ಇಂಟ್ರೊ: ಗರ್ಭಾವಸ್ಥೆಯಲ್ಲಿಹಲ್ಲಿನ ಚಿಕಿತ್ಸೆಗಳಿಗೆ ಒಳಗಾಗುವಂತಿಲ್ಲ. ಹೀಗಾಗಿ ಐವಿಎಫ್ನಂತಹ ಚಿಕಿತ್ಸೆ ಆರಂಭಿಸುವ ಮುನ್ನವೇ ಹಲ್ಲಿಗೆ ಸಂಬಂಧಿಸಿದ ಚಿಕಿತ್ಸೆಗಳನ್ನು ಮುಗಿಸಿ.ಸ್ಲಗ್ : ಒಸಡಿನ ಕಾಳಜಿ
ಬಾಯಿಯ ಆರೋಗ್ಯ ಸಂತಾನೋತ್ಪತ್ತಿ ಆರೋಗ್ಯದ ನಡುವೆ ಸಂಬಂಧವಿದೆ. ಹೀಗಾಗಿ ಐವಿಎಫ್ ಚಿಕಿತ್ಸೆಗೆ ಒಳಗಾಗುವ ಮಹಿಳೆಯರ ಆರೈಕೆಯಲ್ಲಿದಂತವೈದ್ಯರ ಪಾತ್ರವೂ ಮಹತ್ವ ಪಡೆಯುತ್ತಿದೆ.
ಪೀರಿಯೋಡಾಂಟೈಟಿಸ್ ಎಂಬುದು ಕೇವಲ ಹಲ್ಲುಮತ್ತು ಒಸಡಿಗೆ ಸೀಮಿತವಾದ ಕಾಯಿಲೆಯಲ್ಲ. ಇದು ದೀರ್ಘಕಾಲದ ಉರಿಯೂತದ ಸ್ಥಿತಿ. ಪೀರಿಯೋಡಾಂಟೈಟಿಸ್ ಇರುವ ಸಂದರ್ಭದಲ್ಲಿಉಂಟಾಗುವ ಕೆಲವು ಉರಿಯೂತದ ಅಂಶಗಳು ರಕ್ತದ ಮೂಲಕ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಇತ್ತೀಚಿನ ಅಧ್ಯಯನಗಳು ಒಸಡಿನ ಕಾಯಿಲೆ ಮತ್ತು ಮಹಿಳೆಯರ ಬಂಜೆತನ ಹಾಗೂ ಪದೇಪದೆ ಇಂಪ್ಲಾಂಟೇಶನ್ ಫೇಲ್ಯೂರ್ ಮುಂತಾದ ಸಂತಾನೋತ್ಪತ್ತಿ ಸಮಸ್ಯೆಗಳ ನಡುವಿನ ಸಂಭವನೀಯ ಸಂಬಂಧವನ್ನು ಪರಿಶೀಲಿಸುತ್ತಿವೆ.
ಐವಿಎಫ್ ಚಿಕಿತ್ಸೆಯ ಸಂದರ್ಭದಲ್ಲಿಅಂಡಾಣುಗಳ ಬೆಳವಣಿಗೆಯನ್ನು ಉತ್ತೇಜಿಸಲು ವಿವಿಧ ಹಾರ್ಮೋನಲ್ ಔಷಧಗಳನ್ನು ಬಳಸಲಾಗುತ್ತದೆ. ಈಸ್ಟೊ್ರೕಜನ್ ಮತ್ತು ಪ್ರೊಜೆಸ್ಟರಾನ್ ಮಟ್ಟದಲ್ಲಾಗುವ ಬದಲಾವಣೆಗಳು ಒಸಡಿನ ರಕ್ತನಾಳಗಳು ಮತ್ತು ಹಲ್ಲಿನ ಮೇಲಿನ ಪ್ಲೇಕ್ ಹಾಗೂ ದೇಹ ನೀಡುವ ಉರಿಯೂತದ ಪ್ರತಿಕ್ರಿಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಈಗಾಗಲೇ ಪೀರಿಯೋಡಾನ್ಟೈಟಿಸ್ ಇರುವ ಕೆಲವು ಮಹಿಳೆಯರಲ್ಲಿಒಸಡಿನ ಊತ, ಕೆಂಪಾಗುವುದು, ಸ್ಪರ್ಶಕ್ಕೆ ನೋವು ಅಥವಾ ಹಲ್ಲುಜ್ಜುವಾಗ ರಕ್ತಸ್ರಾವ ಮುಂತಾದ ಲಕ್ಷಣಗಳು ಹೆಚ್ಚು ಗಮನಕ್ಕೆ ಬರಬಹುದು. ಆದ್ದರಿಂದ ಐವಿಎಫ್ ಚಿಕಿತ್ಸೆಗೆ ಒಳಗಾಗುತ್ತಿರುವ ಮಹಿಳೆಯರಲ್ಲಿಈ ಬಗ್ಗೆ ವಿಶೇಷ ಗಮನ ನೀಡುವುದು ಸೂಕ್ತ. ಸಾಧ್ಯವಾದಲ್ಲಿಅಗತ್ಯವಿರುವ ದಂತಚಿಕಿತ್ಸೆಗಳನ್ನು ಗರ್ಭಧಾರಣೆಗೆ ಮುನ್ನವೇ ಪೂರ್ಣಗೊಳಿಸುವುದು ಅನುಕೂಲ.
ಭವಿಷ್ಯದ ಸಂಶೋಧನೆಗೆ ಹೊಸ ದಾರಿ
ದಂತವೈದ್ಯಕೀಯ ಮತ್ತು ಸಂತಾನೋತ್ಪತ್ತಿ ಒಂದಾಗಬಹುದಾದ ಮತ್ತೊಂದು ಕುತೂಹಲಕಾರಿ ಕ್ಷೇತ್ರ ಲಾಲಾರಸದಲ್ಲಿರುವ ಬಯೋಮಾರ್ಕರ್ ಗಳು. ಲಾಲಾರಸವನ್ನು ಸಂಗ್ರಹಿಸುವುದು ಸರಳ. ಲಾಲಾರಸದಲ್ಲಿರುವ ಉರಿಯೂತದ ಮಾರ್ಕರ್ ಗಳು, ಒತ್ತಡದ ಮಾರ್ಕರ್ ಗಳು ಮತ್ತು ಉತ್ಕರ್ಷಣನಿರೋಧಕ ಮಾರ್ಕರ್ ಗಳು ಮುಂತಾದ ಅಂಶಗಳನ್ನು ಐವಿಎಫ್ ಫಲಿತಾಂಶಗಳೊಂದಿಗೆ ಹೋಲಿಸುವ ಕುರಿತು ಸಂಶೋಧನೆ ನಡೆಯುತ್ತಿದೆ.