ಚಿಂತನ- ಮಂಥನ ಸಭೆಯಲ್ಲಿಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭರವಸೆ
ವಿಕ ಸುದ್ದಿಲೋಕ ಬೆಳಗಾವಿ
ಜಿಲ್ಲೆಯ ಕನ್ನಡ ಶಾಲೆಗಳ ಸುಧಾರಣೆ, ಕಡ್ಡಾಯ ‘ಬೆಳಗಾವಿ’ ಹೆಸರು ಬಳಕೆ, ಕನ್ನಡ ನಾಮಫಲಕ, ಕನ್ನಡದಲ್ಲಿಪತ್ರ ವ್ಯವಹಾರ, ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಯೋಜನೆ ಸೇರಿದಂತೆ ಕನ್ನಡ ಭಾಷೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿಶನಿವಾರ ನಡೆದ ಕನ್ನಡಪರ ಸಂಘಟನೆ, ಕನ್ನಡಪರ ಹೋರಾಟಗಾರ ರೊಂದಿಗೆ ನಡೆದ ಚಿಂತನ- ಮಂಥನ ಸಭೆಯ ಅಧ್ಯಕ್ಷೆ ವಹಿಸಿ ಅವರು ಮಾತನಾಡಿದರು. ‘‘ಸಹಕಾರಿ ಸಂಘ ಸಂಸ್ಥೆಗಳು ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ಸೂಚಿಸಲಾಗಿದೆ. ನಿಯಮ ಪಾಲಿಸದ ಸಂಘ ಸಂಸ್ಥೆಗಳಿಗೆ ನೋಟಿಸ್ ನೀಡಲಾಗುವುದು. ಇಲಾಖೆಗಳಲ್ಲಿಕನ್ನಡ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ,’’ ಎಂದರು.
‘‘ಖಾಸಗಿ ಆಂಗ್ಲಮಾಧ್ಯಮ, ಮರಾಠಿ ಶಾಲೆಗಳಲ್ಲಿನಾಡಗೀತೆ ಬಳಕೆ ಮಾಡದ ಶಾಲೆಗಳಿಗೆ ನೋಟಿಸ್ ನೀಡಲಾಗುವುದು. ನಾಡಗೀತೆ ಬಳಕೆ ಮಾಡದಿದ್ದಲ್ಲಿಅಂತಹ ಶಾಲೆಗಳ ಪರವಾನಗಿ ರದ್ದುಪಡಿಸಲಾಗು ವುದು,’’ ಎಂದರು.
ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ‘‘ಜಿಲ್ಲೆಯಲ್ಲಿಕನ್ನಡ ಶಾಲೆಗಳನ್ನು ಬಂದ್ ಮಾಡಿ ಇತರ ಖಾಸಗಿ ಶಾಲೆಗಳು ನಿರ್ಮಾಣಗುತ್ತಿವೆ. ರಾಜ್ಯದಲ್ಲಿ40 ಸಾವಿರ ಶಾಲೆಗಳು ಮುಚ್ಚುತ್ತಿವೆ. ಈ ಕುರಿತು ಸರಕಾರ ಎಚ್ಚೆತ್ತುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸರಕಾರದ ಹಂತದಲ್ಲಿಚರ್ಚಿಸಬೇಕು. ಮ್ಯಾಗ್ನೆಟ್ ಶಾಲಾ ನೀತಿ ಅಪಾಯಕಾರಿ. ಇದರಿಂದ ಹೆಚ್ಚು ಕನ್ನಡ ಶಾಲೆಗಳು ಮುಚ್ಚುವ ಸಾಧ್ಯತೆ ಇದೆ. ಈ ನೀತಿಯಿಂದ ಈಗಾಗಲೇ 17 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಕುರಿತು ವರದಿಗಳು ಲಭ್ಯವಾಗಿವೆ. ಜಿಲ್ಲಾಡಳಿತದಿಂದ ಇಂತಹ ಅಪಾಯಕಾರಿ ಬೆಳವಣಿಗೆ ತಡೆ ಹಿಡಿಯುವ ಬಗ್ಗೆ ಚರ್ಚಿಸಬೇಕು,’’ ಎಂದರು.
ಕನ್ನಡಪರ ಸಂಘಟನೆಯ ಮಹಾದೇವ ತಳವಾರ ಮಾತನಾಡಿ, ‘‘ಬೆಳಗಾವಿ ನಗರದಲ್ಲಿಕನ್ನಡ ನಾಮಫಲಕ ನಿಯಮಾನುಸಾರ ಆಗಬೇಕು. ಒಂದು ವೇಳೆ ನಿಯಮ ಉಲ್ಲಂಘನೆಯಾದಲ್ಲಿಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು,’’ ಎಂದರು.
ಕನ್ನಡಪರ ಸಂಘಟನಾ ಸದಸ್ಯ ಸುರೇಶ ಗವನ್ನವರ ಮಾತನಾಡಿ, ಗ್ರಾಪಂ ಮತ್ತು ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿಇತರ ಭಾಷೆ ಫಲಕಗಳು ಅಳವಡಿಸಲಾಗಿದೆ. ಹಾಗಾಗಿ ನಾಮಫಲಕದಲ್ಲಿಕನ್ನಡ ಭಾಷೆ ಬಳಕೆ ಮಾಡುವಂತೆ ಗ್ರಾಪಂ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಬೇಕು,’’ ಎಂದರು.
ಕನ್ನಡಪರ ಸಂಘಟನೆಗಳ ಮುಖಂಡರಾದ ವಾಜಿದ್ ಹಿರೆಕೋಡಿ, ಶ್ರೀನಿವಾಸ ತಾಳೂಕರ, ಸರಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯಿಸಿದರು.
ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ , ಜಿಪಂ ಸಿಇಒ ರಾಹುಲ್ ಶಿಂಧೆ, ಪಾಲಿಕೆ ಆಯುಕ್ತ ಎಂ. ಕಾರ್ತಿಕ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತಿತರರಿದ್ದರು.
- 31ಪರಶು13
ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿಕನ್ನಡಪರ ಸಂಘಟನೆ, ಕನ್ನಡಪರ ಹೋರಾಟಗಾರರೊಂದಿಗೆ ಚಿಂತನ- ಮಂಥನ ಸಭೆ ಜರುಗಿತು.

