ಟೇಕ್ವಾಂಡೊ: ನೇಸರ, ರಾಹುಲ್ ಸೇರಿ ಹಲವರಿಗೆ ಚಿನ್ನ

Contributed bymanjunath.gowda@timesgroup.com|Vijaya Karnataka

ಕರ್ನಾಟಕ ಕ್ರೀಡಾಕೂಟ 2026ರ ಟೇಕ್ವಾಂಡೊ ಸ್ಪರ್ಧೆಗಳಲ್ಲಿ ನೇಸರ ಡಿ. ಗೌಡ, ಎಸ್‌. ರಾಹುಲ್‌, ಸಂಜನಾ ಶರ್ಮಾ ಸೇರಿದಂತೆ ಹಲವರು ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ 87 ಕೆ.ಜಿ ವಿಭಾಗದಲ್ಲಿ ನೇಸರ, 63 ಕೆ.ಜಿ ವಿಭಾಗದಲ್ಲಿ ರಾಹುಲ್‌, ಮಹಿಳೆಯರ 46 ಕೆ.ಜಿ ವಿಭಾಗದಲ್ಲಿ ಸಂಜನಾ ಶರ್ಮಾ ಚಿನ್ನ ತಮ್ಮದಾಗಿಸಿಕೊಂಡಿದ್ದಾರೆ. ಫುಟ್ಬಾಲ್‌ನಲ್ಲಿ ಉತ್ತರ ಕನ್ನಡ ತಂಡ ಹಾಸನ ತಂಡವನ್ನು 4-1 ಗೋಲುಗಳಿಂದ ಸೋಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

discovery many achievers in the taekwondo competition at karnataka sports meet 2026

ಕರ್ನಾಟಕ ಕ್ರೀಡಾಕೂಟಧಿ -2026

ತುಮಕೂರು : ನೇಸರ ಡಿ. ಗೌಡ ಕರ್ನಾಟಕ ಕ್ರೀಡಾಕೂಟ- 2026ರ ಟೇಕ್ವಾಂಡೊ ಸ್ಪರ್ಧೆ ಪುರುಷರ 87 ಕೆ.ಜಿ ವಿಭಾಗದಲ್ಲಿಚಿನ್ನ ಗೆದ್ದ ಸಾಧನೆ ಮಾಡಿದರು.

ಎಂ.ಜಿ. ಕ್ರೀಡಾಂಗಣದ ಒಳಾಂಗಣದಲ್ಲಿಶುಕ್ರವಾರ ನಡೆದ ಸ್ಪರ್ಧೆಯಲ್ಲಿನೇಸರ ಚಿನ್ನ ಗೆದ್ದರೆ, ಲಿಖಿತ್ ವೈ ಮತ್ತು ಜಿ.ಎಂ.ಸಾಗರ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು. ಪುರುಷರ 63 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿಎಸ್ , ರಾಹುಲ್ ಮತ್ತು ಉಮೇಶ್ ಚೌಧರಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡರೆ, ಮೊಹಮ್ಮದ್ ಜಿ. ಹೌಸ್ ಮತ್ತು ಸಮಥ್ ರ್ ಎಚ್ . ಅವರ ಕ್ರಮವಾಗಿ 3 ಮತ್ತು 4ನೇ ಸ್ಥಾನ ಗಳಿಸಿದರು.

ಮಹಿಳೆಯರ 62 ಕೆ. ಜಿ ವಿಭಾಗದಲ್ಲಿವಿ. ಹ್ಯಾಪಿ, ಅನುಶಾವಾಣಿ ಎಸ್ .ಮತ್ತು ಪ್ರೀಯಾಂಕಾ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಪುರುಷರ 74 ಕೆ.ಜಿ ವಿಭಾಗದ ಫೈನಲ್ ಸ್ಪರ್ಧೆಯಲ್ಲಿಶ್ರೇಯಸ್ ಜೆ., ಎಂ. ಗೌತಮ್ ಮತ್ತು ಮೊಹಮ್ಮದ್ ಜಹೀದ್ ಅನುಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದುಕೊಂಡರು.

ಸಂಜನಾ ಶರ್ಮಗೆ ಬಂಗಾರ: ಸಂಜನಾ ಶರ್ಮ ಟೇಕ್ವಾಂಡೊ ಸ್ಪರ್ಧೆಯ ಮಹಿಳೆಯರ 46 ಕೆ.ಜಿ ವಿಭಾಗದಲ್ಲಿಮೊದಲ ಸ್ಥಾನ ಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ವಿಹಾರಿಕಾ ನಯನಾ ವಿಷ್ಣು ಮತ್ತು ಅಭಿನಯ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಪುರುಷರ 45 ಕೆ.ಜಿ ವಿಭಾಗದಲ್ಲಿಪ್ರತ್ಯುಶ್ ಮಾಣಿ ಮತ್ತು ಎಚ್ . ಅಬುಬಕ್ಕರ್ ಮೊದಲೆರಡು ಸ್ಥಾನ ಗಳಿಸಿದರೆ, ಮನೋಜ್ ನಾಯಕ್ ಎಂ.ಆರ್ . ಮತ್ತು ತರುಣ್ ಕುಮಾರ್ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದರು. ಪುರುಷರ 54 ಕೆ.ಜಿ ವಿಭಾಗದಲ್ಲಿಅಕ್ಷಯ್ ಕುಮಾರ್ ಜಿ, ಸೂರ್ಯ ಎಸ್ . ಮತ್ತು ವಿಜಯ್ ಧಾಮಿ ಮೊದಲ ಮೂರು ಸ್ಥಾನ ಗಳಿಸಿದರು.

ಫುಟ್ಬಾಲ್ : ಉತ್ತರ ಕನ್ನಡ ಶುಭಾರಂಭ

ರಾಜಾ ಮೊಹಮ್ಮದ್ ಫಾಹೀಮ್ ದಾಖಲಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಉತ್ತರ ಕನ್ನಡ ತಂಡ ಕರ್ನಾಟಕ ಕ್ರೀಡಾಕೂಟದ ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿಹಾಸನ ತಂಡವನ್ನು ಸೋಲಿಸಿತು. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿಶುಕ್ರವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿಉತ್ತರ ಕನ್ನಡ ತಂಡ 4-1 ಗೋಲುಗಳಿಮದ ಜಯಭೇರಿ ಬಾರಿಸಿತು. ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿಕೊಡಗು ತಂಡ 2-0 ಅಂತರದಿಂದ ಮಂಡ್ಯ ತಂಡವನ್ನು ಸೋಲಿಸಿತು.

ಕ್ರೀಡಾಕೂಟಕ್ಕೆ ಸಿಎಂ ಚಾಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಕ್ರೀಡಾಕೂಟ 2026ಕ್ಕೆ ಶುಕ್ರವಾರ ಚಾಲನೆ ನೀಡಿದರು. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿನಡೆದ ಉದ್ಘಾಟನಾ ಸಮಾರಂಭದಲ್ಲಿಪಾಲ್ಗೊಂಡು ಮಾತನಾಡಿದ ಸಿಎಂ, ತುಮಕೂರಿನಲ್ಲಿಅಂತಾರಾಷ್ಟ್ರೀಯ ಮಟ್ಟದ ಈಜುಕೋಳ ಮತ್ತು ಹಾಕಿ ಕ್ರೀಡಾಂಗಣ ನಿರ್ಮಾಣ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಸದ್ಯ 6 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಹಗೂ ಹಾಕಿ ಪಟು ವಿ. ಸುನಿಲ್ ಅವರನ್ನು ಉದ್ಘಾಟನಾ ಸಮಾರಂಭದ ವೇಳೆ ಸನ್ಮಾನಿಸಲಾಯಿತು.