‘ಗ್ರಾಮದಲ್ಲೇ ಉದ್ಯೋಗ ಪಡೆದು ಜೀವನ ಕಟ್ಟಿಕೊಳ್ಳಿ’

Contributed byrathodjayakumar92@gmail.com|Vijaya Karnataka
Vijay Karnataka
‘ಗ್ರಾಮದಲ್ಲೇ ಉದ್ಯೋಗ ಪಡೆದು ಜೀವನ ಕಟ್ಟಿಕೊಳ್ಳಿ’

ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)
ತಾಲೂಕಿನ ಕಲ್ಲಹಳ್ಳಿ ಹಾಗೂ ಸೀತಾರಾಮ ತಾಂಡಾದಲ್ಲಿ‘ವಲಸೆ ಏಕೆ? ನಿಮ್ಮೂರಲ್ಲೇ ಕೆಲಸ’ ಎಂಬ ವಿಶೇಷ ಅಭಿಯಾನದಡಿ ಗ್ರಾಪಂನಿಂದ ‘ವಿಬಿ ಜಿ ರಾಮ್ ಜಿ’ ಯೋಜನೆ ಕುರಿತು ಜಾಗೃತಿ ಮೂಡಿಸಲಾಯಿತು.

ಕಲ್ಲಹಳ್ಳಿ ತಾಂಡಾದಲ್ಲಿನಡೆದ ಅಭಿಯಾನದಲ್ಲಿಪಿಡಿಒ ಸೈಯ್ಯದ್ ಮನ್ಸೂರ್ ಹುಸೇನ್ ಮಾತನಾಡಿ, ‘‘ವಿಬಿ ಜಿ ರಾಮ್ ಜಿ ಯೋಜನೆಯಡಿ ಕೂಲಿ ಮೊತ್ತವನ್ನು 370ರೂ.ನಿಂದ 382 ರೂ.ಗೆ ಹೆಚ್ಚಿಸಲಾಗಿದೆ. ಮಾನವ ದಿನಗಳನ್ನು 100ರಿಂದ 125 ದಿನಗಳಿಗೆ ಏರಿಕೆ ಮಾಡಲಾಗಿದೆ. ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆದುಕೊಂಡು ಗ್ರಾಮದಲ್ಲೇ ಉದ್ಯೋಗ ಪಡೆದು ಜೀವನ ರೂಪಿಸಿಕೊಳ್ಳಬೇಕು,’’ ಎಂದು ಸಲಹೆ ನೀಡಿದರು.

ಕರಪತ್ರ ಹಂಚಿಕೆ: ಕಲ್ಲಹಳ್ಳಿ ತಾಂಡಾದ ಪ್ರಮುಖ ಬೀದಿ, ಅಂಗಡಿ, ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದ ಪಿಡಿಒ ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಯೋಜನೆಯ ಸಂಪೂರ್ಣ ಮಾಹಿತಿ ನೀಡಿದರು.

ಐಇಸಿ ಸಂಯೋಜಕ ಎಚ್ .ನಾಗರಾಜ, ತಾಂತ್ರಿಕ ಸಹಾಯಕಿ ಮಮತಾ ನಾಯ್ಕ, ಕಾರ್ಯದರ್ಶಿ ಕೆ.ಎಂ.ನಾಗರಾಜ ಸ್ವಾಮಿ, ಕರ ವಸೂಲಿಗಾರ ಚಂದ್ರನಾಯ್ಕ, ಟಿಆರ್ ಎಂ ಹರೀಶ್ ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು.

ಫೋಟೋ ಕ್ಯಾಪ್ಷನ್ : 24ಜಯಪ್ಪ6

ಕಲ್ಲಹಳ್ಳಿ ತಾಂಡಾದಲ್ಲಿವಿಬಿ ಜಿ ರಾಮ್ ಜಿ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಯಿತು.