ವಿಕ ಸುದ್ದಿಲೋಕ ಸಂತೇಮರಹಳ್ಳಿ
ಮುಡುಕುತೊರೆ ಜಾತ್ರೆ ನಿಮಿತ್ತ ಕುದೇರು ಗ್ರಾಮದಲ್ಲಿಎತ್ತಿನ ಗಾಡಿಗಳ ಮೆರವಣಿಗೆ ಶನಿವಾರ ನಡೆಯಿತು.
ಮುಡುಕುತೊರೆ ನಿಮಿತ್ತ ಪತ್ರಿ ವರ್ಷ ಗ್ರಾಮದ ಪರಿಶಿಷ್ಟ ಸಮುದಾಯ ಬೀದಿಯಲ್ಲಿ500 ಕ್ಕೂ ಹೆಚ್ಚು ಜನರು ಜಾತ್ರೆಗೆ ತೆರಳುತ್ತಾರೆ. ಈ ನಿಮಿತ್ತ ಶನಿವಾರ ಸಮುದಾಯ ಬೀದಿಯಲ್ಲಿರುವ ಮಂಟೇಸ್ವಾಮಿ ದೇವಸ್ಥಾನ ಆವರಣದಲ್ಲಿ12 ಜತೆ ಎತ್ತಿನ ಗಾಡಿ ಹಾಗೂ 20 ಕ್ಕೂ ಹೆಚ್ಚು ವಾಹನಗಳಿಗೆ ನಾನಾ ಬಗೆಯ ಹೂವು ಹೊಂಬಾಳೆಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಯಿತು.
ಎತ್ತಿನ ಗಾಡಿಗೆ ದವಸ ದಾನ್ಯ, ತರಕಾರಿ ಸೇರಿದಂತೆ ನಾನಾ ಬಗೆಯ ವಸ್ತುಗಳನ್ನು ತುಂಬಿಕೊಂಡು ಗ್ರಾಮ ಮುಖ್ಯ ರಸ್ತೆ ಮಾರ್ಗದ ಮೂಲಕ ವ್ಯಾದ್ಯಗೋಷ್ಠಿ, ನಗಾರಿ, ಬ್ಯಾಡ್ ಸೆಟ್ , ವೀರಗಾಸೆ ಕುಣಿತ ಮೂಲಕ ಕಾವಿ ಬಸವೇಶ್ವರ ದೇವಸ್ಥಾನವರೆಗೆ ಮೆರವಣಿಗೆ ನಡೆಯಿತು.
ಮೆರವಣಿಗೆ ನಿಮಿತ್ತ ಯುವಕರು ವಾದ್ಯಗೋಷ್ಠಿ, ನಗರಿ, ಬ್ಯಾಡ್ ಸೆಟ್ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಸಿಎಚ್ ಎನ್ 31ಎಸ್ ಎಂಆರ್ 3
ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿಎತ್ತಿನ ಗಾಡಿ ಮೆರವಣಿಗೆ ಶನಿವಾರ ನಡೆಯಿತು.

