(ಚಿತ್ರ ಅದಲು ಬದಲಾಗಿದೆ. ನೋಡಿ ಸರಿಪಡಿಸಿಕೊಳ್ಳಿ)
ವಿಕ ಸುದ್ದಿಲೋಕ ಕೆಜಿಎಫ್
ವಿವೇಕಾನಂದರ ಪ್ರಕಾರ ಯುವಕ ಎಂದರೆ ಕೇವಲ ವಯಸ್ಸಿನಿಂದಲ್ಲ, ಯಾರಲ್ಲಿಕಲಿಯುವ ಆಸಕ್ತಿ ಮತ್ತು ಜಗತ್ತನ್ನು ಬದಲಿಸುವ ಛಲವಿದೆಯೋ ಅವರೇ ನಿಜವಾದ ಯುವಕರು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್ .ಎನ್ .ರಾಜಗೋಪಾಲಗೌಡ ತಿಳಿಸಿದರು.
ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಾಚರಣೆ ಕಾರ ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಇತಿಹಾಸದಲ್ಲಿಯುವಶಕ್ತಿಯನ್ನು ಜಾಗೃತಗೊಳಿಸಿದ ಮಹಾನ್ ಪುರುಷರಲ್ಲಿಸ್ವಾಮಿ ವಿವೇಕಾನಂದರು ಅಗ್ರಗಣ್ಯರು. ಅವರ ಜನ್ಮದಿನವನ್ನು ’ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸುವುದು ಕೇವಲ ಸಂಪ್ರದಾಯವಲ್ಲ, ಅದು ಯುವಜನತೆಗೆ ತಮ್ಮ ಜವಾಬ್ದಾರಿಯನ್ನು ನೆನಪಿಸುವ ಮಹತ್ವದ ದಿನ. ಇಂದಿನ ವೇಗದ ಜಗತ್ತಿನಲ್ಲಿ, ತಂತ್ರಜ್ಞಾನದ ನಡುವೆ ಬೆಳೆಯುತ್ತಿರುವ ‘ಜೆನ್ -ಜಿ’ ಪೀಳಿಗೆಗೆ ವಿವೇಕಾನಂದರ ಮಾತುಗಳು ಕೇವಲ ನುಡಿಮುತ್ತಗಳಲ್ಲ, ಅವು ಇಂದಿನ ಬದುಕಿನ ಯಶಸ್ಸಿನ ಮಂತ್ರಗಳಾಗಿವೆ ಎಂದರು.
ವಿವೇಕಾನಂದರ ಪ್ರಸಿದ್ಧ ನುಡಿಯಾದ ‘ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಮಾತು ಇಂದಿನ ಯುವಕರಿಗೆ ಅತ್ಯಂತ ಅವಶ್ಯಕ. ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗಿ ವಿಚಲಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿವಿವೇಕಾನಂದರ ಚಿಂತನೆಯಾದ ‘ಒಂದು ವಿಚಾರವನ್ನು ಆಯ್ದುಕೊಳ್ಳಿ, ಅದನ್ನು ನಿಮ್ಮ ಜೀವನವಾಗಿಸಿಕೊಳ್ಳಿ, ಅದರ ಬಗ್ಗೆಯೇ ಯೋಚಿಸಿ, ಅದರ ಕನಸು ಕಾಣಿರಿ’ ಎಂಬ ತತ್ವವು ಏಕಾಗ್ರತೆಯನ್ನು ಹೆಚ್ಚಿಸಲು ಪೂರಕವಾಗಿದೆ. ಯಾವುದೇ ಒಂದು ಕ್ಷೇತ್ರದಲ್ಲಿಪರಿಣತಿ ಪಡೆಯಲು ಈ ರೀತಿಯ ಸಮರ್ಪಣಾ ಮನೋಭಾವ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿಯಶಸ್ಸಿಗೆ ದಾರಿಯಾಗುತ್ತದೆ ಎಂದರು.
ಸೈಬರ್ ಠಾಣೆ ಇನ್ಸ್ ಪೆಕ್ಟರ್ ಲಕ್ಷ್ಮೇನಾರಾಯಣ್ ಮಾತನಾಡಿ, ಈ ಆಧುನಿಕ ಜಮಾನಾದಲ್ಲಿಸೈಬರ್ ಕ್ರೈಂ ಅಧಿಕವಾಗುತ್ತಲೇ ಇದೆ. ಸಂದೇಶಗಳು, ಫೋನ್ ಕರೆಗಳ ಮೂಲಕ ನಿಮ್ಮನ್ನು ಸಂಪರ್ಕಿಸುವ ಸೈಬರ್ ಕ್ರಿಮಿನಲ್ ಗಳು ಬಳಿಕ ಮೋಸದಿಂದ ನಿಮ್ಮ ಬ್ಯಾಂಕ್ ಖಾತೆ, ವೈಯಕ್ತಿಕ ವಿವರಗಳಿಗೆ ಕನ್ನ ಹಾಕಿ ಸಂಕಷ್ಟಕ್ಕೆ ತಳ್ಳುತ್ತಾರೆ. ಹೀಗಾಗಿ ಇಂತಹ ಅಕ್ರಮಗಳ ಬಗೆಗೆ ಯುವಕರು ಬಲು ಎಚ್ಚರಿಕೆಯಿಂದ ಇರಬೇಕಾದದ್ದು ಬಹಳ ಅಗತ್ಯ ಎಂದರು.
ಇಂತಹ ಮೋಸಗೊಳಿಸುವ ತಂತ್ರಗಳಿಗೆ ಬಲಿಯಾಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಜನರಿಗೆ ಅರಿವು ಮೂಡಿಸಲು ಹಾಗೂ ಆಮಿಷಗಳಿಂದ ಕೂಡಿರುವ ಇ ಮೇಲ್ ಗಳು ಮತ್ತು ಸಂದೇಶಗಳಿಗೆ ಬಲಿಯಾಗುವುದನ್ನು ತಡೆಯಲು, ಇಂತಹ ದಾಳಿಗಳ ಕುರಿತು ಕೆಲವು ಪ್ರಮುಖ ವಿವರಗಳನ್ನು ನೀಡಿದೆ. ಸೈಬರ್ ಕ್ರೈಮ್ ಗಳಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿಇದು ಬಹಳ ಉಪಯುಕ್ತ ಮಾಹಿತಿಯೂ ಆಗಿದೆ. ಅಮಾಯಕರನ್ನು ಮೋಸಗೊಳಿಸುವ ಕ್ರಿಮಿನಲ್ ಗಳ ಕೆಲವು ತಂತ್ರಗಳಿಂದ ಭಯ ಬೀಳಬೇಡಿ... ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು.
ಮೊಬೈಲ್ ಬಿಟ್ಟು ಪತ್ರಿಕೆ ಓದಿ: ದೈಹಿಕ ಶಿಕ್ಷಣ ಪರಿವೀಕ್ಷಕ ನಾರಾಯಣಸ್ವಾಮಿ ಮಾತನಾಡಿ, ಶಾಲಾ ಮಕ್ಕಳಲ್ಲಿಹೆಚ್ಚುತ್ತಿರುವ ಮೊಬೈಲ್ ಗೀಳನ್ನು ಬಿಟ್ಟು ಪತ್ರಿಕೆ ಮತ್ತು ಪುಸ್ತಕಗಳನ್ನು ಓದಿ ನಿಮ್ಮ ವಿದ್ಯಾಭ್ಯಸದ ಗುಣಮಟ್ಟವನ್ನು ಹೆಚ್ಚಿಕೊಳ್ಳಿ, ತಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರವಿಡುವುದೇ ಪೋಷಕರಿಗೆ ಸವಾಲಾಗಿದೆ. ಈ ನಿಟ್ಟಿನಲ್ಲಿವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರು ಒಳಗೊಂಡು ಮಕ್ಕಳ ಕೈಯಲ್ಲಿಪುಸ್ತಕವನ್ನು ಹಿಡಿಯುವಂತೆ ಮನವೊಲಿಸಬೆಕೆಂದು ತಿಳಿಸಿದರು.
ಈ ಸಂದರ್ಭದಲ್ಲಿಪ್ರಾಂಶುಪಾಲ ನಾಗರಾಜ್ , ಪ್ರೈಂ ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಹಾಗೂ ಕಾಲೇಜಿನ ಉಪನ್ಯಾಸಕರು, ರಾಷ್ಟ್ರೀಯ ಯುವ ದಿನದ ಕಾರ ್ಯಕ್ರಮದಲ್ಲಿಭಾಗವಹಿಸಿದ್ದರು.
12ಕೆಜಿಎಫ್ 2: ಗಿಡಕ್ಕೆ ನೀರು ಹಾಕುವ ಮೂಲಕ ಗಣ್ಯರು ರಾಷ್ಟ್ರೀಯ ಯು ದಿನದ ಕಾರ ್ಯಕ್ರಮವನ್ನು ಉದ್ಘಾಟಿಸಿದರು.

