ವಿಕ ಸುದ್ದಿಲೋಕ ಸುಳ್ಯಗೃಹಲಕ್ಷ್ಮಿ ಯೋಜನೆಯಡಿ ನಿಧನರಾದವರ ಖಾತೆಗೆ ಹಣ ಜಮೆಯಾಗಿ ಅದನ್ನು ಕೆಲವು ಮನೆಯವರು ಡ್ರಾ ಮಾಡಿದ್ದಾರೆ. ಅದನ್ನು ಸರಕಾರಕ್ಕೆ ಮರು ಪಾವತಿ ಮಾಡಬೇಕು. ಇಲ್ಲವಾದರೆ ಆ ಕುಟುಂಬಕ್ಕೆ ಸರಕಾರದ ಯಾವುದೇ ಸೌಲಭ್ಯ ಸಿಗದಂತೆ ಆಗುವ ಸಾಧ್ಯತೆ ಇದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ.
ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿಮಾತನಾಡಿದ ಅವರು, ಮೃತಪಟ್ಟವರ ಹೆಸರಿನ ಖಾತೆಯಲ್ಲಿಜಮೆಯಾದ ಹಣವನ್ನು ಎಟಿಎಂ ಮೂಲಕ ಪಡೆದು ಸರಕಾರಕ್ಕೆ ವಂಚಿಸಿರುವುದು ವಿಷಾದನೀಯ. ಆದುದರಿಂದ ಮರು ಪಾವತಿಸದೇ ಇದ್ದಲ್ಲಿಸರಕಾರಿ ಸೌಲಭ್ಯ ಪಡೆಯಲು ಸಮಸ್ಯೆಯಾಗಬಹುದು ಎಂದು ಹೇಳಿದರು.
ಮೃತ ಫಲಾನುಭವಿಗಳ ಖಾತೆಯಿಂದ ಎಟಿಎಂ ಮೂಲಕ ಹಣ ಡ್ರಾ ಮಾಡಲಾಗಿದೆ. ಇದಕ್ಕೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಕುರಿತು ಬ್ಯಾಂಕ್ ಹಾಗೂ ಫಲಾನುಭವಿಗಳ ಮನೆಯವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಸರಕಾರಕ್ಕೆ ಹಣ ಮರುಪಾವತಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿಇದೀಗ 31ನೇ ಕಂತಿನ ಹಣ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೆಲವರಿಗೆ ಬರುತ್ತಿದೆ, ಉಳಿದವರ ಖಾತೆಗಳಿಗೆ ಜಮಾವಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಗೃಹಜ್ಯೋತಿ ಯೋಜನೆಯಲ್ಲಿತಾಲೂಕಿನಲ್ಲಿಶೇ.50 ಪ್ರಗತಿ ಆಗಿದೆ ಎಂದು ಮೆಸ್ಕಾಂ ಎಇಇ ಹರೀಶ್ ನಾಯ್ ್ಕ ಹೇಳಿದಾಗ, ಯಾರೆಲ್ಲಪರಿಶೀಲನೆ ನಡೆಸಿದ್ದಾರೋ ಆ ಎಲ್ಲಫಲಾನುಭವಿಗಳಿಗೆ ಕೌಂಟರ್ ಶೀಟ್ ಕೊಡಬೇಕು. ಕೆಲವು ಕಡೆ ಕೊಡದೇ ಇರುವ ದೂರುಗಳು ಬಂದಿದ್ದು, ಮುಂದಿನ ದಿನದಲ್ಲಿನಾವು ಮನೆ ಮನೆ ಭೇಟಿ ನೀಡುತ್ತೇವೆ. ಕೌಂಟರ್ ಶೀಟ್ ಸಿಗದೇ ಇದ್ದರೆ ಆ ಅಧಿಕಾರಿ ವಿರುದ್ಧ ಸರಕಾರಕ್ಕೆ ಬರೆಯುವುದಾಗಿ ಭರತ್ ಮುಂಡೋಡಿ ಎಚ್ಚರಿಕೆ ನೀಡಿದರು.
ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಯ ಕುರಿತು ಚರ್ಚೆ ನಡೆಯಿತು. ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ ಪ್ರಗತಿಯ ಬಗ್ಗೆ ಮೆಸ್ಕಾಂ ಎಂಜಿನಿಯರ್ ಗಳಿಂದ ಮಾಹಿತಿ ಪಡೆಯಲಾಯಿತು. ಯುವ ನಿಧಿ ಸಂಬಂಧಿಸಿದಂತೆ ಯುವ ನಿಧಿ ಪಡೆದ ಫಲಾನುಭವಿಗಳ ಪೈಕಿ ಎಷ್ಟು ಮಂದಿ ಉದ್ಯೋಗ ಪಡೆದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು ಹಾಗೂ ಅವರಿಗೆ ಉದ್ಯೋಗಕ್ಕೆ ಪ್ರೇರಣೆ ನೀಡಬೇಕು ಎಂದು ಸೂಚಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಕಾರ್ಯದರ್ಶಿ ಇ.ಒ. ರಾಜಣ್ಣ, ಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ, ಎ.ಬಿ.ಅಬ್ಬಾಸ್ , ರಾಜು ನೆಲ್ಲಿಕುಮೇರಿ, ಧನುಷ್ ಕುಕ್ಕೆಟ್ಟಿ, ಸೋಮಶೇಖರ ಕೇವಳ, ವಿಜೇಶ್ ಹಿರಿಯಡ್ಕ, ರವಿ ಗುಂಡ್ಯಡ್ಕ, ಭವಾನಿ ಬೊಮ್ಮೆಟ್ಟಿ, ಶಿಲ್ಪಾ ಇಬ್ರಾಹಿಂ, ಈಶ್ವರ ಆಳ್ವ, ಶೇಖರ ಕಣೆಮರಡ್ಕ, ಲತೀಫ್ ಅಡ್ಕಾರು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಫೋಟೋ
24ಎಸ್ ಯುಎಲ್ -ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ನಡೆಯಿತು.