ಗ್ರಾಪಂ ಸದಸ್ಯರ ಬೀಳ್ಕೊಡುಗೆ ಸಮಾರಂಭ

Contributed bybgchamakeri@gmail.com|Vijaya Karnataka

ಐಗಳಿ ಗ್ರಾಮ ಪಂಚಾಯಿತಿ ಸದಸ್ಯರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಅಭಿವೃದ್ಧಿ ಕಾರ್ಯಗಳಲ್ಲಿ ಜಾತಿ, ಮತ, ಪಕ್ಷ ಭೇದ ಮರೆತು ಒಮ್ಮತದಿಂದ ಕೆಲಸ ಮಾಡಿದ ಸದಸ್ಯರ ಕಾರ್ಯವನ್ನು ಹಿರಿಯ ಮುಖಂಡ ಸಿ.ಎಸ್‌. ನೇಮಗೌಡ ಶ್ಲಾಘಿಸಿದರು. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜನಮನ ಗೆದ್ದಿದ್ದಾರೆ ಎಂದು ಪ್ರಶಂಸಿಸಿದರು. ಶಾಸಕ ಲಕ್ಷ್ಮಣ ಸವದಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸದಸ್ಯರನ್ನು ಸನ್ಮಾನಿಸಲಾಯಿತು.

grama panchayat members farewell ceremony excellence and respect

ಐಗಳಿ: ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿಜಾತಿ, ಮತ, ಪಕ್ಷ ಭೇದ ಮರೆತು ಎಲ್ಲಸದಸ್ಯರು ಹಿರಿಯರ ಮಾರ್ಗದರ್ಶನದಲ್ಲಿಒಮ್ಮತದಿಂದ ಕೆಲಸ ಮಾಡಿರುವುದು ಮಾದರಿ ಎಂದು ಹಿರಿಯ ಮುಖಂಡ ಸಿ.ಎಸ್ . ನೇಮಗೌಡ ಹೇಳಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿಶನಿವಾರ ಆಯೋಜಿಸಿದ್ದ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿಪಾಲ್ಗೊಂಡು ಅವರು ಮಾತನಾಡಿದರು. ‘‘ಐದು ವರ್ಷ ಗಳಲ್ಲಿಯಾವುದೇ ತಕರಾರುಗಳಿಲ್ಲದೆ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜನಮನ ಗೆದ್ದಿದ್ದಾರೆ,’’ ಎಂದು ಪ್ರಶಂಸಿಸಿದರು. ಹಿರಿಯ ಸದಸ್ಯ ಬಿ.ಎಸ್ . ಬಿರಾದಾರ ಮಾತನಾಡಿ, ‘‘ಅನುದಾನ ನೀಡಿದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಹಾಗೂ ಸಹಕರಿಸಿದ ಗ್ರಾಮದ ಹಿರಿಯರು ಮತ್ತು ಸಿಬ್ಬಂದಿಗೆ ಕೃತಜ್ಞತೆಗಳು,’’ ಎಂದರು. ಮುಖಂಡರಾದ ರವೀಂದ್ರ ಹಾಲಳ್ಳಿ, ಶ್ರೀಶೈಲ ಮಿರ್ಜಿ, ಪಿಡಿಒ ರಾಜೇಂದ್ರ ಪಾಠಕ ಮಾತನಾಡಿದರು. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸಿಬ್ಬಂದಿಯನ್ನು ಸತ್ಕರಿಸಲಾಯಿತು. ಗ್ರಾಮದ ಹಿರಿಯರು, ಯುವ ಮುಖಂಡರು ಉಪಸ್ಥಿತರಿದ್ದರು.

ಕೆ.ಎಸ್ . ಬಿರಾದಾರ ಸ್ವಾಗತಿಸಿ, ವಂದಿಸಿದರು.