ಮನೆಯಲ್ಲಿಮಾತುಕತೆ ವಿಶಿಷ್ಟ ಕಾರ್ಯಕ್ರಮ

Contributed bymanjunathrd59@gmail.com|Vijaya Karnataka
home talks a festival with dr yashodha bhatt
24 ಮಂಜು 4

ಮನೆಯಲ್ಲಿಮಾತುಕತೆ ವಿಶಿಷ್ಟ ಕಾರ್ಯಕ್ರಮ
ವಿಕ ಸುದ್ದಿಲೋಕ ಹಾವೇರಿ

ಡಾ.ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿಗೋಕಾಕ್ ಅವರ ಪುತ್ರಿ ಡಾ.ಯಶೋಧಾ ಭಟ್ಟರೊಂದಿಗೆ ‘ನಾನು, ನನ್ನ ತಂದೆ ಗೋಕಾಕರು... ಇತ್ಯಾದಿ’ ಎಂಬ ಶೀರ್ಷಿಕೆಯ ವಿಶಿಷ್ಟ ಮಾತುಕತೆ ಕಾರ್ಯಕ್ರಮ ಧಾರವಾಡ ನಾರಾಯಣಪುರದ ಯಶೋಧಾ ಭಟ್ಟರ ನಿವಾಸದಲ್ಲಿನಡೆಯಿತು.

93ನೇ ಜನ್ಮದಿನದ ಮುನ್ನಾ ದಿನ ನಡೆದ ಮಾತುಕತೆಯಲ್ಲಿಡಾ. ಯಶೋಧಾ ತಮ್ಮ ಕೌಟುಂಬಿಕ ಹಲವು ಸುಂದರ ನೆನಪನ್ನು ಬಿಚ್ಚಿಟ್ಟರು.‘‘ಕನ್ನಡಕ್ಕೆ ದೊಡ್ಡಗೌರವ ಸಿಗುವಂತೆ ನೋಡಿಕೊಂಡ ಗೋಕಾಕರಿಗೆ ಇಂಗ್ಲಿಷ್ ಮತ್ತು ಕನ್ನಡ ಎರಡು ಕಣ್ಣುಗಳಾಗಿದ್ದವು ’’ಎಂದರು.

ಸುಮಂಗಲಾ ಭಟ್ಟ ಮಾತನಾಡಿ, ‘‘ಮಾವ ಗೋಕಾಕರು ನಾನು ಅಮೇರಿಕೆಯಲ್ಲಿದ್ದಾಗ ಅನೇಕ ವೈಚಾರಿಕ ಪತ್ರಗಳನ್ನು ಕನ್ನಡದಲ್ಲಿಯೇ ಬರೆಯುತ್ತಿದ್ದರು. ಪುಟ್ಟಪರ್ತಿ ಸಾಯಿಬಾಬಾರ ಪರಮ ಭಕ್ತರಾಗಿದ್ದ ಗೋಕಾಕರು ಅವರ ಅಣತಿಯಂತೆ ಅನೇಕ ನಿರ್ಧಾರ ತೆಗೆದುಕೊಳ್ಳುತ್ತಿದ್ದರು’’ ಎಂದರು.

ವಿಶೇಷ ಆಮಂತ್ರಿತರಾಗಿದ್ದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತುಕತೆಗೆ ಚಾಲನೆಯನ್ನು ನೀಡಿದರು.

ಆಕಾಶವಾಣಿ ಧಾರವಾಡದ ವಿಶ್ರಾಂತ ನಿರ್ದೇಶಕ ಶರಣ ಬಸವ ಚೋಳಿನ ಅವರು ಹಾಡು ಹೇಳಿದರು.

ಟ್ರಸ್ಟ್ ಸದಸ್ಯ ಲಿಂಗರಾಜ ಸೊಟ್ಟಪ್ಪನವರ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿದರು.

ಟ್ರಸ್ಟ್ ಸದಸ್ಯೆ ಡಾ. ಪುಷ್ಪಾವತಿ ಶಲವಡಿಮಠ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಡಾ.ಸತೀಶ ಕುಲಕರ್ಣಿ, ಸದಸ್ಯರಾದ ಗುರುರಾಜ ನಾಡಿಗೇರ ಉಪಸ್ಥಿತರಿದ್ದರು. ಡಾ.ಜಗನ್ನಾಥ ಗೇನಣ್ಣವರ ನಿರೂಪಿಸಿದರು.

ಪೋಟೋ 24 ಮಂಜು 4

ಹಾವೇರಿಯ ಡಾ. ಗೋಕಾಕ್ ಟ್ರಸ್ಟ್ ವತಿಯಿಂದ ಧಾರವಾಡದಲ್ಲಿ‘ಮನೆಯಲ್ಲಿಮಾತುಕತೆ’ ಕಾರ್ಯಕ್ರಮ ನಡೆಯಿತು.