ಹಳೆ ಚಾಳಿ ಮುಂದುವರಿಸಿದ ವಾಹನ ಸವಾರರು | ದಂಡ ಪ್ರಯೋಗಕ್ಕೆ ನೀಡಬೇಕಿದೆ ಒತ್ತು
ವೆಂ.ಸುನೀಲ್ ಕುಮಾರ್ ಕೋಲಾರ
s್ಠ್ಞಜ್ಝಿ.k್ಠಞa್ಟ14ಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಸಾರ್ವಜನಿಕರ ಜೀವ ಉಳಿಸುವ ಉದ್ದೇಶದಿಂದ ಜಿಲ್ಲಾಪೊಲೀಸರು ಡಿಸೆಂಬರ್ 1ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಿ ಒಂದೂವರೆ ತಿಂಗಳು ಕಳೆಯುವ ಮೊದಲೇ, ವಾಹನ ಚಾಲಕರು ಹೆಲ್ಮೆಟ್ ಧರಿಸದೆ ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ.
ಹೆಚ್ಚಿನ ಪ್ರಮಾಣದ ಬೈಕ್ ಅಪಘಾತಗಳಲ್ಲಿಹೆಲ್ಮೆಟ್ ಧರಿಸದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಪ್ರಾಣ ಕಳೆದುಕೊಂಡಿರುವ ಸಾಕಷ್ಟು ಪ್ರಕರಣಗಳಿವೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರ ಜೀವ ರಕ್ಷಣೆಯ ಉದ್ದೇಶದಿಂದ ಜಿಲ್ಲೆಯಲ್ಲಿಕಟ್ಟುನಿಟ್ಟಾಗಿ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶಿಸಲಾಗಿತ್ತು.
ಪೊಲೀಸ್ ಇಲಾಖೆಯಿಂದ ಹೆಲ್ಮೆಟ್ ಕಡ್ಡಾಯಗೊಳಿಸಿ ಅಭಿಯಾನದ ರೀತಿಯಲ್ಲಿಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಡಿಸೆಂಬರ್ ತಿಂಗಳಲ್ಲಿಕಟ್ಟುನಿಟ್ಟಾಗಿ ಹೆಲ್ಮೆಟ್ ಕಡ್ಡಾಯ ಆದೇಶವನ್ನು ಜಾರಿಗೊಳಿಸಿದ್ದರಿಂದ ಶೇ.90ರಷ್ಟು ಸವಾರರು ಹೆಲ್ಮೆಟ್ ಧರಿಸಿದ್ದು ಕಂಡುಬಂದಿತ್ತು.
ಕೋಲಾರದಲ್ಲಿಹೆಲ್ಮೆಟ್ ಕಡ್ಡಾಯಕ್ಕೆ ಸವಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿಕೆಜಿಎಫ್ ಹಾಗೂ ಬಂಗಾರಪೇಟೆ ವ್ಯಾಪ್ತಿಯಲ್ಲಿಯೂ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿತ್ತು. ಜಿಲ್ಲೆಯ ಪ್ರಮುಖ ನಗರಗಳ ಪ್ರಮುಖ ಜಂಕ್ಷನ್ ಗಳಲ್ಲಿಕಾರ್ಯಾಚರಣೆ ನಡೆಸಿದ ಪರಿಣಾಮ, ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದರು.
ಆದರೆ, ಹೊಸ ವರ್ಷದ ಹಿನ್ನೆಲೆಯಲ್ಲಿಪೊಲೀಸರನ್ನು ಭದ್ರತಾ ಕಾರ್ಯಗಳಿಗೆ ನಿಯೋಜಿಸಿದ ಹಿನ್ನೆಲೆಯಲ್ಲಿರಸ್ತೆಯಲ್ಲಿಪೊಲೀಸರು ಹೆಚ್ಚಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿಮೈ ಮರೆತ ಸವಾರರು ಹೆಲ್ಮೆಟ್ ಧರಿಸಲು ನಿರ್ಲಕ್ಷ್ಯ ಧೋರಣೆ ತೋರಿರುವುದು ಕಂಡುಬಂದಿದೆ.
ಎಸ್ಪಿ ವರ್ಗಾವಣೆ, ಮೈಮರೆತ ಸವಾರರು!: ಜಿಲ್ಲೆಯಲ್ಲಿಹೆಲ್ಮೆಟ್ ಕಡ್ಡಾಯಗೊಳಿಸುವುದು ಹಿಂದಿನ ಎಸ್ಪಿ ಬಿ.ನಿಖಿಲ್ ಅವರ ಮಹತ್ವಾಕಾಂಕ್ಷೆಯಾಗಿತ್ತು. ಅದರಂತೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಹಾಗೂ ಜಾಗೃತಿ ನೀಡಲಾಗಿತ್ತು. ಮುಂದುವರಿದು ಸವಾರರಿಗೆ ದಂಡದ ಬಿಸಿಯನ್ನು ಮುಟ್ಟಿಸಿದ್ದರು. ಇದರಿಂದ ಸವಾರರಲ್ಲಿಜಾಗೃತಿ ಮೂಡಿತ್ತಾದರೂ, ಎಸ್ಪಿಯವರ ವರ್ಗಾವಣೆಯ ಬಳಿಕ ಸವಾರರು ನಿಯಮ ಉಲ್ಲಂಘಿಘಿಸುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ.
ಬಾಕ್ಸ್
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ: ವಿಕ ಕಳಕಳಿ
ಹಿಂದಿನಿಂದಲೂ ಸವಾನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಿದ್ದರೂ ಪರಿಣಾಮಕಾರಿಯಾಗಿ ಜಾರಿಗೊಳಿಸಿರಲಿಲ್ಲ. ಆದರೆ, ಅಪಘಾತ ಸಂದರ್ಭದಲ್ಲಿತಲೆ ಪೆಟ್ಟು ಪ್ರಾಣ ಹಾನಿ ಸಂಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಸಂಚಾರ ನಿಯಮ ಪಾಲಿಸುವುದು ಸವಾರರ ಕರ್ತವ್ಯವಾಗಿದೆ. ಪೊಲೀಸರಿದ್ದರೂ, ಇಲ್ಲದಿದ್ದರೂ ತಮ್ಮ ಜೀವ ರಕ್ಷಿಸಿಕೊಳ್ಳಲು ವಾಹನ ಸವಾರರು ಸ್ವಯಂ ಪ್ರೇರಿತವಾಗಿ ಹೆಲ್ಮೆಟ್ ಧರಿಸಬೇಕೆಂಬುದು ವಿಕ ಕಳಕಳಿಯಾಗಿದೆ.
ಬಾಕ್ಸ್
ದಂಡ ಬೀಳುತ್ತೆ ಹುಷಾರ್ !
ಸಂಚಾರ ಪೊಲೀಸರು ತಡೆದಾಗ ಮಾತ್ರವೇ ದಂಡ ವಿಧಿಸುವುದು ಒಂದು ಮಾರಿದಯಾಗಿದ್ದು, ಈಗಾಗಲೇ ಆನ್ ಲೈನ್ ಮೂಲಕ ದಂಡ ವಿಧಿಸುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಜಾರಿಗೊಳಿಸಿದೆ. ಅದರಂತೆ ಸಂಚಾರ ನಿಯಮಗಳನ್ನು ಉಲ್ಲಂಘಿಘಿಸಿದರೆ ಪೊಲೀಸರು ಫೋಟೋ ತೆಗೆದು ಆನ್ ಲೈನ್ ನಲ್ಲಿಅಪ್ ಲೋಡ್ ಮಾಡಲಾಗುತ್ತಿದ್ದು, ಕೇಂದ್ರ ಸರಕಾರದ ಪರಿವಾಹನ್ ತಂತ್ರಾಂಶದಲ್ಲಿಮಾಹಿತಿ ದಾಖಲಾಗುತ್ತದೆ. ಅದರಂತೆ ಸವಾರರು ದಂಡವನ್ನು ಪಾವತಿಸಲೇಬೇಕಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೋಟ್
ಸಾರ್ವಜನಿಕರ ಹಿತದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು, ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಟ್ಟುನಿಟ್ಟಾಗಿ ನಿಯಮಗಳ ಪಾಲನೆಗೆ ಕ್ರಮಕೈಗೊಳ್ಳುವಂತೆ ಸಂಚಾರಿ ಪೊಲೀಸರಿಗೆ ಸೂಚನೆ ನೀಡಲಾಗುವುದು.
-ಕನ್ನಿಕಾ ಸಿಕ್ರಿವಾಲ್ , ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ
ಫೋಟೋ ಕ್ಯಾಪ್ಷನ್
13ಕೆಎಲ್ ಆರ್ ಎಸ್ ಕೆ1, 2, 3: ಹೆಲ್ಮೆಟ್ ಧರಿಸದೆ ಸಂಚರಿಸುತ್ತಿರುವ ವಾಹನ ಸವಾರರು
13ಕೆಎಲ್ ಆರ್ ಎಸ್ ಕೆ4: ಕನ್ನಿಕಾ ಸಿಕ್ರಿವಾಲ್

