*ಸಂಗೀತ ಶಿಕ್ಷಕರ ಹುದ್ದೆ ಭರ್ತಿ ಮರೆತ ಸರಕಾರ* ಕುಷ್ಟಗಿ ತಾಲೂಕಿನಲ್ಲಿ278 ಹುದ್ದೆ ಖಾಲಿ
ಭೀಮನಗೌಡ ಮಂಡಮರಿ ಕುಷ್ಟಗಿ
ಞa್ಞda್ಝaಞa್ಟಜಿ84ಃಜಞaಜ್ಝಿ.್ಚಟಞ
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್ ) ಅಡಿ ವಸತಿ ಶಾಲೆಗಳಲ್ಲಿಸಂಗೀತ ಶಿಕ್ಷಕರನ್ನು ನೇಮಿಸಿಕೊಳ್ಳದ ಕಾರಣ ಸಂಗೀತ ಶಿಕ್ಷಣಕ್ಕೆ ಹಿನ್ನಡೆಯಾಗಿದೆ.
ಸಂಗೀತ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಸರಕಾರದಿಂದ ಒಪ್ಪಿಗೆ ದೊರೆತಿಲ್ಲ. ಹೀಗಾಗಿ 13 ವರ್ಷಗಳಿಂದ ಹುದ್ದೆ ಭರ್ತಿಗೆ ನಿರೀಕ್ಷೆ ಯಲ್ಲಿದ್ದವರಿಗೆ ನಿರಾಸೆಯಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿಕಾರ್ಯನಿರ್ವಹಿಸುವ ವಸತಿ ಶಾಲೆಗಳಲ್ಲಿನ 3,517 ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಒಪ್ಪಿಗೆ ಪಡೆದುಕೊಂಡಿದೆ. ವೃಂದ ಮತ್ತು ನೇಮಕಾತಿ ನಿಯಮ ಬದಲಿಸಿ ಸರಕಾರ ನ.15ರಂದು ರಾಜ್ಯಪತ್ರ ಪ್ರಕಟಿಸಿದೆ. ಇದರಲ್ಲಿಶೇ.75ರಷ್ಟು ವಸತಿ ಶಾಲೆಗಳಲ್ಲಿನ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಲಾಗುವುದು ಎಂದು ತಿಳಿಸಿದೆ. ಉಳಿದ 3,517 ಖಾಲಿ ಹುದ್ದೆಗಳ ಭರ್ತಿಗೆ ನಿಯಮ ಪ್ರಕಟಿಸಿದೆ. ಆದರೆ, ಇದರಲ್ಲಿಸಂಗೀತ ಹುದ್ದೆಗಳು ಖಾಲಿ ಇದ್ದರೂ ಸರಕಾರ ಈ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳದಿರುವುದಕ್ಕೆ ಸಂಗೀತ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಬೇಸರ ಮೂಡಿಸಿದೆ.
ಸಂಗೀತ ಶಿಕ್ಷಕ ಹುದ್ದೆ ಭರ್ತಿ ಯಾವಾಗ: ಕ್ರೈಸ್ 2011ರಲ್ಲಿವಸತಿ ಶಾಲೆಗಳಲ್ಲಿಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ288 ಸಂಗೀತ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕ್ರೈಸ್ ಸಂಗೀತ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಸಂಗೀತ ಶಿಕ್ಷಕರ ಹುದ್ದೆಗಳನ್ನೂ ಭರ್ತಿ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ನಿರುದ್ಯೋಗಿಗಳು: ಸಂಗೀತದಲ್ಲಿಹಿರಿಯ ಮತ್ತು ವಿದ್ವತ್ , ಬಿ.ಮ್ಯೂಸಿಕ್ , ಎಂ.ಮ್ಯೂಸಿಕ್ ವಿದ್ಯಾರ್ಹತೆ ಪಡೆದು ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು ಹೊರ ಬರುತ್ತಿದ್ದಾರೆ. ಆದರೆ, ಸಂಗೀತ ಶಿಕ್ಷಕರ ಹುದ್ದೆಗಳ ಭರ್ತಿಗೆ ಗಮನಹರಿಸುತ್ತಿಲ್ಲ. ಇದರಿಂದ ಸಂಗೀತ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿಯೇ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಟ್ -
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್ ) ಅಡಿ ವಸತಿ ಶಾಲೆಗಳಲ್ಲಿಖಾಲಿ ಹುದ್ದೆಗಳನ್ನು 13 ವರ್ಷಗಳಿಂದ ಸಂಗೀತ ಶಿಕ್ಷಕರ ಹುದ್ದೆ ಭರ್ತಿ ಮಾಡಿಲ್ಲ. ಸಂಗೀತ ವಿದ್ಯಾರ್ಹತೆ ಹೊಂದಿದವರು ನಿರುದ್ಯೋಗಿಗಳಾಗಿ ಅಲೆದಾಡುತ್ತಿದ್ದೇವೆ.