ಸಿಎಂ ಸಭೆಗೆ ಅಂತಿಮ ಸಿದ್ಧತೆ

Contributed byahobalapathy.narayanappa@timesofindia.com|Vijaya Karnataka
final review of cm meeting and security insights
ಬರ, ಭದ್ರಾ ಮೇಲ್ದಂಡೆ, ಗ್ಯಾರಂಟಿ ಪರಿಶೀಲನೆ ಮಾಹಿತಿ ಸಿದ್ದವಾಗಿಟ್ಟುಕೊಳ್ಳಲು ಡಿಸಿ ಸೂಚನೆ (ಕಿಕ್ಕರ್ )

ಸಿಎಂ ಸಭೆಗೆ ಅಂತಿಮ ಸಿದ್ಧತೆ
---

ವಿಕ ಸುದ್ದಿಲೋಕ ಚಿತ್ರದುರ್ಗ

ನಗರದ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪ ಸಭಾಂಗಣದಲ್ಲಿಜು.25ರ ಶನಿವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಗೆ ಅಗತ್ಯವಾದ ಮಾಹಿತಿ ಸಿದ್ದವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆಯ ಅಂತಿಮ ಸಿದ್ದತೆಗಳ ಕುರಿತು ಶುಕ್ರವಾರ, ಡಿಸಿ ಕಚೇರಿ ಸಭಾಂಗಣದಲ್ಲಿ, ಅಧಿಕಾರಿಗಳ ಸಭೆ ನಡೆಸಿ, ಮಾತನಾಡಿದರು.

ಬರ ನಿರ್ವಹಣೆ, ಕುಡಿಯುವ ನೀರು, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಪಂಚ ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ, ಗೃಹಲಕ್ಷಿತ್ರ್ಮ ಯೋಜನೆಗಳ ಪರಿಶೀಲನೆ ಮಾಹಿತಿಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಸಿದ್ದವಾಗಿಟ್ಟುಕೊಳ್ಳಬೇಕು ಎಂದರು.

ಚಿತ್ರದುರ್ಗ ಜಿಲ್ಲೆಯಲ್ಲಿಭದ್ರಾ ಮೇಲ್ದಂಡೆ ಯೋಜನೆಯಡಿ ನೀರಾವರಿ ವಿಸ್ತರಣೆ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನ ಸೆಳೆಯಬಹುದು. ಈ ಹಿನ್ನಲೆಯಲ್ಲಿಹೊಳಲ್ಕೆರೆ, ಹಿರಿಯೂರು ತಾಲೂಕುಗಳ ಪ್ರದೇಶಗಳನ್ನು ನೀರಾವರಿ ಯೋಜನೆಗೆ ಒಳಪಡಿಸುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗಳ ವಿವರಗಳನ್ನು ನೀಡಬೇಕು. ಜಿಲ್ಲೆಯಲ್ಲಿಜಾನುವಾರುಗಳ ಸಂಖ್ಯೆ ಅನುಗುಣವಾಗಿ ಲಭ್ಯ ಇರುವ ಮೇವು ಸಂಗ್ರಹಣೆ ವಿವರಗಳನ್ನು ಅಧಿಕಾರಿಗಳು ನೀಡುವುದರ ಜತೆಗೆ ಜಿಲ್ಲೆಯಲ್ಲಿ88,740 ಹೆಕ್ಟೇರ್ ಗೋಮಾಳ ಹಾಗೂ 8552 ಹೆಕ್ಟೇರ್ ಅಮೃತ್ ಕಾವಲ್ ಪ್ರದೇಶಗಳು ಇರುವುದನ್ನು ತಮ್ಮ ಮಾಹಿತಿಯಲ್ಲಿನೀಡಬೇಕು. ಈಗಾಗಲೇ ಜಿಲ್ಲೆಯಲ್ಲಿವಿತರಿಸಿರುವ ಮೇವು ಕಿಟ್ ಹಾಗೂ ಸರಕಾರಕ್ಕೆ ಸಲ್ಲಿಸಿರುವ ಮೇವು ಕಿಟ್ ವಿವರ ಸಹಾ ಒದಗಿಸಬೇಕು ಎಂದರು.

ಕೃಷಿ ಇಲಾಖೆ ಸಂಬಂಧಿಸಿದಂತೆ ಮುಂಗಾರು ಕೊರತೆಯಿಂದ ಜಿಲ್ಲೆಯಲ್ಲಿ13.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಇದುವರೆಗೆ ಎಷ್ಟು ಬಿತ್ತನೆಯಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಹಾಗೂ ಹಂಚಿಕೆ ಕುರಿತು ಮಾಹಿತಿ ನೀಡಬೇಕು. ಸದ್ಯ ಶುದ್ದ ಕುಡಿಯುವ ನೀರಿನ ಘಟಕ, ಕುಡಿಯುವ ನೀರು ಸರಬರಾಜು, ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕಾರ್ಯಾತ್ಮಕ ನಳ ಸಂಪರ್ಕ, ಕುಡಿಯುವ ನೀರಿನ ಸಂಕಷ್ಟ ಎದುರಾಗಿರುವ ಹಳ್ಳಿ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವ ಹಳ್ಳಿಗಳ ಕುರಿತು ನೀಡುವ ವಿವರಗಳು ಸ್ಪಷ್ಟವಾಗಿರಬೇಕು ಎಂದು ಸೂಚಿಸಿದರು.

ಸಭೆಯಲ್ಲಿಜಿಪಂ ಸಿಇಒ ಡಾ.ಆಕಾಶ್ , ಎಸ್ಪಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

**

ಬಾಕ್ಸ್ /

ಬಿಗಿ ಬಂದೋಬಸ್ ್ತ

ಸಿಎಂ ನೇತೃತ್ವದಲ್ಲಿಜು.25ರಂದು ನಡೆಯಲಿರುವ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ನಾನಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿಪೊಲೀಸ್ ಇಲಾಖೆಯಿಂದ ಭದ್ರತೆಗೆ 1000 ಪೊಲೀಸರನ್ನು ನಿಯೋಜಿಸಲಾಗಿದ್ದು, ಬಿಗಿ ಬಂದೋಬಸ್ ್ತ ಕೈಗೊಳ್ಳಲಾಗಿದೆ. ಒಟ್ಟಾರೆ 3 ಜನ ಎಸ್ಪಿ, 8 ಜನ ಡಿವೈಎಸ್ಪಿ, 20 ಜನ ಇನ್ಸ್ ಪೆಕ್ಟರ್ , 120 ಜನ ಪಿಎಸ್ ಐಗಳು ಹಾಗೂ 1,000ಕ್ಕೂ ಹೆಚ್ಚು ಎಚ್ ಸಿ/ಪಿಸಿ ದರ್ಜೆಯ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಹೆಚ್ಚುವರಿಯಾಗಿ 8 ಕೆಎಸ್ ಆರ್ಪಿ ಹಾಗೂ 10 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

**

ಇಂದಿನ ಸಿಎಂ ಕಾರ್ಯಕ್ರಮ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಳಗ್ಗೆ 10 ಗಂಟೆಗೆ ಹಿರಿಯೂರು ಪಟ್ಟಣದ ವೇದಾವತಿ ವಿಜ್ಞಾನ ಕಾಲೇಜು ಹಿಂಭಾಗದ ಕ್ರೀಡಾಂಗಣದಲ್ಲಿರುವ ಹೆಲಿಪ್ಯಾಡ್ ಗೆ ಆಗಮಿಸಲಿದ್ದು, ರಸ್ತೆಯ ಮೂಲಕ ಯರಬಳ್ಳಿ, ವದ್ದೀಕರೆ, ತಾಳವಟ್ಟಿ, ಮರಡಿಹಳ್ಳಿಗೆ ಭೇಟಿ ನೀಡಿ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಲಿದ್ದಾರೆ.

ಬಳಿಕ ಮಧ್ಯಾಹ್ನ 12:30ಕ್ಕೆ ನಗರದ ಅನುಭವ ಮಂಟಪ ಸಭಾಂಗಣದಲ್ಲಿಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಿದ್ದು, ಸಂಜೆ 05 ಗಂಟೆಗೆ ಮುರುಘಾಮಠ ಆವರಣದ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಹೊರಡಲಿದ್ದಾರೆ.