ಇರಾನ್ -ಇಸ್ರೇಲ್ ಯುದ್ಧ: 200 ಕಧಿನ್ನಧಿಡಿಧಿಗರ ರಧಿಕ್ಷಧಿಣೆಧಿಗೆ ಸಧಿರಧಿಕಾಧಿರದ ಕ್ರಧಿಮ

Contributed byDHANANJAYAGOWDA|Vijaya Karnataka

The Iran-Israel conflict has caused widespread fear in the Middle East. Over 200 Kannadigas are stranded as international flights are cancelled. The Karnataka government is coordinating with the Union External Affairs Ministry to ensure their safety and facilitate their return. Many travelers are facing difficulties at Kempegowda International Airport in Bengaluru due to flight disruptions.

iran israel war emergency measures to safeguard 200 kannada expatriates amid the crisis

ವಿಕ ಸುದ್ದಿಲೋಕ ಬೆಂಗಳೂರು

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿಯುದ್ಧ ಭೀತಿ ತೀವ್ರವಾಗಿ ಆವರಿಸಿದೆ. ಈ ಬಿಕ್ಕಟ್ಟಿನಿಂದಾಗಿ ಆತಂಕಗೊಂಡಿರುವ ಅನಿವಾಸಿ ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರ ಕಾರ್ಯ ಪ್ರವೃತ್ತವಾಗಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿರುವ ಕರ್ನಾಟಕದ ನಿವಾಸಿಗಳ ಪತ್ತೆ ಮಾಡಲು ಹಾಗೂ ಸುರಕ್ಷತೆ ಖಚಿತಪಡಿಸಿಕೊಳ್ಳಲು, ದೇಶದ ವಿದೇಶಾಂಗ ಸಚಿವಾಲಯದೊಂದಿಗೆ ನೇರ ಹಾಗೂ ನಿರಂತರವಾಗಿ ರಾಜ್ಯ ಸರಕಾರ ಸಮನ್ವಯ ಸಾಧಿಸುತ್ತಿದೆ. ಇದುವರೆಗೂ ವರದಿಯಾದಂತೆ 200 ಜನರು ಸಂಪರ್ಕಿಸಿದ್ದು, ಈ ಪಟ್ಟಿ ನಿರಂತರವಾಗಿ ನವೀಕೃತಗೊಳ್ಳುತ್ತಿದೆ ಎಂದು ವಿಪತ್ತು ನಿರ್ವಹಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪರಿಹಾರ ಆಯುಕ್ತ ಮುನೀಶ್ ಮೌದ್ಗಿಲ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿಪ್ರಯಾಣಿಕರ ಪರದಾಟ:

ಯುದ್ಧ ಪರಿಣಾಮವಾಗಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿಭಾರಿ ವ್ಯತ್ಯಯ ಉಂಟಾಗಿದೆ. ಬೆಂಗಳೂರಿಂದ ಅಬುಧಾಬಿ, ದುಬೈ ಮತ್ತು ಬಹರೇನ್ ಸೇರಿದಂತೆ ಮಧ್ಯಪ್ರಾಚ್ಯದ ವಿವಿಧ ರಾಷ್ಟ್ರಗಳಿಗೆ ಹೋಗಬೇಕಿದ್ದ ವಿಮಾನಗಳು ರದ್ದಾಗಿವೆ. ಪರಿಣಾಮ, ಭಾನುವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಹಲವಾರು ಪ್ರಯಾಣಿಕರು ಸಿಲುಕಿ, ಪರದಾಡುವಂತಾಯಿತು.

ಏರ್ ಇಂಡಿಯಾ ಮತ್ತು ಇಂಡಿಗೊ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಸುರಕ್ಷತಾ ಕಾಳಜಿಯನ್ನು ಉಲ್ಲೇಖಿಸಿ ಮಧ್ಯಪ್ರಾಚ್ಯದಲ್ಲಿಹಲವಾರು ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಪ್ರಯಾಣಿಕರು ಮರು ಬುಕಿಂಗ್ ಮತ್ತು ಮರುಪಾವತಿ ಬಯಸುತ್ತಿರುವುದರಿಂದ ಬೆಂಗಳೂರಿನ ವಿಮಾನಯಾನ ಕೌಂಟರ್ ಗಳಧಿಲ್ಲಿದೀರ್ಘ ಸರತಿ ಸಾಲುಗಳು ಕಂಡು ಬಂದವು.

‘‘ದಿಧಿಲ್ಲಿಧಿಯಿಂದ ಬೆಂಗಳೂರಿಗೆ ಮತ್ತು ಮುಂದೆ ಅಬುಧಾಬಿಗೆ ಹೋಗುವ ನನ್ನ ವಿಮಾನವನ್ನು ರದ್ದುಗೊಳಿಸಿಧಿದೆ. ಅವರು ಬೇರೆ ಮಾರ್ಗವನ್ನು ನೀಡಿದರು. ಆದರೆ, ನಾನು ರದ್ದುಗೊಳಿಸುಧಿವುಧಿದಧಿನ್ನೇ ಆಯ್ಕೆ ಮಾಡಿಕೊಂಡೆ. ಸೇವೆಗಳು ಯಾವಾಗ ಪುನರಾರಂಭಗೊಳ್ಳುತ್ತವೆ ಎಂಬುದರ ಕುರಿತು ಸ್ಪಷ್ಟತೆ ಇಧಿಲ್ಲ,ಧಿ’’ ಎಂದು ಪ್ರಧಿಯಾಧಿಣಿಧಿಕಧಿರೊಧಿಬ್ಬಧಿರು ಪ್ರಧಿತಿಧಿಕ್ರಿಧಿಯಿಧಿಸಿಧಿದರು.

‘‘ಕದನ ವಿರಾಮ ಜಾರಿಯಾಗುವವರೆಗೆ ವಿಮಾನಗಳು ಪುನರಾರಂಭ ಆಗದಿರಬಹುದು ಎಂದು ನಮಗೆ ತಿಳಿಸಲಾಗಿದೆ. ನಮ್ಮ ಕಚೇರಿಗಳು ಮತ್ತು ಕೆಲಸಗಳು ಅಲ್ಲಿವೆ. ಈಗ ಬಹರೇನ್ ಗೆ ಯಾವುದೇ ವಿಮಾನವಿಲ್ಲ,’’ಎಂದು ಮಧಿತ್ತೊಬ್ಬ ಪ್ರಯಾಣಿಕಧಿರು ತಿಳಿಸಿದರು.

ತುರ್ತು ಕಾರ್ಯಾಚರಣೆ ಕೇಂದ್ರ

ಯುದ್ಧದ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಇರಾನ್ , ಇಸ್ರೇಲ್ , ಲೆಬನಾನ್ , ಸೌದಿ ಅರೇಬಿಯಾ, ಬಹರೇನ್ , ಒಮನ್ , ಇರಾಕ್ , ಜೋರ್ಡಾನ್ , ಕುವೈತ್ , ಯುಎಇ ಮತ್ತು ಕತಾರ್ ನಲ್ಲಿವಾಯುಪ್ರದೇಶಗಳು ಸಂಪೂರ್ಣ ಬಂದ್ ಆಗಿವೆ. ವಿಶೇಷವಾಗಿ ದುಬೈನಲ್ಲಿದೊಡ್ಡ ಸಂಖ್ಯೆಯಲ್ಲಿಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರಕಾರ ಕ್ರಮ ವಹಿಸಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ನೆರವು ನೀಡಲು ಹಾಗೂ ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ರಾಯಭಾರಿ ಕಚೇರಿಗಳ ಮಾರ್ಗಸೂಚಿಗಳನ್ನು ಅಪ್ ಡೇಟ್ ಮಾಡಲು ರಾಜ್ಯ ಮತ್ತು ಜಿಲ್ಲಾಮಟ್ಟದ ತುರ್ತು ಕಾರ್ಯಾಚರಣೆ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿಸಿಲುಕಿರುವ ಕನ್ನಡಿಗರು ಸುರಕ್ಷತೆಗಾಗಿ ಅಲ್ಲಿನ ಸ್ಥಳೀಯ ಸರಕಾರಗಳ ಸಲಹೆ ಮತ್ತು ರ್ಮಾಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಬಂಧಿತ ಭಾರತೀಯ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ದೂರವಾಣಿ ಸಂಖ್ಯೆ - 080 -22340676/ 22253707 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಕೇಂದ್ರಕ್ಕೆ ಮುಖ್ಯ ಕಾರ್ಯದರ್ಶಿ ಪತ್ರ

ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿಸಿಲುಕಿರುವ ಕನ್ನಡಿಗರ ರಕ್ಷಣೆ ಮತ್ತು ಸುರಕ್ಷಿತ ವಾಪಸಾತಿಗಾಗಿ ಅಗತ್ಯ ಕ್ರಮ ವಹಿಸಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಭಾನುವಾರ ಪತ್ರ ಬರೆದಿದ್ದಾರೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗೂ ಪತ್ರ ಬರೆದಿರುವ ಅವರು, ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ, ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಅಗತ್ಯ ಪ್ರಮಾಣದ ವಿಮಾನಗಳ ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ.

ಮಧ್ಯಪ್ರಾಚ್ಯದಲ್ಲಿಸಿಲುಕಿಕೊಂಡ ಕನ್ನಡಿಗರು

* ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಖಾಸಗಿ ಕಾರ್ಯಕ್ರಮದ ನಿಮಿತ್ತ ಪತಿಯೊಂದಿಗೆ ದುಬೈಗೆ ತೆರಳಿದ್ದಾರೆ. ‘‘ಹೋಟೆಲ್ ನಲ್ಲಿನಾನು ಸೇರಿದಂತೆ 70 ಜನರು ಸುರಕ್ಷಿತವಾಗಿದ್ದೆವೆ. ದುಬೈನಿಂದ ದೇಶಕ್ಕೆ ಬರಬೇಕಿದ್ದ ವಿಮಾನ ರದ್ದಾಗಿದೆ. ಹೀಗಾಗಿ ಇಲ್ಲೇ ಉಳಿಯುವಂತಾಗಿದೆ,’’ ಎಂದು ಫೇಸ್ ಬುಕ್ ಲೈವ್ ಮೂಲಕ ಹೇಳಿದ್ದಾರೆ.

* ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ 15 ಮತ್ತು ಚಿತ್ರದುರ್ಗ ಜಿಲ್ಲೆಯ 15 ಪ್ರವಾಸಿಗರು ಶಾರ್ಜಾದಲ್ಲಿಸಂಕಷ್ಟಕ್ಕೆ ಸಿಲುಕಿದ್ದಾರೆ.

* ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಮಕ್ಕಳ ತಜ್ಞ ಡಾ.ಕೆ.ಶಿವರಾಜ್ ಹಾಗೂ ಅವರ ಪತ್ನಿ ಜ್ಯೋತಿ ಅವರು ದುಬೈಗೆ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದು, ವಿಮಾನ ಸೇವೆ ಸ್ಥಗಿತಗೊಂಡಿರುವುದರಿಂದ ಅಲ್ಲಿಯೇ ಉಳಿಯುವಂತಾಗಿದೆ.

* ಬಾಗಲಕೋಟೆಯ ವಿದ್ಯಾರ್ಥಿ ಧ್ರುವ ಹೊಕ್ರಾಣಿ ದುಬೈನ ವಿಶ್ವವಿದ್ಯಾಲಯದಲ್ಲಿಧ್ರುವ ಎಂಬಿಎ ಓದುತ್ತಿದ್ದಾರೆ. ಯುದ್ಧದ ವಾತಾವರಣದ ಹಿನ್ನೆಲೆಯಲ್ಲಿಹಾಸ್ಟೆಲ್ ನಿಂದ ಹೊರಗೆ ಬಾರದಂತೆ ಅಲ್ಲಿನ ಆಡಳಿತ ಸೂಚಿಸಿದೆ. ಬಾಗಲಕೋಟೆ ಮೂಲದ ಎಂಜಿನಿಯರ್ ಅರವಿಂದ ಕತಾರ್ ನ ದೋಹಾದಲ್ಲಿಕಾರ್ಯನಿರ್ವಹಿಸುತ್ತಿದ್ದು, ಅವರು ಸುರಕ್ಷಿತವಾಗಿದ್ದಾರೆ.

* ಬೀಳಗಿಯ ಎಂಜಿನಿಯರ್ ಗಿರೀಶ ಕೆರೂರ ಕಾರ್ಯ ನಿಮಿತ್ತ ದುಬೈ ಮೂಲಕ ಪ್ಯಾರಿಸ್ ಗೆ ತೆರಳುತ್ತಿದ್ದರು. ದುಬೈನಲ್ಲಿವಿಮಾನ ಹಾರಾಟ ಸ್ಥಗಿತಗೊಳಿಸಿದ ಕಾರಣ ಸದ್ಯ ಅಲ್ಲಿನ ಹೋಟೆಲ್ ನಲ್ಲಿವಾಸ್ತವ್ಯ ಹೂಡಿದ್ದಾರೆ. ‘‘ಪ್ಯಾರಿಸ್ ಗೆ ತೆರಳುವ ವಿಮಾನ ರದ್ದುಗೊಂಡಿದ್ದು, ಭಾರತಕ್ಕೆ ವಾಪಸಾಗಲಿದ್ದೇನೆ’’ ಎಂದು ಗಿರೀಶ ತಿಳಿಸಿದ್ದಾರೆ.

* ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮುಲದ ಅರಬ್ ರಾಷ್ಟ್ರಗಳಲ್ಲಿನೆಲೆಸಿರುವ ಸಾವಿರಾರು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸ್ವದೇಶಗಳತ್ತ ಪ್ರಯಾಣವೂ ದುಸ್ತರವಾಗಿ ಪರಿಣಮಿಸಿದೆ. ಭಾನುವಾರ ಮೆಕ್ಕಾಗೆ ತೆರಳಬೇಕಾಗಿದ್ದ 50ಕ್ಕೂ ಹೆಚ್ಚು ಭಟ್ಕಳದವರು ಪರದಾಡುವಂತಾಗಿದೆ.

ಬಾಕ್ಸ್

ದುಬೈನಲ್ಲಿಸಿಲುಕಿದ ಶಾಸಕರ ಕುಟುಂಬ

ದುಬೈ ಪ್ರವಾಸಕ್ಕೆ ತೆರಳಿದ್ದ ಬಳ್ಳಾರಿ ಜಿಲ್ಲೆಯ ಮೂರು ವರ್ಷದ ಮಗು, 16 ಮಹಿಳೆಯರು, 15 ಪುರುಷರು ದುಬೈನಲ್ಲಿಸಿಲುಕ್ಕಿದ್ದಾರೆ. ಶಾಸಕ ನಾರಾ ಭರತ್ ರೆಡ್ಡಿ ಅವರು ತಮ್ಮ ಪತ್ನಿ, ಮೂರು ವರ್ಷದ ಪುತ್ರಿ ಸೇರಿದಂತೆ ಕುಟುಂಬದ ಐವರೊಂದಿಗೆ ಪ್ರವಾಸಕ್ಕೆ ತೆರಳಿದ್ದು, ಅವರೂ ಅಲ್ಲಿಯೇ ಉಳಿದುಕೊಂಡಿದ್ದಾರೆ. ದುಬೈನಲ್ಲಿಸಿಲುಕಿರುವ ಪ್ರವಾಸಿಗರು ತಮ್ಮನ್ನು ರಕ್ಷಿಸುವಂತೆ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ವಿಡಿಯೊ ಕರೆ ಮತ್ತು ಸಂದೇಶಗಳ ಮೂಲಕ ಮನವಿ ಮಾಡಿದ್ದಾರೆ. ನಾಗೇಂದ್ರ ಅವರು ಈ ವಿಷಯವನ್ನು ಸಿಎಂ ಗಮನಕ್ಕೆ ತಂದಿದ್ದಾರೆ.

ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತನ್ನಿ

‘‘ಶಾರ್ಜಾ ವಿಮಾನ ನಿಲ್ದಾಣದ ಹೊರಗೆ ಆಹಾರ, ನೀರು ಇಲ್ಲದೇ ಪರಿತಪಿಸುತ್ತಿದ್ದೇವೆ. ಅಮೆರಿಕ, ಇಸ್ರೇಲ್ ಗಳು ಇರಾನ್ ಮೇಲೆ ದಾಳಿಯ ಬೆನ್ನಿಗೆ ಯುಎಇಯ ದುಬೈ, ಕತಾರ್ ನ ದೋಹಾ, ಸೌದಿ ಅರೇಬಿಯಾದ ರಿಯಾದ್ ನಲ್ಲೂಸ್ಪೋಟದ ಸದ್ದು ಜೋರಾಗಿದೆ. ಇದರಿಂದ ಭಯ ಭೀತರಾಗಿದ್ದೇವೆ. ನಿಮ್ಮ ದೇಶಕ್ಕೆ ಹೋಗುವ ವ್ಯವಸ್ಥೆ ನೀವೇ ಮಾಡಿಕೊಳ್ಳಬೇಕು ಎಂದು ವಿಮಾನ ನಿಲ್ದಾಣ ಸಿಬ್ಬಂದಿ ಹೇಳಿದ್ದಾರೆ. ಈ ಸಂಕಷ್ಟ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಸ್ಥಳೀಯರು ಲಾಡ್ಜಿಂಗ್ ಮತ್ತು ಬೋರ್ಡಿಂಗ್ ವ್ಯವಸ್ಥೆಗಾಗಿ ದಿನಕ್ಕೆ 10 ಸಾವಿರ ರೂ. ಸುಲಿಗೆ ಮಾಡುತ್ತಿದ್ದಾರೆ. ಈಗಾಗಲೇ ಪ್ರವಾಸ ಮುಗಿಸಿದ್ದರಿಂದ ನಮ್ಮ ಬಳಿ ಹಣ ಖಾಲಿಯಾಗಿದೆ. ಹೆಲ್ಪ್ ಲೈನ್ ತೆರೆಯುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಧಿಕಾರಿಗಳು ನಮ್ಮನ್ನು ರಕ್ಷಿಸಬೇಕು,’’ ಎಂದು ದಾವಣಗೆರೆ ಜಿಲ್ಲೆಯ ಪ್ರವಾಸಿಗರು ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದ್ದಾರೆ.