ಪೇಜ್ 1 ಫ್ಲೈಯರ್

Contributed byDHEERAJ K|Vijaya Karnataka
evidence of many centuries in flyers an examination of shells and their nautical history
ಜಗತ್ತಿನ ಮೊದಲ ರೆಡಿಮೇಡ್ ಮನೆ

ಸಮುದ್ರದ ದಂಡೆಯಲ್ಲಿಸಿಗುವ ಖಾಲಿ ಶಂಖಗಳಿಗೆ ಇಂದು ಧಾರ್ಮಿಕ ಮಹತ್ವ ಇದೆ. ಅವುಗಳನ್ನು ಅಲಂಕಾರಿಕ ವಸ್ತುವಾಗಿಯೂ ಬಳಸಲಾಗುತ್ತದೆ. ಆದರೆ, ಸುಮಾರು 47 ಕೋಟಿ ವರ್ಷಗಳ ಹಿಂದೆ ಈ ಶಂಖಗಳು ಬರಿಯ ಜೀವಿಕ ತ್ಯಾಜ್ಯವಷ್ಟೇ ಆಗಿರಲಿಲ್ಲ. ಅವು ಜಗತ್ತಿನಲ್ಲೇ ಪ್ರಥಮ ರೆಡಿಮೇಡ್ ಮನೆಗಳಾಗಿದ್ದವು. ಎಸ್ಟೋನಿಯಾದ ತಾರ್ತು ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿಶ್ವದ ವಿವಿಧ ಭಾಗಗಳಲ್ಲಿಸಿಕ್ಕ ಪುರಾತನ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿ ಈ ವಿಚಾರವನ್ನು ಕಂಡುಕೊಂಡಿದ್ದಾರೆ.
ವಿಜ್ಞಾನಿಗಳ ಸಂಶೋಧನೆಯ ಪ್ರಕಾರ, 50 ಕೋಟಿ ವರ್ಷಗಳಿಗೂ ಮೊದಲು ಸತ್ತ ಜೀವಿಗಳ ಖಾಲಿ ಶಂಖಗಳ ಒಳಗೆ ಯಾವುದೇ ಜೀವಿಗಳು ವಾಸಿಸುತ್ತಿರಲಿಲ್ಲ. ಆದರೆ ಸುಮಾರು 46-47 ಕೋಟಿ ವರ್ಷಗಳ ಹಿಂದೆ, ಸಣ್ಣ ಜೀವಿಗಳು ಆ ಶಂಖಗಳ ಒಳಭಾಗವನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಳ್ಳಲು ಶುರುಮಾಡಿದವು. ಸಮುದ್ರದಾಳದ ಆಧುನಿಕ ಪರಿಸರ ವ್ಯವಸ್ಥೆ ರೂಪುಗೊಳ್ಳಲು ಈ ಸಣ್ಣ ಹೆಜ್ಜೆಯೇ ಅಡಿಪಾಯವಾಯಿತು.

ಮೊದಲ ನಿವಾಸಿಗಳು: ಆರಂಭದಲ್ಲಿನಾಟಿಲಾಯ್ಡ… ಎಂಬ ಆಕ್ಟೋಪಸ್ ಕುಟುಂಬಕ್ಕೆ ಸೇರಿದ ಪುರಾತನ ಜೀವಿಗಳ ಖಾಲಿ ಶಂಖಗಳಲ್ಲಿಸಣ್ಣ ಸ್ಪಂಜುಗಳು, ಕಡಲ ಹುಳುಗಳು ಹಾಗೂ ಬ್ರಯೋಜೋನ್ಸ್ ಗಳಂತಹ ಅತ್ಯಂತ ಸಣ್ಣ ಜೀವಿಗಳು ವಾಸಿಸಲು ಶುರುಮಾಡಿದವು. ದೊಡ್ಡ ಮತ್ತು ಅಗಲವಾದ ನಾಟಿಲಾಯ್ಡ… ಶಂಖಗಳಲ್ಲಿನೀರು ಸುಲಭವಾಗಿ ಹರಿಯುತ್ತಿತ್ತು. ಹೀಗಾಗಿ ಅಲ್ಲಿಹೆಚ್ಚಿನ ಆಹಾರ ಮತ್ತು ಆಮ್ಲಜನಕ ಸಿಗುತ್ತಿದ್ದುದರಿಂದ ಹೆಚ್ಚು ಜೀವಿಗಳು ಆರಾಮವಾಗಿ ವಾಸಿಸುತ್ತಿದ್ದವು. ಕಿರಿದಾದ ತಿರುವುಗಳಿದ್ದ ಶಂಖಗಳಲ್ಲಿನೀರಿನ ಹರಿವು ಕಡಿಮೆಯಿದ್ದುದರಿಂದ ಅಲ್ಲಿಸಣ್ಣ ಜೀವಿಗಳು ಮಾತ್ರ ವಾಸಿಸುತ್ತಿದ್ದವು.

ಕಾರಣಗಳೇನು: ಸಮುದ್ರದ ದೊಡ್ಡ ಬೇಟೆಗಾರ ಜೀವಿಗಳಿಂದ ಮತ್ತು ಬಲವಾದ ನೀರಿನ ಅಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಣ್ಣ ಜೀವಿಗಳನ್ನು ಶಂಖಗಳನ್ನೇ ಮನೆಗಳನ್ನಾಗಿಸಿದವು. ಜಾರಿಹೋಗದೆ ಒಂದೇ ಕಡೆ ಗಟ್ಟಿಯಾಗಿ ಅಂಟಿಕೊಂಡು ವಾಸಿಸಲು ಇವು ಸೂಕ್ತ ಜಾಗಗಳಾಯಿತು.

ಬ್ಲರ್ಬ್

ಇಂದು ಸಮುದ್ರದಾಳದಲ್ಲಿಕಾಣ ಸಿಗುವ ವೈವಿಧ್ಯಮಯ ಜೀವಿಗಳ ಆವಾಸಸ್ಥಾನಕ್ಕೆ ಲಕ್ಷಾಂತರ ವರ್ಷಗಳ ಹಿಂದೆ ಖಾಲಿ ಶಂಖಗಳು ನೀಡಿದ ಆಸರೆಯೇ ಬುನಾದಿಯಾಯಿತು. ಅಷ್ಟೇ ಅಲ್ಲ, ನಿಸರ್ಗದಲ್ಲಿಯಾವುದೇ ವಸ್ತುವೂ ವ್ಯರ್ಥವಾಗುವುದಿಲ್ಲಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಯೂ ಹೌದು.

ಫೋಟೊ: ಫ್ಲೈಯರ್ಸ್