ಮೊಟ್ಟೆ ಎಸೆತ ತಪ್ಪು ಎಂದ ಖರ್ಗೆ

Contributed byKENCHE GOWDA|Vijaya Karnataka
historic egg throwing incident kharges widespread reaction
ವಿಕ ಸುದ್ದಿಲೋಕ ಬೆಂಗಳೂರು ‘‘ಅಂತಹ ತಪ್ಪು ಮಾಡಬಾರದಿತ್ತು, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ,’’ ಎಂದು ಬಿಜೆಪಿ ಶಾಸಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಮೊಟ್ಟೆ ಎಸೆತಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘‘ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿಪ್ರಧಾನಿ ನರೇಂದ್ರ ಮೋದಿ ಅವರು ಬಹುಬೇಗ ಎಚ್ಚರಗೊಂಡಿದ್ದಾರೆ. ಇಷ್ಟು ದಿನ ಮೌನ ವಹಿಸಿದ್ದು ಏಕೆ? ಜವಾಬ್ದಾರಿ ನಿರ್ವಹಣೆಯಲ್ಲಿವಿಫಲವಾಗಿ ರುವ ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ವಜಾ ಮಾಡಲು ಹೆದರು ತ್ತಿರು ವುದು ಏಕೆ? ತ್ವರಿತ ನ್ಯಾಯಾಲಯ ರಚನೆಯಿಂದ ಏನು ಸಾಧಿಸಿದಂತೆ ಆಗಲಿದೆ. ಲಕ್ಷಾಂತರ ವಿದ್ಯಾರ್ಥಿಗಳ ಹಿತಕ್ಕಿಂತ ಒಬ್ಬ ಸಹೋದ್ಯೋಗಿಯನ್ನು ರಕ್ಷಣೆ ಮಾಡುವುದೇ ಪ್ರಧಾನಿಯವರಿಗೆ ಮುಖ್ಯವಾಗಿಯೇ?’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.