‘ಬಂಟ ಸಮಾಜದ ಪ್ರೀತಿ, ನಂಬಿಕೆಯೇ ನಿಜವಾದ ಆಸ್ತಿ’

Contributed bynishak7041132@gmail.com|Vijaya Karnataka
love and trust of bunt community 13th anniversary celebration in gurupura
ಗುರುಪುರ ಬಂಟರ ಮಾತೃ ಸಂಘದ 13ನೇ ವಾರ್ಷಿಕೋತ್ಸವ | ಡಾ.ಕೆ.ಪ್ರಕಾಶ್ ಶೆಟ್ಟಿಗೆ ಸನ್ಮಾನ, ದಿಶಾ ಪೂಜಾರಿಗೆ ಗೌರವ

ವಿಕ ಸುದ್ದಿಲೋಕ ಕೈಕಂಬ
ಖಾಸಗಿ ಜೆಟ್ ಖರೀದಿಸಿರುವುದು ನನ್ನ ಜೀವನದ ಒಂದು ಸೌಕರ್ಯ ಮಾತ್ರ. ಆದರೆ ಬಂಟ ಸಮಾಜ ನನ್ನ ಮೇಲೆ ಇಟ್ಟಿರುವ ಪ್ರೀತಿ, ನಂಬಿಕೆ ಮತ್ತು ವಿಶ್ವಾಸವೇ ನನ್ನ ನಿಜವಾದ ಆಸ್ತಿ ಎಂದು ಉದ್ಯಮಿ ಹಾಗೂ ಸಮಾಜಸೇವಕ ಡಾ.ಕೆ.ಪ್ರಕಾಶ್ ಶೆಟ್ಟಿ ಹೇಳಿದರು.

ಗುರುಪುರ ಬಂಟರ ಮಾತೃ ಸಂಘ ಆಯೋಜಿಸಿದ್ದ 13ನೇ ವಾರ್ಷಿಕ ಸಮಾವೇಶ ಹಾಗೂ ‘ನೃತ್ಯ ಸಂಗಮ-2026’ ಸಮಾರೋಪ ಸಮಾರಂಭದಲ್ಲಿಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಗುರುಪುರ ಬಂಟರ ಮಾತೃ ಸಂಘದ ಕನಸಿನ ಯೋಜನೆಯಾದ ಬಂಟರ ಭವನ ನಿರ್ಮಾಣಕ್ಕೆ ಸದಸ್ಯನಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದ ಅವರು, 2019ರಲ್ಲಿತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿಆರಂಭಿಸಿದ ‘ನೆರವು’ ಯೋಜನೆ ಒಂದು ಕೋಟಿ ರೂಪಾಯಿಯಿಂದ ಆರಂಭವಾಗಿ ಇಂದು 10 ಕೋಟಿ ರೂಪಾಯಿಗೂ ಅಧಿಕ ನೆರವು ನೀಡುವ ಮಟ್ಟಕ್ಕೆ ಬೆಳೆದಿದ್ದು, ಇದಕ್ಕೆ ಸಮಾಜದ ಆಶೀರ್ವಾದ, ಪೋಷಕರ ಆಶೀರ್ವಾದ ಹಾಗೂ ದೇವರ ಕೃಪೆಯೇ ಕಾರಣ ಎಂದರು. ಪ್ರತಿವರ್ಷ ಡಿ.25ರಂದು ನಡೆಯುವ ನೆರವು ಯೋಜನೆಯಲ್ಲಿಗುರುಪುರ ಬಂಟರ ಮಾತೃ ಸಂಘ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಶ್ಲಾಘಿಘಿಸಿದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಳೆದ 13 ವರ್ಷಗಳಲ್ಲಿಸಂಘ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಉತ್ತಮ ಸೇವೆ ಸಲ್ಲಿಸಿದ್ದು, ಸಂಘದ ಕನಸಿನ ಬಂಟರ ಭವನ ಶೀಘ್ರದಲ್ಲೇ ಸಾಕಾರಗೊಳ್ಳಲಿ ಎಂದು ಹಾರೈಸಿದರು.

ಜಿಲ್ಲಾಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಡಾ.ಪ್ರಕಾಶ್ ಶೆಟ್ಟಿಗೆ ಸಲ್ಲಿಸಿದ ಗೌರವವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಸಮುದಾಯಗಳಿಗೆ ಸಲ್ಲಿಸಿದ ಗೌರವವಾಗಿದೆ. ಜಿಲ್ಲೆಯ ಅಭಿವೃದ್ಧಿಯಲ್ಲಿಬಂಟ ಸಮುದಾಯದ ಪಾತ್ರ ಶ್ಲಾಘನೀಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಶಿಕ್ಷಣ ಕ್ಷೇತ್ರದಲ್ಲಿಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಸಮಾಜದ ಅಭಿವೃದ್ಧಿ ಮಾತಿನಿಂದಲ್ಲ, ಸೇವಾ ಕಾರ್ಯಗಳಿಂದ ಸಾಧ್ಯ. ಗುರುಪುರ ಬಂಟರ ಮಾತೃ ಸಂಘ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿಮಾದರಿ ಸಂಘವಾಗಿ ಬೆಳೆದಿದೆ ಎಂದರು.

ತಾಯಿಯ ನಿಧನದ ನೋವಿನ ನಡುವೆಯೂ ಪಿಯುಸಿ ಪರೀಕ್ಷೆಯಲ್ಲಿ600ಕ್ಕೆ 600 ಅಂಕ ಪಡೆದು ರಾಜ್ಯ ಪ್ರಥಮ ಸ್ಥಾನ ಪಡೆದ ದಿಶಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ್ ಕೋಟ್ಯಾನ್ , ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ ್ಕ, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ, ಉದ್ಯಮಿಗಳಾದ ಈಶ್ವರ್ ಶೆಟ್ಟಿ, ರವೀಂದ್ರನಾಥ ಮಾರ್ಲ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ, ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದರ್ಶನ್ ಶೆಟ್ಟಿ ಪೆರ್ಮಂಕಿ ಹೊಸಮನೆ ಸ್ವಾಗತಿಸಿದರು. ಚಂದ್ರಹಾಸ ಶೆಟ್ಟಿ ನಾರಳ ವಂದಿಸಿದರು. ವೇಣುಗೋಪಾಲ ಶೆಟ್ಟಿ ಮೂಡುಬಿದಿರೆ ಹಾಗೂ ಕಿರಣ್ ಪಕ್ಕಳ ಪೆಮಂರ್ ಕಿಗುತ್ತು ಕಾರ್ಯಕ್ರಮ ನಿರೂಪಿಸಿದರು.

ಕ್ಯಾಪ್ಷನ್ :

ಗುರುಪುರ ಬಂಟರ ಮಾತೃ ಸಂಘದ ವಾರ್ಷಿಕೋತ್ಸವದಲ್ಲಿಡಾ. ಕೆ. ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.