ಎಸ್ .ಜಾನಕಿ ಅವರ ಕಂಠಸಿರಿಗೆ ಮನಸೋಲದವರಿಲ್ಲ

Contributed bynews.raviraja18@gmail.com|Vijaya Karnataka
Vijay Karnataka
ಎಸ್ .ಜಾನಕಿ ಅವರ ಕಂಠಸಿರಿಗೆ ಮನಸೋಲದವರಿಲ್ಲ

ವಿಕ ಸುದ್ದಿಲೋಕ ಹೊಸನಗರ
ಭಾಷೆಗಳ ನಡುವೆ ದ್ವೇಷ, ವೈಮನಸ್ಸು ನಡೆಯುತ್ತಿರುವ ಇಂತಹ ಸಂದರ್ಭದಲ್ಲೂಸುಮಾರು 20 ಭಾಷೆಗಳಲ್ಲಿ48 ಸಾವಿರ ಹಾಡುಗಳನ್ನ ಹಾಡಿರುವ ಎಸ್ .ಜಾನಕಿ ಅವರ ಸಾಧನೆ ಭಾಷಾ ಸಾಮರಸ್ಯಕ್ಕೆ ಉದಾಹರಣೆ ಎಂದು ಸಾಮಾಜಿಕ ಕಾರ್ಯಕರ್ತ ಜಗದೀಶ್ ಚಂಪಾಕಪುರ ಹೇಳಿದರು.

ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿಇತ್ತೀಚೆಗೆ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟೊ್ರೕತ್ಥಾನÜ ಬಳಗ ಆಶ್ರಯದಲ್ಲಿಏರ್ಪಡಿಸಿದ್ದ ಎಸ್ . ಜಾನಕಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಸಂಗೀತಕ್ಕೆ ಎಲ್ಲರನ್ನು ಸೆಳೆಯುವ ಶಕ್ತಿಯಿದೆ. ಅದರಲ್ಲಿಎಸ್ .ಜಾನಕಿ ಅವರ ಕಂಠಸಿರಿಗೆ ಮನಸೋಲದವರೇ ಇಲ್ಲ. ಇತಿಹಾಸ ಕಂಡ ಶ್ರೇಷ್ಠ ಗಾಯಕರಲ್ಲಿಇವರು ಒಬ್ಬರು ಎಂದರು.

ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ, ಎಸ್ . ಜಾನಕಿ ಸಂಗೀತ ಲೋಕಕ್ಕೆ ಸಲ್ಲಿಸಿದ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲಎಂದರು.

ಕಾರಣಗಿರಿಯ ಕಲಾಭಾರತಿ ತಂಡದವರು ಎಸ್ . ಜಾನಕಿ ಹಾಡಿರುವ ಗೀತೆಗಳನ್ನು ಹಾಡಿದರು. ಹೊಸನಗರದ ಕೆ.ಎಸ್ .ವಿನಾಯಕ ಅವರು ಎಸ್ . ಜಾನಕಿ ಕುರಿತಾದ ತಾವು ರಚಿಸಿದ ಕವನ ವಾಚಿಸಿದರು.

ರಾಷ್ಟೊ್ರೕತ್ಥಾನ ಬಳಗದ ಅಧ್ಯಕ್ಷ ಕೆ.ಎಸ್ .ನಳಿನಚಂದ್ರ, ಕಾರ್ಯಕರ್ತರಾದ ಅಭಿಷೇಕ್ ಹನಿಯ ಗುರುಮೂರ್ತಿ, ಧನ್ಯಶ್ರೀ ರಮೇಶ್ , ವಿಧುಷಿ ಆರತಿ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ಪೋಟೊ ಶೀರ್ಷಿಕೆ

ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟೊ್ರೕತ್ಥಾನ ಬಳಗದಿಂದ ಎಸ್ . ಜಾನಕಿ ಅವರಿಗೆ ನುಡಿನಮನ ಸಲ್ಲಿಸಲಾಯಿತು.