ರೆಡ್ಡಿ ಸಮುದಾಯ ಭವನಕ್ಕೆ ಶೀಘ್ರ ನಿವೇಶನ
ವೇಮನ ಜಯಂತಿ ಪೂರ್ವಭಾವಿ ಸಭೆಯಲ್ಲಿಶಾಸಕ ಸಮೃದ್ಧಿ ಮಂಜುನಾಥ್ ಭರವಸೆ
ವಿಕ ಸುದ್ದಿಲೋಕ ಮುಳಬಾಗಲು
ರೆಡ್ಡಿ ಜನಸಂಘದ ಬೇಡಿಕೆಯಂತೆ ಆದಷ್ಟು ಬೇಗ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನವನ್ನು ನೀಡಲಾಗುವುದು ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.
ನಗರದ ತಾ.ಪಂ ಸಭಾಂಗಣದಲ್ಲಿತಾಲೂಕು ಆಡಳಿತ ವತಿಯಿಂದ ಜ.19ರಂದು ನಡೆಯಲಿರುವ ವೇಮನ ಜಯಂತಿ ಆಚರಣಾ ಸಂಬಂಧ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು. ತಾಲೂಕು ಕಚೇರಿಯಲ್ಲಿಜ.19ರಂದು ನಡೆಯಲಿರುವ ವೇಮನ ಜಯಂತಿ ಕಾರ್ಯಕ್ರಮದಲ್ಲಿಭಾಗವಹಿಸಿದ ನಂತರ ಕೋಲಾರದಲ್ಲಿನಡೆಯುವ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿಭಾಗವಹಿಸುವುದಾಗಿ ತಿಳಿಸಿದರು.
ತಾಲೂಕಿನಲ್ಲಿರುವ ಎಲ್ಲಾಜನಾಂಗಕ್ಕೂ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನಗಳನ್ನು ಯಾವುದೇ ತಾರತಮ್ಯ ಇಲ್ಲದಂತೆ ನೀಡಲಾಗುತ್ತಿದೆ ಜತೆಗೆ ಎಲ್ಲಾಜಯಂತಿಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ. ರೆಡ್ಡಿ ಸಮುದಾಯ ಚುನಾವಣೆ ಸಮಯದಲ್ಲಿನನಗೆ ಹೆಚ್ಚಿನ ಬೆಂಬಲ ನೀಡಿದ್ದು ಅವರ ಋುಣ ತೀರಿಸಿಕೊಳ್ಳುತ್ತೇನೆ. ವೇಮನ ಜಯಂತಿ ಕಾರ್ಯಕ್ರಮಕ್ಕೆ ರೆಡ್ಡಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ತಮ್ಮ ಒಗ್ಗಟ್ಟಿನ ಪ್ರದರ್ಶನ ಮಾಡಬೇಕೆಂದು ತಿಳಿಸಿದರು.
ರೆಡ್ಡಿ ಜನಸಂಘದ ತಾಲೂಕು ಖಜಾಂಚಿ ಜಯರಾಮರೆಡ್ಡಿ ಮಾತನಾಡಿ, ಹಲವಾರು ವರ್ಷಗಳಿಂದ ರೆಡ್ಡಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಸಿಗುತ್ತಿಲ್ಲ. ಈ ಹಿಂದೆ ಶಾಸಕರಾಗಿದ್ದ ಕೊತ್ತೂರು ಜಿ. ಮಂಜುನಾಥ್ , ಎಚ್ .ನಾಗೇಶ್ ಭವನ ನಿರ್ಮಾಣಕ್ಕೆ ಅನುದಾನ ನೀಡಲು ಸಿದ್ಧರಾಗಿದ್ದರು. ಆದರೆ ನಿವೇಶನ ಸಿಕ್ಕಿಲ್ಲ. ಈಗಿನ ಶಾಸಕರು ಭವನ ನಿರ್ಮಾಣಕ್ಕೆ ನಿವೇಶನ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ತಾಲೂಕಿನಲ್ಲಿ20 ಸಾವಿರಕ್ಕೂ ಹೆಚ್ಚು ಮಂದಿ ರೆಡ್ಡಿ ಸಮುದಾಯ ಇದ್ದರೂ ಇದುವರೆಗೂ ಸಮುದಾಯ ಭವನ ನಿರ್ಮಾಣ ವಾಗದೇ ಇರುವುದು ವಿಷಾದನೀಯ ಸಂಗತಿ ಎಂದರು. ಸಭೆಯಲ್ಲಿಮುಖಂಡರಾದ ನಾಗರಾಜ್ ರೆಡ್ಡಿ, ಆಂಜನೇಯರೆಡ್ಡಿ ಮಾತನಾಡಿದರು.
ತಹಸೀಲ್ದಾರ್ ವಿ.ಗೀತಾ, ತಾಪಂ ಇಒ ಬಾಬು, ನಗರಸಭೆ ಆಯುಕ್ತ ವಿ.ಶ್ರೀಧರ್ , ರೆಡ್ಡಿ ಜನಸಂಘದ ತಾಲೂಕು ಅಧ್ಯಕ್ಷ ಕೇಶವರೆಡ್ಡಿ, ಕಾರ್ಯದರ್ಶಿ ನಂಗಲಿ ವಿಶ್ವನಾಥ್ ರೆಡ್ಡಿ, ಸೇರಿದಂತೆ ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
14 ಎಂ.ಬಿ.ಎಲ್ ಪೋಟೋ 1 ಮುಳಬಾಗಲು ನಗರದ ತಾಪಂ ಸಭಾಂಗಣದಲ್ಲಿವೇಮನ ಜಯಂತಿ ಆಚರಣೆ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವ ಭಾವಿ ಸಭೆಯಲ್ಲಿಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿದರು.

