ರಾಜೇಶ್ ವಾಹನ ಅಂಡ್ ಜೀವನ..!

Contributed byKiran Mr. Kumar|Vijaya Karnataka
the achievements of rajesh in vehicles and life
ರಾಜೇಶ್ ಧ್ರುವ

ವಾಹನ ಮತ್ತು ಜೀವನ ಪಯಣ
ಧಿಧಿಧಿಧಿಧಿಧಿಧಿಧಿಧಿಧಿಧಿ-----------

ಇಂಟ್ರೋ

ಕಿರುತೆರೆ ಮೂಲಕ ಜನಪ್ರಿಯತೆ ಗಳಿಸಿ ಬೆಳ್ಳಿತೆರೆಯಲ್ಲಿನಟನೆ ಜತೆಗೆ ನಿರ್ದೇಶನದಲ್ಲೂಸೈ ಎನಿಸಿಕೊಂಡಿರುವ ರಾಜೇಶ್ ಧ್ರುವ ಅವರ ಬೈಕ್ ಒಲವು ವಿಶಿಷ್ಟ ಹಾಗೂ ಹೆಚ್ಚು ಪ್ರಾಕ್ಟಿಕಲ್ .

ಧಿಧಿಧಿ-------------

ಕಿರಣ್ ಚಂದ್ರ

--

ಜೇಬಿಗೆ ಭಾರವಾಗದ, ಪರಿಸರಕ್ಕೂ ಮಾರಕವಾಗದ ಸವಾರಿ ‘ಅಗ್ನಿಸಾಕ್ಷಿ’ ಖ್ಯಾತಿಯ ನಟ ರಾಜೇಶ್ ಧ್ರುವ ಅವರ ಆದ್ಯತೆ. ಅದಕ್ಕಾಗಿಯೇ ಕಾರು ಇದ್ದರೂ ಅದನ್ನು ಸಾಧ್ಯವಾದಷ್ಟು ಕಡಿಮೆ ಬಳಸುತ್ತ, ತಮ್ಮ ಬಳಿ ಇರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲೇ ಓಡಾಡುತ್ತಾರಂತೆ ಅವರು.

ತಮ್ಮ ಮೊದಲ ಬೈಕ್ ನೆನಪನ್ನು ತೆರೆದಿಡುವ ರಾಜೇಶ್ ಧ್ರುವ, ‘ನಾನು ಸೀರಿಯಲ್ ನಲ್ಲಿನಟಿಸುತ್ತಿದ್ದಾಗ ಖರೀದಿಸಿದ್ದು ಒಂದು ಗ್ರೇ ಬಣ್ಣದ ಸೆಕೆಂಡ್ ಹ್ಯಾಂಡ್ ಟಿವಿಎಸ್ ಅಪಾಚೆ ಬೈಕ್ . ‘ಅಗ್ನಿಸಾಕ್ಷಿ’ ಸೀರಿಯಲ್ ನಲ್ಲಿನಟಿಸುತ್ತಿದ್ದಾಗ ಸುಮಾರು ಆರು ತಿಂಗಳ ಕಾಲ ಐದರಿಂದ 6 ಕಿ.ಮೀ. ನಡೆದುಕೊಂಡೇ ಶೂಟಿಂಗ್ ಗೆ ಹೋಗುತ್ತಿದ್ದೆ. ನನಗೆ ಆ ನಟರಾಜ ಸರ್ವಿಸ್ ನ ಅನುಭವವೂ ಆಯ್ತು, ನಂತರ ಅಪಾಚೇ ಸರ್ವಿಸ್ ನ ಅನುಭವವವೂ ಅಯ್ತು. ಅದಕ್ಕೂ ಮೊದಲು ಎಷ್ಟೋ ಆಡಿಷನ್ ಗಳಿಗೆ ಬಿಎಂಟಿಸಿ ಏರುತ್ತಿದ್ದೆ. 11 ವರ್ಷ ಆ ಬೈಕ್ ನನ್ನ ಜತೆಯಲ್ಲೇ ಇತ್ತು, ಕೋವಿಡ್ ಸಮಯದಲ್ಲಿಎದುರಾದ ಆರ್ಥಿಕ ಹೊಡೆತಕ್ಕೆ ಆ ಬೈಕ್ ಅನ್ನೂ ಮಾರಿಕೊಂಡೆ. ಬಳಿಕ ನಾನು ಖರೀದಿಸಿದ್ದು ಮತ್ತೊಂದು ಸೆಕೆಂಡ್ ಹುಂಡೈ ಅಸೆಂಟ್ ಕಾರು. ನಂತರ 2019ರಲ್ಲಿಟಾಟಾ ನೆಕ್ಸಾನ್ ಕಾರು ಖರೀದಿಸಿದೆ. ಈಗಲೂ ಅದೇ ಕಾರು ಇದೆ. ಇತ್ತೀಚೆಗಷ್ಟೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದೇನೆ. ಈಗ ಹೆಚ್ಚು ಸಮಯ ಅದರಲ್ಲೇ ಓಡಾಡುತ್ತೇನೆ’ ಎನ್ನುತ್ತಾರೆ.

‘ಈಗ ನನ್ನ ಬಳಿ ಇರುವ ಬಜಾಜ್ ಚೇತಕ್ ಸ್ಕೂಟರ್ ಒಮ್ಮೆ ಚಾಜ್ ರ್ ಮಾಡಿದರೆ 120 ಕಿಮೀವರೆಗೂ ಮೈಲೇಜ್ ಕೊಡುತ್ತೆ. ಎಲೆಕ್ಟ್ರಿಕ್ ಸ್ಕೂಟರ್ ನ ಕೊಳ್ಳಲು ಇದ್ದ ಮೊದಲ ಉದ್ದೇಶ ಪೆಟ್ರೋಲ್ ಉಳಿಸುವುದು ಮತ್ತು ಎಲ್ಲದಕ್ಕೂ ಕಾರಿನ ಮೇಲಿದ್ದ ಅವಲಂಬನೆ ಕಡಿಮೆ ಮಾಡುವುದಾಗಿತ್ತು. ಮಾಲಿನ್ಯ ನಿಯಂತ್ರಣಕ್ಕೂ ಇದು ಪೂರಕವಾಗುತ್ತೆ ಎನ್ನುವುದು ನನ್ನ ಆಲೋಚನೆ. ಚೇತಕ್ ಸ್ಕೂಟರ್ ಅನ್ನು ಖರೀದಿಸುವ ಮುನ್ನ ಸಾಕಷ್ಟು ಸ್ಕೂಟರ್ , ಬೈಕ್ ಗಳನ್ನು ಪರಿಶೀಲಿಸಿದೆ. ಅವುಗಳಲ್ಲಿಇದರ ಸ್ಟೈಲ್ ನನಗೆ ಮಜಾ ಕೊಟ್ಟಿತು. ಯೂನಿಸೆಕ್ಸ್ ಸ್ಟೈಲ್ ನನ್ನ ಗಮನ ಸೆಳೆಯಿತು. ತುಂಬಾ ಕಂಫರ್ಟ್ ಕೂಡ ಇದೆ. ಆದರೆ ಇದಕ್ಕಿರುವ ಏಕೈಕ ಸಮಸ್ಯೆ ಅಂದರೆ ಚಾರ್ಜಿಂಗ್ ಸ್ಟೇಷನ್ಸ್ ಹೆಚ್ಚು ಇಲ್ಲದಿರುವುದು. ನನ್ನ ಗಾಡಿಯನ್ನು ಮನೆಯಲ್ಲೇ ಚಾಜ್ ರ್ ಮಾಡಬೇಕು. ಅರ್ಧದಾರಿಯಲ್ಲಿಚಾಜ್ ರ್ ಖಾಲಿಯಾದರೆ ಕಥೆ ಮುಗಿತು. ಅದು ಬಿಟ್ಟರೆ ಪರ್ಫಾರ್ಮೆನ್ಸ್ ವಿಷಯದಲ್ಲಿಗಾಡಿ ತುಂಬಾ ಚೆನ್ನಾಗಿದೆ’ ಎಂದು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳಿದರು.

‘ನನ್ನ ಮುಂದಿನ ಗುರಿ ಎಲೆಕ್ಟ್ರಿಕ್ ಕಾರು ಕೊಳ್ಳುವುದೇ ಆಗಿದೆ. ಆದರೆ ಸದ್ಯ ಎಲೆಕ್ಟ್ರಿಕ್ ಕಾರು ಚಾಜ್ ರ್ ಮಾಡುವ ಹೆಚ್ಚು ಸ್ಟೇಷನ್ ಗಳು ನಮ್ಮಲ್ಲಿಇಲ್ಲ. ಮನೆಯಲ್ಲಿಗಂಟೆಗಟ್ಟಲೆ ಕಾರು ಚಾಜ್ ರ್ ಮಾಡುವಷ್ಟು ಸಮಯವೂ ಇಲ್ಲ. ಹಾಗಾಗಿ ಎಲೆಕ್ಟ್ರಿಕ್ ಕಾರನ್ನು ಇನ್ನೂ ಖರೀದಿಸಿಲ್ಲ. ನಮ್ಮಲ್ಲಿಇನ್ನಷ್ಟು ಚಾರ್ಜಿಂಗ್ ಸ್ಟೇಷನ್ಸ್ ಆಗಬೇಕು. ಈಗಿರುವ ಪೆಟ್ರೋಲ್ ಬಂಕ್ ಗಳ ಥರವೇ ಹೆಚ್ಚು ಹೆಚ್ಚು ಚಾಜಿಂಗ್ ಸ್ಟೇಷನ್ ಆದರೆ ನನ್ನಂಥಾ ಇವಿ ಬಳಸುವ ಆಲೋಚನೆ ಇರುವ ಎಷ್ಟೋ ಜನರಿಗೆ ಕಾರು ಕೊಳ್ಳಲು ಕಾನ್ಫಿಡೆನ್ಸ್ ಬರುತ್ತೆ. ತುಂಬಾ ಬಿಸಿಲಿನಲ್ಲಿ, ದೂರದ ಪ್ರಯಾಣಕ್ಕಷ್ಟೆ ಕಾರು ಬಳಸುತ್ತೇನೆ. ಕಲಾವಿದರು ದ್ವಿಚಕ್ರ ವಾಹನದಲ್ಲಿಓಡಾಡುವಾಗ ಜನರು ಗುರುತಿಸಿ ಮಾತಾಡುವುದುಂಟು. ಆದರೆ ಮಾಸ್ಕ್ , ಹೆಲ್ಮೆಟ್ ಧರಿಸುವ ಕಾರಣ ಹೆಚ್ಚಿನ ಜನರಿಗೆ ಗೊತ್ತಾಗಲ್ಲ. ಕೆಲವರು ನನ್ನ ಕಣ್ಣು ನೋಡಿ ಗುರುತು ಹಿಡಿಯುತ್ತಾರೆ. ಅದು ನನಗೆ ವೈಯಕ್ತಿಕವಾಗಿ ಹೆಚ್ಚು ಖುಷಿ ಕೊಡುತ್ತೆ. ಅದಕ್ಕಾಗಿ ಕಾರಿನಲ್ಲಿಹೋಗಬೇಕೆಂದು ಎಂದೂ ಅನ್ನಿಸಿಲ್ಲ. ನಾನು ನಡೆದು ಹೋಗಿದ್ದ ದಾರಿಯಲ್ಲೇ ಬೈಕ್ ನಲ್ಲಿಹೋಗುತ್ತೇನೆ, ಕಾರಿನಲ್ಲೂಹೋಗುತ್ತೇನೆ. ಆಗೆಲ್ಲಾನನಗೆ ನನ್ನ ಹೋರಾಟದ ದಿನಗಳ ನೆನಪಾಗುತ್ತೆ, ಬೆಳೆದ ರೀತಿಯ ಬಗ್ಗೆ ಹೆಮ್ಮೆ ಎನ್ನಿಸುತ್ತೆ. 14 ವರ್ಷ ನಾನು ಬೆಳೆದ ರೀತಿ ನನಗೆ ತೃಪ್ತಿ ಕೊಟ್ಟಿದೆ’ ಎಂದು ತಮ್ಮ ವಾಹನ ಹಾಗೂ ಜೀವನದೊಂದಿಗಿನ ಪಯಣವನ್ನು ಹಂಚಿಕೊಳ್ಳುತ್ತಾರೆ ರಾಜೇಶ್ .