ನಗರದ ಕಲಬುರಗಿ ರೋಟರಿ ಕ್ಲಬ್ ನಲ್ಲಿಹಮ್ಮಿಕೊಂಡಿದ್ದ ರೊಟೋರಿಯನ್ಸ್ ಗಳಿಗೆ ಸನ್ಮಾನಿಸಲಾಯಿತು.**
(ಕಿಕ್ಕರ್ ) ವಿಶ್ರಾಂತ ಕುಲಪತಿ ಡಾ.ಪ್ರತಾಪ ಸಿಂಗ್ ತಿವಾರಿ ಹೇಳಿಕೆ
ಪರಿಸರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ
ವಿಕ ಸುದ್ದಿಲೋಕ ಕಲಬುರಗಿ
ಪರಿಸರವನ್ನು ಕಾಪಾಡುವುದು ಕೇವಲ ಸರಕಾರ ಅಥವಾ ಯಾವುದೋ ಸಂಸ್ಥೆಯ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ವಿಶ್ರಾಂತ ಕುಲಪತಿ ಡಾ.ಪ್ರತಾಪ ಸಿಂಗ್ ತಿವಾರಿ ಹೇಳಿದರು.
ನಗರದ ಕಲಬುರಗಿ ರೋಟರಿ ಕ್ಲಬ್ ನಲ್ಲಿತಿಂಗಳ ಹೊಸ ನಾಯಕತ್ವ ಸಮಾರಂಭದಲ್ಲಿಮಾತನಾಡಿ ಮಾತನಾಡಿದರು. ಪರಿಸರ ಎಂಬುದು ನಮ್ಮ ಜೀವನದ ಮೂಲಧಾತು. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಅನ್ನ-ಎಲ್ಲವೂ ಈ ಪರಿಸರ ನಮಗೆ ನೀಡಿದ ಕೊಡುಗೆ. ಆದರೆ, ಇಂದು ಆಧುನಿಕತೆ, ನಗರೀಕರಣ ಮತ್ತು ತಂತ್ರಜ್ಞಾನದ ಓಟದಲ್ಲಿನಾವು ಪರಿಸರ ಮರೆಯುತ್ತಿದ್ದೇವೆ. ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರೀತ್ಯಗಳಂತಹ ಸಮಸ್ಯೆಗಳು ಇಂದು ಭೂಮಿಯನ್ನು ಕಷ್ಟಕ್ಕೆ ದೂಡಿವೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ಸಣ್ಣ ಅಭ್ಯಾಸಗಳಲ್ಲಿಬದಲಾವಣೆ ಮಾಡಿಕೊಳ್ಳುವ ಮೂಲಕವೇ ದೊಡ್ಡ ಬದಲಾವಣೆ ತರಲು ಸಾಧ್ಯವಿದೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ನೀರನ್ನು ಮಿತವಾಗಿ ಬಳಸಬೇಕು. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಅಗತ್ಯವಿದ್ದಾಗ ಮಾತ್ರ ಫ್ಯಾನ್ , ಲೈಟ್ ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಸಿ ಇಂಧನ ಮತ್ತು ವಿದ್ಯುತ್ ಉಳಿತಾಯ ಮಾಡಬೇಕು. ಒಂದು ಗಿಡ ಕಡಿದರೆ ಮತ್ತೆ 10 ಗಿಡ ನೆಡಬೇಕು ಎಂಬ ಅನೇಕ ಸಲಹೆಗಳನ್ನು ನೀಡಿದರು.
ಇದೇ ಕಾರ್ಯಕ್ರಮದಲ್ಲಿರೊಟೋರಿಯನ್ಸ್ ಗಳಿಗೆ ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ನ ಕಾರ್ಯದರ್ಶಿ ಡಾ.ಬಿ.ಎಸ್ .ದೇಸಾಯಿ, ರಮೇಶ ಜಿ.ತಿಪ್ಪನೂರ್ , ಶೇಷಾದ್ರಿ ಕುಲಕರ್ಣಿ, ವಿಜಯರೆಡ್ಡಿ ವಂದಲಿ ಇತರರಿದ್ದರು.