ಊಟು ಉತ್ಸವಕ್ಕೆ ಚಾಲನೆ

Contributed byknamana4@gmail.com|Vijaya Karnataka

ಕೇರಳದ ಇರಿಟ್ಟಿಯ ಉಳಿಕ್ಕಲ್‌ನಲ್ಲಿರುವ ವಾಯತೂರು ಕಲಿಯಾರ್‌ ದೇವಸ್ಥಾನದಲ್ಲಿ ಊಟು ಉತ್ಸವ ಆರಂಭವಾಗಿದೆ. ಅಕ್ಕಿ ಅಳೆಯುವ ಶಾಸ್ತ್ರ ಮತ್ತು ಅಗ್ನಿಕುಂಡಕ್ಕೆ ಅಗ್ನಿ ಇಡುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಮಕರ ಸಂಕ್ರಮಣ ಪೂಜೆ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜ.26ರವರೆಗೆ ಮುಖ್ಯ ಸಮಾರಂಭಗಳು ಮತ್ತು ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಕೊಡಗಿನ ಸಾಂಪ್ರದಾಯಿಕ ನೃತ್ಯ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

rice festival in kodagu featuring rice measurement rituals and religious events

ಊಟು ಉತ್ಸವಕ್ಕೆ ಚಾಲನೆ

*ಅಕ್ಕಿ ಅಳೆಯುವ ಶಾಸ್ತ್ರ, ಮಕರ ಸಂಕ್ರಮಣ ಪೂಜೆ | ನಾನಾ ಧಾರ್ಮಿಕ ಕಾರ್ಯಕ್ರಮ

ವಿಕ ಸುದ್ದಿಲೋಕ ವಿರಾಜಪೇಟೆ

ಕೇರಳ ರಾಜ್ಯದ ಇರಿಟ್ಟಿಯ ಉಳಿಕ್ಕಲ್ ನಲ್ಲಿರುವ ವಾಯತೂರು ಕಲಿಯಾರ್ ದೇವಸ್ಥಾನದಲ್ಲಿ(ಕೊಡಗಿನ ಬೈತೂರಪ್ಪ) ಊಟು ಉತ್ಸವ ಮಂಗಳವಾರ ಸಂಜೆ ಅಕ್ಕಿ ಅಳೆಯುವ ಶಾಸ್ತ್ರ ಮಾಡುವುದರೊಂದಿಗೆ ಆರಂಭವಾಯಿತು. ಬಳಿಕ ಅಗ್ನಿಕುಂಡಕ್ಕೆ ಅಗ್ನಿ ಇಡುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಬುಧವಾರ ಮಕರ ಸಂಕ್ರಮಣ ಪೂಜೆ ಹಾಗೂ ನಾನಾ ಪೂಜೆಗಳು ನೈವೇದ್ಯ ಸಮರ್ಪಣೆ ನಡೆಯಿತು. ಉತ್ಸವವು ಜ.26ರವರೆಗೆ ಮುಖ್ಯ ಸಮಾರಂಭಗಳು ಮತ್ತು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತದೆ. ಜ.22ರಂದು ಪುಗ್ಗೇರ ಮನೆಯವರ ಕಡೆಯಿಂದ ಅಕ್ಕಿ ಅಳೆಯುವ ಶಾಸ್ತ್ರ ನಡೆಯಲಿದ್ದು, ಮೂರು ದಿನಗಳ ಕಾಲ ಕೊಡಗಿನವರ ಹಬ್ಬ ನಡೆಯಲಿದ್ದು, ದೇವಾಲಯದಲ್ಲಿಕೊಡಗಿನವರಿಗೆ ವಿಶೇಷ ಪ್ರಾಧ್ಯಾನ್ಯತೆ ನೀಡಲಾಗುತ್ತಿದೆ. ಕೊಡಗಿನ ಸಾಂಪ್ರದಾಯಿಕ ನೃತ್ಯ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯಲಿದೆ.

ಜ.15ರಿಂದ 26ರವರೆಗೆ ಶ್ರೀ ಭೂತಬಲಿ, ವಿಶೇಷ ಪೂಜೆಗಳು ಮತ್ತು ನೈವೇದ್ಯಗಳು ನಡೆಯಲಿವೆ. 15ರಂದು ಸಂಜೆ 6ಕ್ಕೆ ಚೆಂಬೊಟ್ಟಿಪಾರದಿಂದ ದೇವಸ್ಥಾನಕ್ಕೆ ಊಟು ಮೆರವಣಿಗೆ ಹೊರಡಲಿದೆ. 22ರಂದು ಬೆಳಗ್ಗೆ ಕೊಡಗಿನ ಪುಗ್ಗೇರ ಕುಟುಂಬದವರ ಅರಿಯಳವು,(ಅಕ್ಕಿ ಅಳೆಯುವ ಶಾಸ್ತ್ರ). ಸಂಜೆ 7ಕ್ಕೆ ನಡೆಯಲಿರುವ ಸಾಂಸ್ಕೃತಿಕ ಸಮ್ಮೇಳನವನ್ನು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದಾರೆ. ನಂತರ ಕಂಜರಪ್ಪಳ್ಳಿ ಅಮಲ ಅವರಿಂದ ಗೀತೋತ್ಸವ ನಡೆಯಲಿದೆ.

23ರಂದು ಕೊಡಗಿನ ಜನರಿಂದ ಅರಿಯಳವು ಮತ್ತು ವೃಷಭಂಜಲಿ ನಡೆಯಲಿದ್ದು, ರಾತ್ರಿ 8.30ಕ್ಕೆ ಪರಿಶಿಷ್ಟ ಪಂಗಡದ ಶ್ರೀಕಾಣಿಕೆ ಶೋಭಾಯಾತ್ರೆ, ರಾತ್ರಿ 9ಕ್ಕೆ ವೆಟ್ಟಕ್ಕೊರುಮಕನ್ ದೇವಸ್ಥಾನದಲ್ಲಿಕಲಾಮೆಳುತ್ತು, ಹಾಡು ಮತ್ತು ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ನಡೆಯಲಿದೆ. 24ರಂದು ಮಕರಂ 10ರಂದು ಹಬ್ಬದ ದಿನವಾಗಿದ್ದು, ಬೆಳಗ್ಗೆ ವಿವಿಧ ನೆಯ್ಯಮೃತ ಮಠಗಳಿಂದ ನೆಯ್ಯಮೃತ ಭಕ್ತರಿಂದ ಮೆರವಣಿಗೆ, ಮಧ್ಯಾಹ್ನ ತಡಂಬು ನೃತ್ಯವಿದ್ದು, ಸಂಜೆ 6.30ಕ್ಕೆ ಪಡಿಯೂರಿನ ಜನರ ಓಮನಕಜ್ಛೆಯ ನಂತರ 7.30ಕ್ಕೆ ಕೊಡಗಿನ ಉಮ್ಮತ್ತಾಟ್ , ವೇದಿಕೆಯಲ್ಲಿವಿವಿಧ ನೃತ್ಯ ಕಾರ್ಯಕ್ರಮಗಳು ಉಳಿಕಲ್ಲುವಿನಿಂದ ದೇವಸ್ಥಾನದವರೆಗೆ ತಾಲಪೋಲಿ ಮೆರವಣಿಗೆ ನಡೆಯಲಿದೆ.

25ರಂದು ಬೆಳಗ್ಗೆ ನೆಯ್ಯಾಟಂ ಮತ್ತು ಕೊಡಗಿನ ತಕ್ಕರುಗಳ ಸಾಂಪ್ರದಾಯಿಕ ಭೇಟಿ, ಮಧ್ಯಾಹ್ನ ನೆಯ್ಯಮೃತ್ ವ್ರತಕಾರರ ಆಟೀಲೂನ್ ಮತ್ತು ಸಂಜೆ 5ಕ್ಕೆ ತಿಡಂಬ ನೃತ್ಯ ನಡೆಯಲಿದೆ. 26ರಂದು ಪಲ್ಲಿವೆಟ್ಟ ಮೆರವಣಿಗೆ, ತಿಡಂಬ ನೃತ್ಯ, ಸಂಜೆ ತಿಡಂಬ ನೃತ್ಯ ನಡೆಯಲಿದೆ. 28ರಂದು ನೀಲಕರಿಂಗಳಿ ಕಾವಿಲ್ ತೆಯ್ಯಂ ಮತ್ತು ದೇವಸ್ಥಾನ ಮತ್ತು ಕೂಲೋತ್ ಗೆ ಭಗವತಿಯ ಮೆರವಣಿಗೆ ನಡೆಯಲಿದೆ. ಇದರೊಂದಿಗೆ ಈ ವರ್ಷದ ಉತ್ಸವಕ್ಕೆ ತೆರೆ ಎಳೆದು ಧ್ವಜ ಇಳಿಸಲಾಗುತ್ತದೆ.

ಪೋಟೋ:ಎಂಡಿಕೆ14ವಿಪಿಟಿ02ಎ:

ಕೇರಳ ರಾಜ್ಯದ ಇರಿಟ್ಟಿಯ ಉಳಿಕ್ಕಲ್ ನಲ್ಲಿರುವ ವಾಯತೂರು ಕಲಿಯಾರ್ ದೇವಸ್ಥಾನದಲ್ಲಿ(ಕೊಡಗಿನ ಬೈತೂರಪ್ಪ)ಈ ವರ್ಷದ ಊಟು ಉತ್ಸವ ಅಕ್ಕಿ ಅಳೆಯುವ ಶಾಸ್ತ್ರದೊಂದಿಗೆ ಚಾಲನೆ ನೀಡಲಾಯಿತು.