ಅಕ್ರಮ ಚಟುವಟಿಕೆ ತಡೆಗೆ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ!

Contributed bymahadevakon@gmail.com|Vijaya Karnataka
over 50 cctv cameras in kikkar a new step towards crime prevention funded by donations
ದಾನಿಗಳ ಸಹಾಯದಿಂದ ಅನುಷ್ಠಾನ | ಮುಖ್ಯ ರಸ್ತೆ ವಿಸ್ತರಣೆ ನೆಪದಲ್ಲಿತೆರವು | ಪಪಂಗೆ ಅನೇಕ ಬಾರಿ ಮನವಿ ನೀಡಿದರೂ ಸ್ಪಂದನೆ ಇಲ್ಲ(ಕಿಕ್ಕರ್ )

ಅಕ್ರಮ ಚಟುವಟಿಕೆ ತಡೆಗೆ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ !
---

ಕೊಂಡ್ಲಹಳ್ಳಿ ಮಹಾದೇವ ಮೊಳಕಾಲ್ಮುರು

ಘ್ಕಿdvಜಛಿdಜಿಠಿಟ್ಟಃಜಞaಜ್ಝಿ.್ಚಟಞ

ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಪ್ರಮುಖ ಗ್ರಾಮಗಳಲ್ಲಿಪೊಲೀಸ್ ಇಲಾಖೆಯು ಸಮುದಾಯ ಸಹಭಾಗಿತ್ವದಲ್ಲಿಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಸಂಭವನೀಯ ಅಕ್ರಮ ಚಟುವಟಿಕೆ ಹಾಗೂ ಅಪರಾಧಿಗಳ ಪತ್ತೆಗೆ ಹದ್ದಿನ ಕಣ್ಗಾವಲಿಗೆ ಮುಂದಾಗಿದೆ.

ಪಟ್ಟಣದ ಕೆಇಬಿ ವೃತ್ತ, ಬಸ್ ನಿಲ್ದಾಣ, ಪಿ.ಟಿ.ಹಟ್ಟಿ, ಕೋಟೆ ಬಡಾವಣೆ, ಮುಬಾರಕ್ ಮೊಹಲ್ಲಾಹಾಗೂ ರಾಯದುರ್ಗ ರಸ್ತೆ ಅಂಬೇಡ್ಕರ್ ಸರ್ಕಲ್ ಸೇರಿದಂತೆ 25 ಹಾಗೂ ತಾಲೂಕಿನ ಹಾನಗಲ್ ಕ್ರಾಸ್ , ರಾಯಾಪುರ, ಚಿಕ್ಕೋಬನಹಳ್ಳಿ, ಕೊಂಡ್ಲಹಳ್ಳಿ, ಬಿ.ಜಿ.ಕೆರೆ ಊಡೇವು ಗ್ರಾಮಗಳು ಒಳಗೊಂಡಂತೆ ಒಟ್ಟು 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಈಗಾಗಲೇ ಅಳವಡಿಸಲಾಗಿದೆ.

ತಾಲೂಕು ರಾಜ್ಯದ ಗಡಿಭಾಗದಲ್ಲಿದೆ. ಹೊರ ರಾಜ್ಯದವರು ಇಲ್ಲಿಗೆ ಬಂದು ಅಪರಾಧ ಕೃತ್ಯ ನಡೆಸಿದರೆ ಅದಕ್ಕೆ ತಡೆ ಹಾಕಲು ಹಾಗೂ ಜನರಲ್ಲಿಸಿಸಿ ಕ್ಯಾಮೆರಾ ಜಾಗೃತಿ ಜತೆ ಟ್ರಾಫಿಕ್ ತಹಬದಿಗೆ ತರಲು ಪಿಎಸ್ ಐ ಮಹೇಶ್ ಲಕ್ಷತ್ರ್ಮಣ್ ಹೊಸಪೇಟೆ ನೇತೃತ್ವದಲ್ಲಿಈ ಕಣ್ಗಾವಲಿಗೆ ಮೊರೆ ಹೋಗಲಾಗಿದೆ.

ಕಳೆದ ಆರು ವರ್ಷದ ಹಿಂದೆ ಸ್ಥಳೀಯ ಪಪಂ ರಾಜ್ಯ ಹಣಕಾಸು ಯೋಜನೆಯಡಿ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿಪಟ್ಟಣದ ನಾನಾ ಕಡೆ ಸಿಸಿ ಕ್ಯಾಮೆರಾ ಅಳವಡಿಸಿ ಪೊಲೀಸ್ ಠಾಣೆಯಲ್ಲಿಮಾನಿಟರ್ ಫಿಕ್ಸ್ ಮಾಡಿತ್ತು. ಈ ಕ್ಯಾಮೆರಾಗಳನ್ನು ಎರಡು ವರ್ಷಗಳ ನಂತರ ಮುಖ್ಯ ರಸ್ತೆ ವಿಸ್ತರಣೆ ನೆಪದಲ್ಲಿತೆರವುಗೊಳಿಸಲಾಯಿತು. ರಸ್ತೆ ವಿಸ್ತರಣೆ ನಂತರ ಪೊಲೀಸ್ ಇಲಾಖೆ ಪಪಂಗೆ ಅನೇಕ ಬಾರಿ ಮನವಿ ಪತ್ರ ನೀಡಿದ್ದರೂ ಸಿಸಿ ಕ್ಯಾಮೆರಾ ಅಳವಡಿಕೆಗೆ ಇಲ್ಲಿನ ಅಧಿಕಾರಿಗಳು ಸಾಥ್ ನೀಡದ ಕಾರಣ ಪೊಲೀಸರು ಸಮುದಾಯವನ್ನು ಬಳಕೆ ಮಾಡಿಕೊಂಡು ದಾನಿಗಳಿಂದ ಸಿಸಿ ಕ್ಯಾಮೆರಾ ಪಡೆದು ಅನುಷ್ಠಾನ ಮಾಡಲು ಸಜ್ಜಾಗಿದೆ.

ಪೊಲೀಸ್ ಇಲಾಖೆಯ ಈ ಕಾರ್ಯ ವೈಖರಿಗೆ ಅನೇಕರು ಸಿಸಿ ಕ್ಯಾಮೆರಾ ಕೊಡುಗೆಯಾಗಿ ನೀಡಿದ್ದಾರೆ. ಇದರ ಜತೆಯಲ್ಲಿಟ್ರಸ್ಟ್ ಗಳ ಪದಾಧಿಕಾರಿಗಳು ಕೈಜೋಡಿಸಿದ್ದಾರೆ. ಒಂದು ಕ್ಯಾಮೆರಾಗೆ ಕನಿಷ್ಟ ಎಂಟರಿಂದ ಹತ್ತು ಸಾವಿರ ರೂ. ವೆಚ್ಚ ಬರಲಿದೆ. ಗುಣಮಟ್ಟದ ಹಾಗೂ ಹೆಚ್ಚು ನಿಖರತೆಯ ಕಾರ್ಯ ಮಾಡುವ ಸಿಸಿ ಕ್ಯಾಮೆರಾಗಳಿದ್ದಲ್ಲಿಅನುಕೂಲ ಜಾಸ್ತಿಯಾಗಲಿದೆ. ಈ ನಿಟ್ಟಿನಲ್ಲಿನಾವು ಹೆಚ್ಚು ಗಮನ ನೀಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

=====

ಆಟೋ ಚಾಲಕರಿಂದ ಸಹಾಯ

ಬಿ.ಜಿ.ಕೆರೆ ಗ್ರಾಮದ ಅಂಡರ್ ಪಾಸ್ ನಲ್ಲಿಅಳವಡಿಸಲು ಮುಂದಾಗಿರುವ ಸಿಸಿ ಕ್ಯಾಮೆರಾವನ್ನು ಸ್ಥಳೀಯ ಆಟೋ ಚಾಲಕರು ತಮ್ಮ ಕೈಲಾದ ಸಹಾಯ ಮಾಡಿ ಸಿಸಿ ಕ್ಯಾಮೆರಾ ವೆಚ್ಚವನ್ನು ಸಂಪೂರ್ಣವಾಗಿ ಭರಿಸಿರುವುದು ನಿಜಕ್ಕೂ ಮಾದರಿ.

=====

ಮೊಬೈಲ್ ಗೆ ಅಳವಡಿಕೆ

ಪಟ್ಟಣ ಸೇರಿದಂತೆ ರಾಯಾಪುರ, ಚಿಕ್ಕೋಬನಹಳ್ಳಿ, ತುಮಕೂರ್ಲಹಳ್ಳಿಯಲ್ಲಿಸಿಸಿ ಕ್ಯಾಮೆರಾ ಮಾನೀಟರ್ ಪೊಲೀಸ್ ಠಾಣೆಯಲ್ಲಿಅಳವಡಿಸಲು ಇಲಾಖೆ ಮುಂದಾಗಿದೆ. ಉಳಿದ ಗ್ರಾಮಗಳಲ್ಲಿಕ್ಯಾಮೆರಾಗಳನ್ನು ಬೀಟ್ ಸಿಬ್ಬಂದಿ ಹಾಗೂ ಬೀಟ್ ಸಮಿತಿ ಸದಸ್ಯರ ಮೊಬೈಲ್ ಗಳಿಗೆ ಅಳವಡಿಸಲು ಇಲಾಖೆ ಮುಂದಾಗಿದೆ.

----

ಕೋಟ್ //

ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಕ್ರೈಂ ರೇಟು ಕಡಿಮೆಯಾಗಲಿದೆ. ಅಪರಾಧ ನಡೆಸುವವರಲ್ಲಿರೆಕಾರ್ಡ್ ಆಗುವ ಭಯ ಮೂಡಲಿದ್ದು ಅಪರಾಧಗಳು ಕಡಿಮೆಯಾಗಲಿವೆ. ಅಪರಾಧ ಮಾಹಿತಿ ದೊರೆಯಲು ಅನುಕೂಲ, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ವಿವರ ದೊರೆಯಲಿದೆ. ಟ್ರಾಫಿಕ್ ಕಂಟ್ರೊಲ್ ಮಾಡಲು ಈ ಕ್ಯಾಮೆರಾ ಅವಶ್ಯಕ.

-ಮಹೇಶ್ ಲಕ್ಷತ್ರ್ಮಣ್ ಹೊಸಪೇಟೆ ಪಿಎಸ್ ಐ, ಮೊಳಕಾಲ್ಮುರು.

---

16 ಎಂಎಲ್ ಕೆ ಪಿ 1

ಮೊಳಕಾಲ್ಮುರು ತಾಲೂಕು ತುಮಕೂರ್ಲಹಳ್ಳಿಯಲ್ಲಿಪೊಲೀಸ್ ಇಲಾಖೆ ನೇತೃತ್ವದಲ್ಲಿಸಿಸಿ ಕ್ಯಾಮೆರಾ ಅಳವಡಿಕೆ ಮಾಡುತ್ತಿರುವುದು.