ಮೇಡಿತಂಬಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವಸದಸ್ಯರ ಸಭೆ
ವಿಕ ಸುದ್ದಿಲೋಕ ಕೋಲಾರಮೇಡಿತಂಬಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಪಾರದರ್ಶಕ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ ಕೋಮುಲ್ ನಿರ್ದೇಶಕಿ ಮಹಾಲಕ್ಷಿತ್ರ್ಮ ಪ್ರಸಾದ್ ಬಾಬು ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಸಂಪೂರ್ಣ ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು.
ತಾಲೂಕಿನ ಮೇಡಿತಂಬಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2025 26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈನೋದ್ಯಮದಲ್ಲಿಮಹಿಳೆಯರ ಪಾಲು ಅಧಿಕವಾಗಿದೆ. ಹಸುವಿಗೆ ಮೇವು ಹಾಕುವುದರಿಂದ ಹಸು ತೊಳೆದು ಹಾಲು ಕರೆಯುವವರೆಗೂ ಹೆಣ್ಣು ಮಕ್ಕಳ ಶ್ರಮವಿದೆ ಎಂದು ತಿಳಿಸಿದರು.
ಮಹಿಳೆಯರು ಸಹಕಾರ ಸಂಘವೊಂದನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಬಲ್ಲರು ಎಂಬುದಕ್ಕೆ ಮೇಡಿತಂಬಿಹಳ್ಳಿ ಸೊಸೈಟಿ ಉದಾಹರಣೆಯಾಗಿದ್ದು, ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಅತ್ಯುತ್ತಮವವಾಗಿ ನಡೆಸಿಕೊಂಡು ಹೋಗುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು.
ಸಂಘ ಶೇಕಡ 12 ಲಾಭಾಂಶ ಹೊಂದಿದ್ದು ಅಂದರೆ ಪ್ರಸಕ್ತ ಸಾಲಿಗೆ 1,23,675 ಗಳು ಲಾಭಗಳಿಸಿರುತ್ತದೆ ಸಂಘವನ್ನು 2022ರಲ್ಲಿಪ್ರಾರಂಭಿಸಿ ದಿನಕ್ಕೆ 110 ಲೀಟರ್ ಹಾಲು ಶೇಖರಿಸುತ್ತಿದ್ದು ಈಗ 2026 ನೇ ಸಾಲಿನಲ್ಲಿಪ್ರತಿದಿನಕ್ಕೆ 380 ಲೀಟರ್ ಹಾಲು ಶೇಖರಿಸುವ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿರುತ್ತದೆ ಎಂಬ ಮಾಹಿತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘ ಲಾಭದಾಯಕವಾಗಿರಲು ಹಾಲಿನ ಗುಣಮಟ್ಟ ಅತಿ ಮುಖ್ಯ. ಮಹಿಳೆಯರು ಗುಣಮಟ್ಟದ ಹಾಲನ್ನು ಸಂಘಕ್ಕೆ ಒದಗಿಸಿ, ಇದರಿಂದ ಸಂಘ ಮತ್ತಷ್ಟು ಬಲಿಷ್ಟವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸುನೀತಾ ಮಾತನಾಡಿ, ಈ ನಿವೇಶನದಲ್ಲಿಪ್ರಸಕ್ತ ಸಾಲಿಗೆ 25 ಲಕ್ಷ ರೂ.ಗಳ ಅಂದಾಜಿನಲ್ಲಿಉತ್ತಮ ಸುಸಜ್ಜಿತವಾದ ಮಹಿಳಾ ಹಾಲು ಉತ್ಪಾದಕರ ಸಂಘದ ಕಟ್ಟಡವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸಂಘವನ್ನು ಸಮರ್ಥವಾಗಿ ಮುನ್ನಡೆಸಲು ಸಂಘದ ಎಲ್ಲಾನಿರ್ದೇಶಕರೂ ಸಹಕಾರ ನೀಡಿದ್ದಾರೆ. ನಾವೆಲ್ಲಾಒಂದೇ ರೀತಿ ಸಂಘಟಿತಗಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ, ಇಲ್ಲಿಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲಎಂದರು.
ಕೋಲಾರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಮಹೇಶ್ ಮಾತನಾಡಿ, ಮಹಿಳಾ ಸಹಕಾರ ಸಂಘ ಅತ್ಯಂತ ಉತ್ತಮ ರೀತಿಯಲ್ಲಿನಡೆಯುತ್ತಿದ್ದು, ಈ ಸಂಘ ಇದೀಗ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡಕ್ಕೆ ಒಕ್ಕೂಟದಿಂದ ಪೂರ್ಣ ಪ್ರಮಾಣದ ಅನುದಾನವನ್ನು ಒದಗಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ2025-26ನೇ ಸಾಲಿನ ಆಡಿಟ್ ವರದಿಯ ಜಮಾ, ಖರ್ಚು ಲಾಭ, ನಷ್ಟ ಜವಾಬ್ದಾರಿ ತಃಖ್ತೆಗಳನ್ನು ಓದಿ ದಾಖಲಿಸಲಾಯಿತು ಮತ್ತು ಮುಂದಿನ ವರ್ಷದ ಬಜೆಟ್ ಗೆ ಅಂಗೀಕಾರ ನೀಡಲಾಯಿತು.
ಸಭೆಯಲ್ಲಿಕೋಮುಲ್ ಉಪ ವ್ಯವಸ್ಥಾಪಕರಾದ ಆರ್ .ವಿಜಯಲಕ್ಷ್ಮಿ, ಡಾಕ್ಟರ್ ಮಹೇಶ್ ದತ್ತಿ, ಪಶುಪಾಲನಾ ಇಲಾಖೆಯ ನಳಿನಿ ಮುಖ್ಯ ಪಶು ವೈದ್ಯಧಿಕಾರಿ ಅಶ್ರಫ್ ಅಹಮದ್ , ವಿಸ್ತರಣಾಧಿಕಾರಿಗಳಾದ ನಾಗಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ.ಗೋಪಾಲಪ್ಪ, ಸಂಘದ ಉಪಾಧ್ಯಕ್ಷೆ ಹೇಮ, ನಿರ್ದೇಶಕರಾದ ಗೀತಾ, ಪಾರ್ವತಮ್ಮ, ಮಂಜುಳಾ, ಸವಿತ್ಮಮ, ಸಾವಿತ್ರಮ್ಮ, ಜಿ.ಮಾಲಾ, ರತ್ನತ್ರ್ಮಮ, ನೀಲಮ್ಮ, ರತ್ನಮ್ಮ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸವಿತಾ ಹಾಜರಿದ್ದರು.
=
ಫೋಟೋಕ್ಯಾಪ್ಷನ್ ; ಕೋಮುಲ್ ನಿರ್ದೇಶಕಿ ಮಹಾಲಕ್ಷಿತ್ರ್ಮ ಪ್ರಸಾದ್ ಬಾಬು ಕೋಲಾರ ತಾಲ್ಲೂಕಿನ ಮೇಡಿತಂಬಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2025 26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. (22ಕೆಪಿಎಚ್ 1)