ಜಿಲ್ಲೆಗೆ ವರವಾಗುವ ವರದಾ-ಬೇಡ್ತಿ ನದಿ ಜೋಡಣೆ ಯೋಜನೆ (ಕಿಕ್ಕರ್ )
ಸಮಾವೇಶ ಹಮ್ಮಿಕೊಳ್ಳಲು ತಯಾರಿ * ಮಠಾಧೀಶರು ,ಸಾರ್ವಜನಿಕರು,ರಾಜಕಾರಣಿಗಳ ಬೆಂಬಲ (ಪಾಯಿಂಟ್ )
ಒತ್ತಡ ಹೇರಲು ಸಿದ್ಧತೆ (ಹೆಡ್ )
ಗುರುದತ್ತ ಭಟ್ ಹಾವೇರಿ
ಜ್ಠ್ಟ್ಠdaಠಿಠಿa.ಚಿhaಠಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ವರದಾ-ಬೇಡ್ತಿ ನದಿ ಜೋಡಣೆ ಯೋಜನೆಯನ್ನು ಶೀಘ್ರದಲ್ಲಿಅನುಷ್ಠಾನಗೊಳಿಸುವಂತೆ ಜಿಲ್ಲೆಯಲ್ಲಿಜನಾಗ್ರಹ ದಟ್ಟವಾಗುತ್ತಿದೆ. ರೈತ ಸಂಘಟನೆಗಳು , ಮಠಾಧೀಶರು, ಜನಪ್ರತಿನಿಧಿಗಳು ಈ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರಲು ಸಿದ್ಧತೆ ನಡೆಸಿದ್ದಾರೆ.
1994ರಲ್ಲೇ ಯೋಜನೆ ಘೋಷಣೆಯಾಗಿತ್ತು. ಈ ಹಿಂದೆ ಅನುಷ್ಠಾನಕ್ಕೆ ಪ್ರಯತ್ನವಾಗಿದ್ದರೂ ಸಾಕಾರವಾಗಿರಲಿಲ್ಲ. ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ (ಎನ್ ಡಬ್ಲುಡಿಎ) ಈ ಯೋಜನಾ ವರದಿ (ಡಿಪಿಆರ್ ) ಸಲ್ಲಿಸಿದಾಗ ಬೇಡ್ತಿ ಕೊಳ್ಳ ಪ್ರದೇಶದ ಜನರಿಂದ ತೀವ್ರ ವಿರೋಧ ವ್ಯಕ್ತವಾದ್ದರಿಂದ ಯೋಜನೆ ಅನುಷ್ಠಾನಕ್ಕೆ ಸರಕಾರ ಆಸಕ್ತಿ ತೋರಿರಲಿಲ್ಲ.
ಈಗ ಹಿಂದಿನ ಯೋಜನೆಯ ಸ್ವರೂಪ ಬದಲಿಸಿ, ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ರೀತಿಯಲ್ಲಿಬೇಡ್ತಿ ನದಿ ನೀರನ್ನು ವರದೆಗೆ ಜೋಡಿಸುವ ಹೊಸ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಿ ಕಾಮಗಾರಿ ಆರಂಭಿಸಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ.
ಒಕ್ಕೊರಲ ಹೊರಾಟಕ್ಕೆ ಸಿದ್ಧತೆ:
ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸರಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿಜಿಲ್ಲೆಯ ಎಲ್ಲಮಠಾಧೀಶರು, ಸರ್ವ ಪಕ್ಷಗಳ ಮುಖಂಡರು, ಸಾರ್ವಜನಿಕರ ಸಹಯೋಗದಲ್ಲಿಸಮಾವೇಶ ಹಮ್ಮಿಕೊಳ್ಳಲು ಸಿದ್ಧತೆ ನಡೆದಿದೆ.
ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಎಲ್ಲಮಠಾಧೀಶರ ಸಹಕಾರ ಮತ್ತು ಮಾರ್ಗದರ್ಶನ ಪಡೆದು ಬೃಹತ್ ಜನಜಾಗೃತಿ ಸಮಾವೇಶ ಆಯೋಜಿಸುವುದಾಗಿ ಘೋಷಿಸಿದ್ದಾರೆ. ಉದ್ದೇಶಿತ ಯೋಜನೆಯಡಿ ಒಳಪಡುವ ಎಲ್ಲಜಿಲ್ಲೆಗಳಲ್ಲಿಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದು ಭರವಸೆ ಮೂಡಿಸಿದೆ.
ಕಣಕ್ಕಿಳಿದ ರೈತರು:
ಕಳೆದ ಮೂರು ದಶಕಗಳಿಂದ ಒತ್ತಾಯಿಸುತ್ತ ಬಂದಿರುವ ರೈತ ಸಂಘಟನೆಗಳು ಪ್ರಸ್ತುತ ಮತ್ತೆ ಪ್ರತಿಭಟನೆ ಹಾದಿ ಹಿಡಿಯಲು ಮುಂದಾಗಿದ್ದಾರೆ. ಇತ್ತೀಚೆಗೆ ಹಾವೇರಿ ಪ್ರವಾಸಿ ಮಂದಿರದಲ್ಲಿ100ಕ್ಕೂ ಹೆಚ್ಚು ರೈತ ಮುಖಂಡರು ಸಭೆ ಕರೆದು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದ್ದು ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿಕೆಲ ಮಠಾಧೀಶರು ಸಹ ಪಾಲ್ಗೊಂಡಿದ್ದು ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದೆ.
ಪಕ್ಷಾತೀತ ಹೋರಾಟ :
ಇತ್ತೀಚೆಗೆ ನಡೆದ ಹಾವೇರಿ ಮೆಡಿಕಲ್ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿಯೂ ಎಲ್ಲಮುಖಂಡರು ಪಕ್ಷಾತೀತವಾಗಿ ಯೋಜನೆ ಅನುಷ್ಠಾನ ಬೆಂಬಲಿಸಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿಪಕ್ಷಾತೀತ ಹೋರಾಟ ನಡೆಸಲು ವೇದಿಕೆ ಸಿದ್ಧವಾಗುತ್ತಿದೆ. ಈ ಕುರಿತು ಜಿಲ್ಲೆಯ ಎಲ್ಲಶಾಸಕರ ಸಭೆ ಕರೆದು ಚರ್ಚೆ ನಡೆಸುವುದಾಗಿ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇತ್ತೀಚೆಗೆ ಕೇಂದ್ರ ಜಲಶಕ್ತಿ ಆಯೋಗದ ಸಭೆಯಲ್ಲಿಪಾಲ್ಗೊಂಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ ಅವರು, ಯೋಜನೆಯ ಡಿಪಿಆರ್ ತಯಾರಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ. ಕೇಂದ್ರ ಸರಕಾರ ಯೋಜನೆಗೆ 10 ಸಾವಿರ ಕೋಟಿ ಮೀಸಲಿಟ್ಟಿದ್ದು ನಮ್ಮ ಪಾಲಿನ 1 ಸಾವಿರ ಕೋಟಿ ಹೂಡಿಕೆ ಮಾಡಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂಬ ಭರವಸೆ ನೀಡಿದ್ದು ಮಹತ್ವ ಪಡೆದುಕೊಂಡಿದೆ.
.........ಬಾಕ್ಸ್ ...............
18 ಟಿಎಂಸಿ ನೀರು ಬಳಕೆ :
ಉದ್ದೇಶಿತ ಯೋಜನೆಯಿಂದ 18 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಹಾವೇರಿ, ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ತುಂಗಭದ್ರಾ ನದಿ ಹರಿಯುವ 1,06,220 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸುವ ಗುರಿ ಇದೆ. ಹಾನಗಲ್ , ಹಾವೇರಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿವರದಾ ನದಿ ನೀರು ಕೃಷಿಗೆ ಪ್ರಮುಖ ಆಧಾರವಾಗಿದೆ. ಆದರೆ ಮಳೆ ಕೊರತೆ, ಅವೈಜ್ಞಾನಿಕ ನೀರು ಸಂಗ್ರಹ ಮೊದಲಾಗಿ ನದಿ ನೀರು ಮಳೆಗಾಲ ಮುಗಿಯುತ್ತಿದ್ದಂತೆಯೇ ಬತ್ತಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿಬೇಡ್ತಿ ನದಿ ಜೋಡಣೆ ಮೂಲಕ ಜಿಲ್ಲೆಯ ಕೃಷಿಗೆ ಜೀವದಾನ ಲಭಿಸಲಿದೆ ಎಂಬುದು ರೈತರ ಆಶಯ.
..........ಕ್ವೋಟ್ ..........
ವರದಾ- ಬೇಡ್ತಿ ನದಿ ಜೋಡಣೆ ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿಪುನರ್ ರೂಪಿಸಲಾಗಿದೆ. ಯೋಜನೆಯನ್ನು ಶೀಘ್ರದಲ್ಲಿಅನುಷ್ಠಾನಗೊಳಿಸುವ ನಿಟ್ಟಿನಲ್ಲಿಜನಜಾಗೃತಿ ಸಮಾವೇಶ ನಡೆಸಲಾಗುವುದು.
-ಬಸವರಾಜ ಬೊಮ್ಮಾಯಿ, ಸಂಸದ, ಮಾಜಿ ಮುಖ್ಯಮಂತ್ರಿ
ಫೋಟೊ: 14 ಗುರುದತ್ತ 1; ಹಾವೇರಿ ಜಿಲ್ಲೆಯಲ್ಲಿಹರಿದಿರುವ ವರದಾ ನದಿ.

