ರಾಣೇಬೆನ್ನೂರ

Contributed bysantoshettyp@gmail.com|Vijaya Karnataka
last date for insurance payment for cotton and pulse crops is july 31
ವಿಮಾ ಪಾವರಿಗೆ 31 ಕೊನೆ ದಿನ

ರಾಣೇಬೆನ್ನೂರ: ಈರುಳ್ಳಿ (ನೀರಾವರಿ), ಈರುಳ್ಳಿ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ) ಬೆಳೆಗೆ ವಿಮಾ ಕಂತು ತುಂಬುವ ಕೊನೆಯ ದಿನಾಂಕವನ್ನು ಎಲ್ಲ್ಲಬೆಳೆಗಳಿಗೆ ವಿಮಾ ಕಂತು ಪಾವತಿಸಲು ಜು.31 ಕೊನೆ ದಿನಾಂಕವಾಗಿರುತ್ತದೆ.
ತಾಲೂಕಿನ ಎಲ್ಲಗ್ರಾಪಂ ವ್ಯಾಪ್ತಿಯಲ್ಲಿಮುಖ್ಯ ಬೆಳೆಯಾಗಿ ಮುಸುಕಿನ ಜೋಳ (ಮಳೆ ಆಶ್ರಿತ) ಬೆಳೆಯನ್ನು ಅಧಿಸೂಚನೆ ಮಾಡಲಾಗಿದ್ದು, ವಿಮಾ ಕಂತು ಪಾವತಿಸಲು ಜು.31 ಕೊನೆ ದಿನಾಂಕವಾಗಿದೆ. ಹೋಬಳಿ ಮಟ್ಟದಲ್ಲಿಈರುಳ್ಳಿ (ನೀ) ಈರುಳ್ಳಿ (ಮ.ಆ) ಟೊಮ್ಯಾಟೊ- ತೊಗರಿ (ಮ.ಆ) ನೆಲಗಡಲೆ (ಶೇಂಗಾ) (ಮ.ಆ) ಭತ್ತ (ನೀ) ಮುಸುಕಿನ ಜೋಳ (ನೀ) ಸೋಯಾಅವರೆ(ಮ.ಆ) ಹತ್ತಿ(ನೀ) ಹತ್ತಿ(ಮ.ಆ) ಹೆಸರು (ಮ.ಆ) ಬೆಳೆಗಳನ್ನು ಅಧಿಸೂಚನೆ ಮಾಡಲಾಗಿದೆ.

ಮೆಡ್ಲೇರಿ ಹೋಬಳಿ ಮಟ್ಟದಲ್ಲಿಈರುಳ್ಳಿ (ನೀ) ಈರುಳ್ಳಿ (ಮ.ಆ) ಟೊಮ್ಯಾಟೊ- ತೊಗರಿ (ಮ.ಆ) ನೆಲಗಡಲೆ (ಶೇಂಗಾ) (ಮ.ಆ) ಭತ್ತ(ನೀ) ಮುಸುಕಿನ ಜೋಳ (ನೀ) ಬೆಳೆಗಳನ್ನು ಅಧಿಸೂಚನೆ ಮಾಡಲಾಗಿದೆ.

ಕುಪ್ಪೇಲೂರು ಹೋಬಳಿ ಮಟ್ಟದಲ್ಲಿಈರುಳ್ಳಿ (ನೀ) ಈರುಳ್ಳಿ (ಮ.ಆ) ಟೊಮ್ಯಾಟೊ- ತೊಗರಿ (ಮ.ಆ) ಭತ್ತ (ನೀ) ಮುಸುಕಿನ ಜೋಳ (ನೀ) ಹತ್ತಿ (ನೀ) ಹತ್ತಿ(ಮ.ಆ)ಬೆಳೆಗಳನ್ನು ಅಧಿಸೂಚನೆ ಮಾಡಲಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕುಗಳಲ್ಲಿಬೆಳೆ ಸಾಲ ಪಡೆದಿರುವ ರೈತರನ್ನು ಕಡ್ಡಾಯವಾಗಿ ಯೋಜನೆಯಡಿ ಒಳಪಡಿಸಲಾಗುವುದು. ಯೋಜನೆಯಲ್ಲಿಭಾಗವಹಿಸಲು ಇಚ್ಛಿಸದ ರೈತರು ಬೆಳೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ ಏಳು ದಿನಗಳ ಮುಂಚಿತವಾಗಿ ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತ ಮುಚ್ಚಳಿಕೆ ಪತ್ರ ಸಲ್ಲಿಸಬೇಕು. ಬೆಳೆ ಸಾಲ ಪಡೆಯದ ರೈತರು ಪಹಣಿ, ಫ್ರೂಟ್ಸ್ ಐಡಿ, ಕಂದಾಯ ರಶೀದಿ, ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕ್ , ಸಾಮಾನ್ಯ ಸೇವಾ ಕೇಂದ್ರ , ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿನೋಂದಾಯಿಸಿಕೊಳ್ಳಬಹುದು. ರೈತರು ಅರ್ಜಿಯಲ್ಲಿಬೆಳೆ ಮಳೆ ಆಶ್ರಿತವೋ ಅಥವಾ ನೀರಾವರಿಯೋ ಎಂಬುದನ್ನು ಖಚಿತಪಡಿಸಿಕೊಂಡು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್ ಶಾಖೆಗಳು, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಾಮಣಿ ಜಿ. ಪ್ರಕಟಣೆಯಲ್ಲಿತಿಳಿಸಿದ್ದಾರೆ.