ಜಾಗತಿಕ ಪ್ರಪಂಚದಲ್ಲಿ ನೈತಿಕ ಮೌಲ್ಯಗಳ ಅಧಃಪತನ ಹೆಚ್ಚಾಗಿದ್ದು , ಸರಕಾರ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಶಾಲಾ ಹಂತದಲ್ಲಿಕಡ್ಡಾಯವಾಗಿ ಮೌಲ್ಯ ಶಿಕ್ಷಣ ಭೋದಿಸಲು ಕ್ರಮ ಕೈಗೊಂಡಿದೆ ಎಂದು ಅರಸೀಕೆರೆ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ್ ತಿಳಿಸಿದರು.ಜಾವಗಲ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿಹೋಬಳಿಯ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಹಿುಕ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರುಗಳ ಸಭೆಯಲ್ಲಿಮಾತನಾಡಿದರು.
‘‘ಸರಕಾರವು ಗುಣಮಟ್ಟದ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಕಾರ್ಯಕ್ರಮಗಳ ಕುರಿತು ಶೈಕ್ಷಣಿಕ ಉಪಕ್ರಮಗಳನ್ನು ಪರಿಚಯಿಸಿದೆ, ಇವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಇಲಾಖೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಅರಸೀಕೆರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಯು.ಎನ್ .ಅಶೋಕ್ , ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕದ ಕಾರ್ಯದರ್ಶಿ ಡಿ.ಎಚ್ . ಕೃಷÜ್ಣ, ಉಪಾಧ್ಯಕ್ಷ ಕೆ.ಎಂ.ಲೋಕೇಶ್ , ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ, ಶಿಕ್ಷಕ ನಾಗರಾಜು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಉಮೇಶ್ , ನಿಕಟ ಪೂರ್ವ ದೈಹಿಕ ಶಿಕ್ಷಣ ಪರಿಹೀಕ್ಷಕ ವಸಂತ್ ಕುಮಾರ್ , ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಸ್ವಾಹಿು, ಉಪ ಪ್ರಾಂಶುಪಾಲೆ ಆರ್ .ಕೆ.ಉಮಾ, ಜಯಣ್ಣ ಇದ್ದರು.
24 ಫೋಟೋ 01 :
ಜಾವಗಲ್ ಸರಕಾರಿ ಮಾದರಿ ಹಿರಿಯ ಪ್ರಾಥಹಿುಕ ಶಾಲೆಯಲ್ಲಿಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಬಿಆರ್ ಸಿ ಕುಮಾರ್ ಮಾತನಾಡಿದರು.