ಮಂಡ್ಯ: ವಿಕಸಿತ ಭಾರತ ಯುವ ಸಂಪತ್ತು ಜಿಲ್ಲಾಮಟ್ಟದ ಸ್ಪರ್ಧೆ ಮತ್ತು ವಿಕಸಿತ ಭಾರತ ಯುವ ಸಂಪರ್ಕ ಕಾರ ್ಯಕ್ರಮವು ಮಾ.5ರಂದು ಬೆಳಗ್ಗೆ 10.30ಕ್ಕೆ ಮಂಡ್ಯ ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿನಡೆಯಲಿದೆ. ಜಿಲ್ಲಾಡಳಿತ, ಜಿ.ಪಂ, ಮಂಡ್ಯ ವಿವಿ, ಮೈಭಾರತ್ ಮಂಡ್ಯ, ಎನ್ ಎಸ್ ಸ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿನಡೆಯುವ ಕಾರ ್ಯಕ್ರಮವನ್ನು ಜಿಲ್ಲಾಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಗೌಡ ಅಧ್ಯಕ್ಷತೆ ವಹಿಸುವರು. ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್ .ಡಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ ಸಿಇಒ ಕೆ.ಆರ್ .ನಂದಿನಿ, ಮಂಡ್ಯ ವಿವಿಯ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ, ಕುಲಸಚಿವ (ಆಡಳಿತ) ಎಂ.ಪಿ.ಕೃಷ್ಣಕುಮಾರ್ , ಜಿಲ್ಲಾಎಸ್ಪಿ ಡಾ.ವಿ.ಜೆ.ಶೋಭಾರಾಣಿ ಭಾಗವಹಿಸುವರು.
ಬ್ಯಾಂಕ್ ಹುದ್ದೆಗೆ ಅರ್ಜಿ ಆಹ್ವಾನ
ಮಂಡ್ಯ: ಬಂಧನ್ ಬ್ಯಾಂಕ್ ಸಹಯೋಗದಲ್ಲಿಜಿಲ್ಲಾಉದ್ಯೋಗ ವಿನಿಮಯ ಕಚೇರಿಯಲ್ಲಿಮಾ.6ರಂದು ಬೆಳಗ್ಗೆ 10ಕ್ಕೆ ನೇರ ಸಂದರ್ಶನ ಆಯೋಜಿಸಲಾಗಿದೆ. ಬ್ಯಾಂಕ್ ನಲ್ಲಿಒಟ್ಟು 200 (ಕಲೆಕ್ಷನ್ ಆಫೀಸರ್ , ಕಲೆಕ್ಷನ್ ಎಕ್ಸಿಕ್ಯೂಟಿವ್ , ರಿಲೇಷÜನ್ ಷಿಪ್ ಆಫೀಸರ್ಸ್ ಹಾಗೂ ರಿಲೇಷÜನ್ ಷಿಪ್ ಎಕ್ಸಿಕ್ಯೂಟಿವ್ ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ 18 ಸಾವಿರ ರೂ. ಮಾಸಿಕ ವೇತನ ಮತ್ತು ಇತರೆ ಭತ್ಯೆ ಸೌಲಭ್ಯ ನೀಡಲಾಗುವುದು. ಪಿಯುಸಿ ವಿದ್ಯಾರ್ಹತೆ ತೇರ್ಗಡೆ ಹೊಂದಿದ 18ರಿಂದ 30 ವಷÜರ್ ವಯೋಮಿತಿಯ ಅರ್ಹರು ತಮ್ಮ ವಿವರದೊಂದಿಗೆ ನೇರ ಸಂದರ್ಶನದಲ್ಲಿಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 9164642684 ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ವಿ.ನವೀನ್ ಕುಮಾರ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ರಾಮಕೃಷ್ಣ ಶಾಲೆಗೆ ಆಹ್ವಾನ
ಮಂಡ್ಯ: ಎಸ್ಸಿ, ಎಸ್ಟಿ ಹಾಗೂ ಅನೈರ್ಮಲ್ಯ ವೃತ್ತಿಯಲ್ಲಿತೊಡಗಿರುವ ಪೋಷÜಕರ ಪ್ರತಿಭಾವಂತ ಗಂಡು ಮಕ್ಕಳಿಗೆ ಮೈಸೂರಿನ ಶ್ರೀ ರಾಮಕೃಷÜ್ಣ ವಿದ್ಯಾಶಾಲೆಯ 8ನೇ ತರಗತಿಗೆ ದಾಖಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನೀಡಲಾಗುವುದು. ಆಫ್ ಲೈನ್ ಅರ್ಜಿ ಆಹ್ವಾನಿಸಿದ್ದು, ಅರ್ಹ ವಿದ್ಯಾರ್ಥಿಗಳು ತಾಲೂಕು ವ್ಯಾಪ್ತಿಯಲ್ಲಿಬರುವ ಇಲಾಖೆಯ ಸಹಾಯಕ ನಿರ್ದೇಶಕರಿಂದ ಅರ್ಜಿ ನಮೂನೆ ಪಡೆದು ಅಗತ್ಯ ಮಾಹಿತಿ ಭರ್ತಿ ಮಾಡಿದ ಅರ್ಜಿಯನ್ನು ಮಾ.20ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಆಯಾ ತಾಲೂಕುಗಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸುವಂತೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಸಹಾಯಧನಕ್ಕೆ ಅರ್ಜಿ
ಮಂಡ್ಯ: ಎಸ್ಸಿ, ಎಸ್ಟಿ ಸಣ್ಣ ಉದ್ದಿಮೆದಾರರನ್ನು ಉತ್ತೇಜಿಸಲು ಇಟಿಣಡಿhಠಿಡಿhಟಿhOಡಿkಠಿ ತರಬೇತಿ ಹಾಗೂ ಸಹಾಯದನ ಪಡೆಯಲು ಮಾ.30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಸ್ ಸಿಎಸ್ ಪಿ,ಟಿಎಸ್ ಪಿ ಯೋಜನೆಯಡಿ 2025-26ನೇ ಸಾಲಿನ ಎಸ್ಸಿ, ಎಸ್ಟಿ ಸಣ್ಣ ಉದ್ದಿಮೆದಾರರನ್ನು ಉತ್ತೇಜಿಸುವ ವಿಷÜಯದ ಇಟಿಣಡಿhಠಿಡಿhಟಿhOಡಿkಠಿ 1 ತಿಂಗಳ ತರಬೇತಿ ಕಾರ ್ಯಕ್ರಮ ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ನಡೆಸಲು 5 ಲಕ್ಷ ರೂ. ಮೊತ್ತದ ಸಹಾಯಧನ ನೀಡಲಾಗುವುದು. ತರಬೇತಿ ಹಾಗೂ ಸಹಾಯಧನಕ್ಕಾಗಿ ವಿದ್ಯಾರ್ಹತೆ ಅನ್ವಯ ಜಿಲ್ಲಾಮಟ್ಟದಲ್ಲಿಅರ್ಜಿಗಳನ್ನು ಜಿಲ್ಲಾಪ್ರವಾಸೋದ್ಯಮ ಇಲಾಖಾಧಿಕಾರಿ ಕಚೇರಿಯಿಂದ ಪಡೆದು ಮಾ.2ರಿಂದ ಮಾ.30ರವರೆಗೆ ಸಲ್ಲಿಸಬಹುದಾಗಿದೆ. ಮಾಹಿತಿಗೆ 08232238377 ಸಂಪರ್ಕಿಸಲು ಪ್ರಕಟಣೆಯಲ್ಲಿತಿಳಿಸಲಾಗಿದೆ.

