ಹೊಸನಗರ: ಮೈಸೂರಿನ ಅಮೃತ ವಿಶ್ವವಿದ್ಯಾಪೀಠದ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪ ಮುಖ್ಯಸ್ಥ ಅಕ್ಷಯ್ ಶಾಂತಾರಾಮ್ ಅವರ ಸಂಶೋಧನಾ ಪ್ರಬಂಧಕ್ಕೆ ಪಿಎಚ್ ಡಿ ಪದವಿ ಲಭ್ಯವಾಗಿದೆ.‘ಎ ಮಷಿನ್ ಲನಿಂರ್ ಗ್ ಫ್ರೇಮ್ವರ್ಕ್ ಟು ಐಡೆಂಟಿಫೈ ದಿ ಎಫೆಕ್ಟ್ ಆಫ್ ಪಾರ್ಕಿನ್ಸನ್ಸ್ ಡಿಸೀಸ್ ಆನ್ ವಿಷುಯಲ್ ಕಾಗ್ನಿಷನ್ ಅಬಿಲಿಟೀಸ್ ’ ಕುರಿತು ಅಮೃತ ವಿಶ್ವವಿದ್ಯಾಪೀಠದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ. ಜಿ.ಅಮುದ ಅವರ ಮಾರ್ಗದರ್ಶನದಲ್ಲಿಇವರು ಸಂಶೋಧನೆ ಕೈಗೊಂಡಿದ್ದರು.
ಈ ಸಂಶೋಧನೆಯು ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ ತಂತ್ರಜ್ಞಾನಗಳ ನೆರವಿನಿಂದ ಪಾರ್ಕಿನ್ಸನ್ಸ್ ಕಾಯಿಲೆಯು ದೃಷ್ಟಿ-ಜ್ಞಾನ ಸಾಮರ್ಥ್ಯದ ಮೇಲೆ ಬೀರುವ ಪರಿಣಾಮ ಗುರುತಿಸಲು ನೂತನ ವಿಧಾನವನ್ನು ಅಭಿವೃದ್ಧಿಪಡಿಸಿದ್ದು, ನರಸಂಬಂಧಿ ಕಾಯಿಲೆಗಳ ಆರಂಭಿಕ ಪತ್ತೆ ಹಾಗೂ ವೈದ್ಯಕೀಯ ನಿರ್ಧಾರ ಪ್ರಕ್ರಿಯೆಗೆ ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯಿದೆ. ಡಾ.ಅಕ್ಷಯ್ ಶಾಂತಾರಾವ್ ಪಟ್ಟಣದ ಹಿರಿಯ ಪತ್ರಕರ್ತ ಶಾಂತಾರಾಮ್ ಹಾಗೂ ಅಮೃತ ದಂಪತಿ ಪುತ್ರ.