge against US President Trump for Khamenei's death.

emotional live scene tv anchor breaks down while reporting khameneis death video viral

ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾಅಲಿ ಖಮೇನಿ ಹತ್ಯೆಯ ಸುದ್ದಿಯನ್ನು ಸರಕಾರಿ ಸ್ವಾಮ್ಯದ ಸುದ್ದಿವಾಹಿನಿಯಲ್ಲಿಲೈವ್ ಮಾಡುತ್ತಿದ್ದ ವೇಳೆ ನಿರೂಪಕ ಬಿಕ್ಕಿಬಿಕ್ಕಿ ಅತ್ತ ಘಟನೆ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡಿದೆ. ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿಖಮೇನಿ ಹತ್ಯೆಗೀಡಾಗಿದ್ದಾರೆ ಎಂದು ಹೇಳುವಾಗ ನಿರೂಪಕ ಸಂಯಮ ಕಾಯ್ದುಕೊಳ್ಳಲು ಸಾಧ್ಯವಾಗದೇ ಕಣ್ಣೀರು ಹಾಕಿರುವುದು ವಿಡಿಯೊದಲ್ಲಿದಾಖಲಾಗಿದೆ. ಖಮೇನಿ ‘ಹುತಾತ್ಮ’ರಾಗಿದ್ದಾರೆ ಎಂದೂ ಅವರು ಘೋಷಿಸಿದರು.

ಸೇಡು ತೀರಿಸಿಕೊಳ್ಳುತ್ತೇವೆ: ಖಮೇನಿ ಸಾವಿನ ಬಗ್ಗೆ ವರದಿ ಮಾಡುವ ವೇಳೆ ಪ್ರೆಸ್ ಟಿವಿ ನಿರೂಪಕಿ ಮರಿಯಮ್ ಅಜರ್ಚೆರ್ ಕೂಡ ದುಃಖಿತರಾಗಿದ್ದರು. ‘‘ಈ ಯುದ್ಧ ಇಲ್ಲಿಗೆ ಮುಗಿದಿಲ್ಲ. ಖಮೇನಿ ಸಾವಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರಿ ಬೆಲೆ ತೆರೆಬೇಕಾಗುತ್ತದೆ. ಈ ಸಾವಿನ ಸೇಡನ್ನು ಇರಾನ್ ತೀರಿಸಿಕೊಳ್ಳಲಿದೆ,’’ ಎಂದೂ ಅವರು ಹೇಳಿದರು.