ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಕ್ರಮ: ಜಿಲ್ಲಾಧಿಕಾರಿ ಡಾ.ಎಂ.ಆರ್ .ರವಿ
ವಿಕ ಸುದ್ದಿಲೋಕ ಕೋಲಾರ
ಜಿಲ್ಲೆಯಲ್ಲಿಮಣ್ಣಿನ ಆರೋಗ್ಯ ರಕ್ಷಣೆ ಮತ್ತು ಪರಿಸರ ಸ್ನೇಹಿ ಕೃಷಿಯನ್ನು ಉತ್ತೇಜಿಸಲು ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ1,000 ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿಗೆ ಪರಿವರ್ತಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್ .ರವಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿನಡೆದ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಯೋಜನೆಯು 2024-25ರಿಂದ 2026-27ರ ವರೆಗೆ ಮೂರು ವರ್ಷಗಳ ಅವಧಿಗೆ ಅನುಷ್ಠಾನಗೊಳ್ಳಲಿದೆ. ಶ್ರೀನಿವಾಸಪುರ ತಾಲೂಕಿನ ಯಲ್ದೂರು ಹೋಬಳಿಯ 500 ಹೆಕ್ಟೇರ್ ಮತ್ತು ಮುಳಬಾಗಲು ತಾಲೂಕಿನ ದುಗ್ಗಸಂದ್ರ ಹೋಬಳಿಯ 500 ಹೆಕ್ಟೇರ್ ಪ್ರದೇಶದಲ್ಲಿತಲಾ ಒಂದೊಂದು ಗುಚ್ಛಗಳನ್ನು (ಇ್ಝ್ಠsಠಿಛ್ಟಿs) ರಚಿಸಲಾಗಿದೆ ಎಂದು ತಿಳಿಸಿದರು.
ಯೋಜನೆಯಡಿ ಆಯ್ಕೆಯಾದ ರೈತರಿಗೆ ಪ್ರತಿ ಹೆಕ್ಟೇರ್ ಗೆ ಮೂರು ವರ್ಷಗಳ ಅವಧಿಯಲ್ಲಿಒಟ್ಟು 15,000 ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುವುದು. ಎರೆಹುಳು ಗೊಬ್ಬರ ಘಟಕ, ಬಯೋಡೈಜೆಸ್ಟರ್ , ಅಜೋಲ ತೊಟ್ಟಿ, ಜೇನು ಸಾಕಾಣಿಕೆ ಹಾಗೂ ಹಸಿರೆಲೆ ಗೊಬ್ಬರ ಬೀಜ ವಿತರಣೆಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು. ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿಉತ್ತಮ ಬೆಲೆ ದೊರಕಿಸಿಕೊಡಲು Pಎಖ (Pa್ಟಠಿಜ್ಚಿಜಿpaಠಿಟ್ಟy ಎ್ಠa್ಟa್ಞಠಿಛಿಛಿ ಖysಠಿಛಿಞ) ಅಡಿಯಲ್ಲಿಸಾವಯವ ಪ್ರಮಾಣೀಕರಣ ಮಾಡಲಾಗುವುದು ಎಂದರು.
ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಬೆಂಬಲ ಸಂಸ್ಥೆಯಾಗಿ ಎನ್ .ಆರ್ .ಡಿ.ಎಸ್ ಮತ್ತು ಪ್ರಮಾಣೀಕರಣ ಸಂಸ್ಥೆಯಾಗಿ ಸಿಕ್ಟೀನ್ ದೊಡ್ಡಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಈ ವ್ಯಾಪ್ತಿಯ 29 ಗ್ರಾಮಗಳಲ್ಲಿರೈತ ಗುಂಪುಗಳ ರಚನೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ, ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳುವುದು ಹಾಗೂ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ರೈತರ ಆದಾಯವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿಜಿಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್ , ತೋಟಗಾರಿಕೆ ಉಪ ನಿರ್ದೇಶಕ ಕುಮಾರಸ್ವಾಮಿ, ಜಿಲ್ಲಾಸಂಖ್ಯಾ ಸಂಗ್ರಹಣಾಧಿಕಾರಿ ರಮೇಶ್ , ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಮಂಜುನಾಥರೆಡ್ಡಿ, ಡಾ.ರಾಧಾಕೃಷ್ಣ, ಪ್ರಗತಿ ಪರ ರೈತ ನೆನಮನಹಳ್ಳಿ ಚಂದ್ರಶೇಖರ್ , ಸಾವಯವ ಕೃಷಿಕರ ಸಂಘದ ಅಧ್ಯಕ್ಷ ರೆಡ್ಡಪ್ಪ, ನಾನಾ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ವಿಷಯ ಪರಿಣಿತರು ಮತ್ತು ಪಿಕೆವೈ ಸೇವಾ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
=
ಫೋಟೋಕ್ಯಾಪ್ಷನ್ : ಜಿಲ್ಲಾಧಿಕಾರಿ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿನಡೆದ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಡಿಸಿ ಡಾ.ಎಂ.ಆರ್ .ರವಿ ಮಾತನಾಡಿದರು. (13ಕೆಪಿಎಚ್ 3)

